
ಮುಂಬೈ(ಫೆ.14): ವಿಶ್ವವೇ ಪ್ರೇಮಿಗಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದೆ. ಯವ ಮನಸ್ಸುಗಳು ಸ್ವಚ್ಚಂದ ಹಕ್ಕಿಯಂತೆ ಹಾರಾಡಿದರೆ,ಹಲವರು ಪ್ರೀತಿ ಪಾತ್ರರ ಜೊತೆ ಕಾಲ ಕಳೆದು ಅರ್ಥಪೂರ್ಣವಾಗಿ ಸಂಭ್ರಮಿಸಿದ್ದಾರೆ. ಇನ್ನೂ ಕೆಲವರು ಉಡುಗೊರೆ ನೀಡಿ ಇಂಪ್ರೆಸ್ ಮಾಡಿದ್ದಾರೆ. ಹೀಗೆ ಮುಂಬೈನ ಮಹಿಳೆಯೊಬ್ಬರಿಗೆ ಸರ್ಪ್ರೈಸ್ ಗಿಫ್ಟ್ ಬಂದಿದೆ. ಆದರೆ ಈ ಉಡುಗೊರೆ ಪಡೆಯಲು ಹೋದ ಮಹಿಳೆ ಬರೋಬ್ಬರಿ 3.68 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇದೀಗ ಖದೀಮರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಹಣ ವಾಪಸ್ ಕೊಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಖಾರ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಿವಾಸಿಯಾಗಿರುವ 51 ವರ್ಷದ ಮಹಿಳೆಯ ಜೀವನ ಯಾವುದೇ ಅಡೆ ತಡೆ ಇಲ್ಲದೆ, ಹೆಚ್ಚಿನ ಸಮಸ್ಯೆಗಳಿಲ್ಲದೆ ಸಾಗುತ್ತಿತ್ತು. ಇತ್ತೀಚೆಗೆ ಈ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಹೀಗೆ ಇನ್‌ಸ್ಟಾಗ್ರಾಂನಲ್ಲಿ ಅಲೆಕ್ಸ್ ಲೊರೆನ್ಜೋ ಅನ್ನೋ ಹೆಸರಿನಲ್ಲಿ ವ್ಯಕ್ತಿಯೊಬ್ಬರ ಪರಿಚಯವಾಗಿದ್ದಾರೆ. ತಾನು ಲಂಡನ್ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಅಲೆಕ್ಸ್ ಆತ್ಮೀಯವಾಗಿ ಚಾಟ್ ಮಾಡಿದ್ದಾನೆ. ಇಷ್ಟೇ ಆಗಿದ್ದರೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ಬರುತ್ತಿರಲಿಲ್ಲ.
ಜಾಕ್ವೆಲಿನ್‌ಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಿದ ಸುಕೇಶ್ ಚಂದ್ರಶೇಖರ್: 'ಗೋಲ್ಡ್ ಡಿಗ್ಗರ್' ಎಂದಿದ್ದು ಯಾರಿಗೆ?
ಪ್ರೇಮಿಗಳ ದಿನಾಚರಣೆಯನ್ನು ಟಾರ್ಗೆಟ್ ಮಾಡಿದ ಅಲೆಕ್ಸ್ ಮಹಿಳೆಯಿಂದ ಹಣ ದೋಚಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಬಳಿಕ ಇನ್‌ಸ್ಟಾಗ್ರಾಂ ಮೂಲಕ ಮಹಿಳೆಗೆ ಸಂದೇಶ ರವಾನಿಸಿದ್ದಾನೆ. ತಾನು ಪ್ರೇಮಿಗಳ ದಿನಾಚರಣೆಗೆ ಸರ್ಪ್ರೈಸ್ ಗಿಫ್ಟ್ ಕಳುಹಿಸಿದ್ದೇನೆ. ಆದರೆ ಪಾರ್ಸೆಲ್ ಹಾಗೂ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪಾರ್ಸೆಲ್ ಬಂದಾಗ ಕೊರಿಯರ್ ಕಂಪನಿಗೆ 750 ಯುಕೆ ಪೌಂಡ್ ಮೊತ್ತ ಪಾವತಿಸಲು ಸೂಚಿಸಿದ್ದಾನೆ.
