ಗ್ರಾಮ ಪಂಚಾಯತ್ ಸದಸ್ಯೆಯ ಪುತ್ರನ ಮೇಲೆ ಹಲ್ಲೆ ನಡೆಸಿ ಕೊಲೆ| ರಾಯಚೂರು ಜಿಲ್ಲೆಯ ಲಿಂಗಸುಗೂರು ಗಡದನಾಳ ಗ್ರಾಮದಲ್ಲಿ ನಡೆದ ಘಟನೆ| ಗ್ರಾಮ ಪಂಚಾಯ್ತಿಗೆ ನೂತನವಾಗಿ ಆಯ್ಕೆಯಾಗಿದ್ದ ಹಣಮಂತಮ್ಮ ಅವರ ಪುತ್ರ ಶರಣಬಸವ ಕೊಲೆಗೀಡಾದ ದುರ್ದೈವಿ|
ಲಿಂಗಸುಗೂರು(ಫೆ.17): ರಾಜಕೀಯ ದ್ವೇಷ ಸಾಧಿಸಿ ಪರಾಭವಗೊಂಡಿದ್ದ ತಂಡದವರು ಜಯ ಸಾಧಿಸಿದ್ದ ಸದಸ್ಯೆಯ ಪುತ್ರನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಲಿಂಗಸುಗೂರು ತಾಲೂಕಿನ ಗಡದನಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗ್ರಾಮ ಪಂಚಾಯ್ತಿಗೆ ನೂತನವಾಗಿ ಆಯ್ಕೆಯಾಗಿದ್ದ ಹಣಮಂತಮ್ಮ ಅವರ ಪುತ್ರ ಶರಣಬಸವ (35) ಕೊಲೆಗೀಡಾಗಿದ್ದಾರೆ.
ಕುಡಿದು ಜಗಳ: ಯುವಕನನ್ನ ಕೊಂದ ಚಿಕ್ಕಪ್ಪ
ಹಣಮಂತಮ್ಮ ನೀಡಿದ ದೂರು ಆಧರಿಸಿ ಗಡದನಾಳ ಗ್ರಾಮದ ಜಗದೀಶ ಶರಣಪ್ಪ, ಯಮಬೂರ ಅಮರಪ್ಪ, ಮಹಾಂಕಾಳೆಪ್ಪ ಅಮರಪ್ಪ, ಬಸವರಾಜ ಶರಣಪ್ಪ, ಹನುಮಂತಿ ಅಮರಪ್ಪ, ದುರುಗಪ್ಪ ನಿಂಗಪ್ಪ, ಶರಣಬಸವ ಮಾನಪ್ಪ, ಕೆಂಚವ್ವ ಮಾನಪ್ಪ, ಯಲ್ಲವ್ವ ನಿಂಗಪ್ಪ, ನಿಂಗಪ್ಪ ಅಮರಪ್ಪ ವಿರುದ್ಧ ಲಿಂಗಸುಗೂರು… ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.