ಪಿಡಿಒ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಂಬಂಧಿ ಕಿರುಕುಳದಿಂದ ಬೇಸತ್ತ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಕೊಪ್ಪಳ, (ಜ.26): ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಮೈದುನನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ್ದ ಕಂಪ್ಯೂಟರ್ ಆಪರೇಟರ್ ಸಾವನ್ನಪ್ಪಿದ್ದಾನೆ.
ಕೊಪ್ಪಳದ ಕುಷ್ಟಗಿ ತಾಲ್ಲೂಕಿನ ಅಂಟರಠಾಟಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಜಶೇಖರ್ ತಮ್ಮಣ್ಣವರ ಮೃತಪಟ್ಟ ಕಂಪ್ಯೂಟರ್ ಆಪರೇಟರ್.
ವಾರಪತ್ರಿಕೆ ಸಂಪಾದಕನ ಕಿರುಕುಳ, ಪಿಡಿಒ ಆತ್ಮಹತ್ಯೆಗೆ ಯತ್ನ
ಜನವರಿ 20ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದ ರಾಜಶೇಖರ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಇಂದು (ಬಾನುವಾರ) ಕೊನೆಯುಸಿರೆಳೆದಿದ್ದಾನೆ.
ಈ ಹಿನ್ನೆಲೆಯಲ್ಲಿ ರಾಜಶೇಖರ್ ಸಂಬಂಧಿಕರು ಗ್ರಾಮ ಪಂಚಾಯಿತಿ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ್ದು, ಕಿರುಕುಳ ನೀಡಿದ ಪಿಡಿಓ ಅಮಿನಸಾಬ್ , ಅಧ್ಯಕ್ಷೆ ಮಹಾದೇವಿ ಮೈದುನನ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿಷಯ ತಿಳಿದು ಹನಮಸಾಗರ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.