ಪ್ರೇಮಿಗಳ ದಿನಾಚರಣೆಯಂದು ಗಂಡನಿಂದಲೂ ಇದುವರೆಗೆ ಉಡುಗೊರೆ ಬಂದಿಲ್ಲ. ಆದರೆ ಈಗಷ್ಟೇ ಪರಿಚಯವಾಗಿರುವ ಅಲೆಕ್ಸ್ ಪ್ರೀತಿಯಿಂದ ಉಡುಗೊರೆ ಕಳುಹಿಸಿದ್ದಾನೆ. ಹೀಗಾಗಿ 750 ಪೌಂಡ್ ಪರ್ವಾಗಿಲ್ಲ ಎಂದು ನಿರ್ಧರಿಸಿದ್ದ ಮಹಿಳೆಗೆ ಮೊದಲ ಎಡವಟ್ಟು ಮಾಡಿದ್ದಾರೆ. ಅಲೆಕ್ಸ್ ಸಂದೇಶ ಬಂದ ಮರುದಿನ ಕೊರಿಯರ್ ಕಂಪನಿ ಹೆಸರಿನಲ್ಲಿ ಕರೆಯೊಂದು ಬಂದಿದೆ. ನಿಮಗೆ ಬಂದಿರುವ ಪಾರ್ಸೆಲ್ ನಿಗದಿತ ಮಿತಿಗಿಂತ ಹೆಚ್ಚಾಗಿದೆ. ಇದನ್ನುನಿಮಗೆ ತಲುಪಿಸಲು ಹೆಚ್ಚುವರಿ ಹಣ ಪಾವತಿಸಬೇಕು. ಪ್ರತಿ ಕೊರಿಯರ್‌ನಲ್ಲಿ ಒಂದೊಂದು ವಿಭಾಗದಲ್ಲಿ ಮಾತ್ರ ಪಾರ್ಸೆಲ್ ಕಳುಹಿಸಬೇಕು. ಅದಕ್ಕೆ ತಕ್ಕಂತೆ ಹಣ ಪಾವತಿಸಬೇಕು. ನಿಮಗೆ ಪಾರ್ಸೆಲ್ ಕಳುಹಿಸಿರುವರು ಸಂಪೂರ್ಣ ಮೊತ್ತ ಪಾವತಿಸಿಲ್ಲ. ಹೀಗಾಗಿ ಹೆಚ್ಚುವರಿಯಾಗಿ 72,000 ರೂಪಾಯಿ ಪಾವತಿಸಲು ಸೂಚಿಸಿದ್ದಾರೆ. ಈ ಮೊತ್ತವನ್ನು ಕ್ಯೂಆರ್ ಕೋಡ್ ಮೂಲಕ ಪಾವತಿಸಿದ ಮಹಿಳೆ ಪಾರ್ಸೆಲ್ ಪಡೆಯಲು ಮತ್ತಷ್ಟು ಕುತೂಹಲಗೊಂಡಿದ್ದಾರೆ.
Valentine Day : 40 ವರ್ಷ ದಾಟಿದ್ಮೇಲೆ ಹೀಗಿರಲಿ ನಿಮ್ಮ ಪ್ರೇಮಿಗಳ ದಿನ
ಇನ್ನೇನು ಅಲೆಕ್ಸ್ ಕಳುಹಿಸಿದ ಸರ್ಪ್ರೈಸ್ ಗಿಫ್ಟ್ ಕೈಸೇರಬೇಕು ಅನ್ನುವಷ್ಟರಲ್ಲೇ ಕೊರಿಯರ್ ಕಂಪನಿಯಿಂದ ಮತ್ತೊಂದು ಕರೆ ಬಂದಿದೆ. ನಿಮಗೆ ಕಳುಹಿಸಿರುವ ಪಾರ್ಸೆಲ್‌ನಲ್ಲಿ ಯೂರೋಪಿಯನ್ ಕರೆನ್ಸಿ ಪತ್ತೆಯಾಗಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಕರೆನ್ಸಿಗಳು ಪತ್ತೆಯಾಗಿದೆ. ಸ್ಕ್ರಾನಿಂಗ್‌ನಲ್ಲಿ ನೋಟುಗಳಿರುವುದು ಬೆಳಕಿಗೆ ಬಂದಿದೆ. ಇದು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಬರಲಿದೆ.ಹೀಗಾಗಿ ನೀವು ದಂಡದ ರೂಪದಲ್ಲಿ 2.65 ಲಕ್ಷ ರೂಪಾಯಿ ಪಾವತಿಸಬೇಕು ಎಂದಿದ್ದಾರೆ. ಅಕ್ರಣ ಹಣ ವರ್ಗಾವವಣೆ ಪ್ರಕರಣ ಎಂದಾಗ ಬೆದರಿದ ಮಹಿಳೆ 2.65 ಲಕ್ಷ ರೂಪಾಯಿ ಪಾವತಿಸಿದ್ದಾರೆ.
ಆದರೆ ಗಿಫ್ಟ್ ಬರಲಿಲ್ಲ. ಮತ್ತೆ ಕೊರಿಯರ್ ಕಂಪನಿಯಿಂದ ಕರೆ ಬಂದಿದೆ. 98,000 ರೂಪಾಯಿ ಪಾವತಿಸಬೇಕು ಎಂದಿದ್ದಾರೆ. ಈ ವೇಳೆ ತಾನು ಮೋಸ ಹೋಗಿರುವುದು ಮಹಿಳೆಗೆ ಮನದಟ್ಟಾಗಿದೆ. ಅಲೆಕ್ಸ್ ಕಳುಹಿಸಿದ ಪ್ರೇಮಿಗಳ ದಿನಾಚರಣೆ ಗಿಫ್ಟ್ ಮೋಸದ ಜಾಲದಲ್ಲಿ ತಾನು ಬಿದ್ದಿರುವದು ಗಮನಕ್ಕೆ ಬಂದಿದೆ. ಅಷ್ಟರಲ್ಲೇ 3.68 ಲಕ್ಷ ರೂಪಾಯಿ ಕಳೆದುಕೊಂಡಾಗಿತ್ತು. ದಿಕ್ಕು ತೋಚದ ಮಹಿಳೆ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಸೆಕ್ಷನ್ 420 ಅಡಿ ಪ್ರಕರಣ ದಾಖಲಿಸಿಕೊಂಡ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