Chitradurga: ಮೋದಿ ಕೇರ್ ನಲ್ಲಿ ಭಾಗಿಯಾಗಿದ್ದ 8 ಮಂದಿ ಸರ್ಕಾರಿ ಶಿಕ್ಷಕರು ಅಮಾನತು

By Suvarna News  |  First Published Feb 14, 2023, 7:17 PM IST
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ದುರಾಸೆಗೆ ಸಿಲುಕಿದ‌‌ ಸರ್ಕಾರಿ ಶಾಲೆ ಶಿಕ್ಷಕರು, ಮೋದಿ ಕೇರ್ ನಲ್ಲಿ ಭಾಗಿಯಾಗಿದ್ದ 8 ಮಂದಿ ಸರ್ಕಾರಿ ಶಾಲೆ ಶಿಕ್ಷಕರು ಅಮಾನತು. ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ರವಿಶಂಕರ್ ರೆಡ್ಡಿ ಆದೇಶ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಫೆ.14): ಹಣ ಅಂದ್ರೆ ಸಾಕು ಹೆಣವು ಬಾಯಿ ಬಿಡುತ್ತದೆಂಬ ಮಾತಿದೆ. ಆದ್ರೆ  ಚಿತ್ರದುರ್ಗ ಜಿಲ್ಲೆಯ ಸರ್ಕಾರಿ   ಶಿಕ್ಷಕರು ಹಣದಾಸೆಗೆ ಸಿಲುಕಿ ಚೈನ್ ಲಿಂಕ್ ಬಿಸಿನೆಸ್ಸ್ ಮಾಡಿ ಸರ್ಕಾರಿ ಕೆಲಸವನ್ನು ಕಳೆದು ಕೊಳ್ಳುವ ಭೀತಿಯಲ್ಲಿ ಇದ್ದಾರೆ. ಶಾಲಾ ಶಿಕ್ಷಕರು ಅಂದ್ರೆ ಎಲ್ರೂ ಗೌರವಿಸ್ತೇವೆ. ಆದ್ರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ದುರಾಸೆಗೆ ಸಿಲುಕಿದ‌‌ ಸರ್ಕಾರಿ ಶಾಲೆ ಶಿಕ್ಷಕರು ಅನಧಿಕೃತ ಖಾಸಗಿ ಬಿಸಿನೆಸ್ ಮಾಡ್ತಿದ್ದಾರಂತೆ. ಈ ವ್ಯವಹಾರ ಮಾಡುವ ಆಸಾಮಿಗಳು, ವಿದೇಶಿ ವಸ್ತುಗಳನ್ನು ಸ್ವದೇಶಿ ವಸ್ತುಗಳೆಂದು ಜನರನ್ನು ನಂಬಿಸಿ ದುಬಾರಿ ಬೆಲೆಗೆ ಮಾರಾಟ ಮಾಡ್ತಾ ವಂಚಿಸ್ತಿದ್ದು, ಮೋದಿಯವರ ಹೆಸರಿನ ಕಂಪನಿಯಾಗಿರುವ ಮೋದಿ ಕೇರ್ ನಲ್ಲಿ ವ್ಯವಹಾರ ಮಾಡ್ತಾ ಅವರ ಹೆಸರಿಗೆ ಮಸಿ ಬಳೆಯುತಿದ್ದಾರೆಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ. ಇಂತವರ ವಿರುದ್ಧ  ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿದ್ದಾರೆ.

Latest Videos

undefined

ಇನ್ನೂ ಈ ಬಗ್ಗೆ ಚಿತ್ರದುರ್ಗ ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ಕೇಳಿದಾಗ  ಡಯಟ್ ಪ್ರಾಚಾರ್ಯರು ಹಾಗು ಡಿಡಿಪಿಐ ಜಂಟಿಯಾಗಿ ಪ್ರಕರಣದ ತನಿಖೆ‌ ನಡೆಸಿದ್ದು, 16 ಜನ  ಶಿಕ್ಷಕರ  ವಿರುದ್ಧ ಈಗಾಗಲೇ ಶಿಸ್ತು ಕ್ರಮ ಕೈಗೊಂಡಿದ್ದೇವೆ. ಅವರಲ್ಲಿ  8 ಜನ ಶಿಕ್ಷಕರು  ಬಿಸಿನೆಸ್ ಮಾಡಿರೋದು ದೃಡವಾಗಿದ್ದು. ಕೇಳಿದ ಮಾಹಿತಿಗೆ ಯಾವುದೇ ಪ್ರತಿಕ್ರಿಯೆ ನೀಡದಿರುವ ಪರಿಣಾಮ ಅವರನ್ನು ಕರ್ತವ್ಯದಿಂದ ಅಮಾನತ್ತು ಗೊಳಿಸಿದ್ದೇವೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ತಿಳಿಸಿದ್ದಾರೆ.

POCSO: ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕ- ಶಿಕ್ಷಕಿಯ ಮೇಲೆ ಪೋಕ್ಸೋ ಕೇಸ್‌

ಚಿತ್ರದುರ್ಗ ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ಶಿಕ್ಷಕರು ಮೋದಿ ಕೇರ್ ಚೈನ್ ಲಿಂಕ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ವೃತ್ತಿಯನ್ನು ದುರ್ಬಳಕೆ ಮಾಡಿಕೊಂಡು ತಿಂಗಳಿಗೆ 10,000 ರೂ.ಗಳಿಂದ 12 ಸಾವಿರ ರೂಪಾಯಿ ಕಮಿಷನ್ ಪಡೆದು ದಂಧೆ ನಡೆಸುತ್ತಿದ್ದಾರೆ. ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷಕರು ತಮ್ಮ ವೃತ್ತಿಯನ್ನು ದುರುಪಯೋಗಪಡಿಸಿಕೊಂಡು ರಾಜ್ಯಾದ್ಯಂತ ಮೋದಿ ಕೇರ್​​ನಲ್ಲಿ ಭಾಗಿಯಾಗಿ ವ್ಯವಹಾರ ನಡೆಸುತ್ತಿದ್ದಾರೆ. ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಶಿಕ್ಷಕರ ನೇಮಕಾತಿ ಹಗರಣ; ಮತ್ತೆ 8 ಶಿಕ್ಷಕರು ಸೆರೆ

ಒಟ್ಟಾರೆ  ಹಣದಾಸೆಗೆ ಸಿಲುಕಿದ ಶಿಕ್ಷಕರು ಖಾಸಗಿ (ಮೋದಿಕೇರ್) ಕಂಪನಿ‌ಯ ಹೆಸರಲ್ಲಿ ಚೈನ್ ಲಿಂಕ್ ಬಿಸಿನೆಸ್ ಮಾಡಿ ಪಾಠ ಮಾಡುವ ಪುಣ್ಯದ ಕೆಲಸ ಕಳೆದು ಕೊಂಡಿದ್ದಾರೆ. ಇನ್ನಾದ್ರು ಇಂತಹ ಚೈನ್ ಲಿಂಕ್ ಬಿಸಿನೆಸ್ ನಂಬಿ  ನಿಷ್ಠೆಯಿಂದ ಪಾಠ ಮಾಡೊದನ್ನ ಬಿಡದಿರಲಿ ಅನ್ನೋದು 
ಎಲ್ಲರ ಆಶಯ.

click me!