* ಅಸ್ವಾಭಾವಿಕ ಸೆಕ್ಸ್ ಗೆ ಗಂಡನ ಒತ್ತಾಯ
* ಗಂಡನ ಕುಟುಂಬದಿಂದ ವರದಕ್ಷಿಣೆ ಕಿರುಕುಳ
* ನೊಂದು ಪೊಲೀಸರ ಮೊರೆ ಹೋದ ಮಹಿಳೆ
* ಅವಳಿ ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ
ಮುಂಬೈ(ಆ. 20) ಪ್ರತಿಷ್ಠಿತ ಹಣಕಾಸು ಸಂಸ್ಥೆ ಉಪಾಧ್ಯಕ್ಷರಾಗಿರುವ ಉದ್ಯಮಿ ಪತಿ ವಿರುದ್ಧ 40 ವರ್ಷದ ಪತ್ನಿ ದೂರು ದಾಖಲಿಸಿದ್ದಾರೆ. ಅವಳಿ ಮಕ್ಕಳ
ತಾಯಿಯಾಗಿರುವ ಮಹಿಳೆ ಗಂಡನ ವಿರುದ್ಧ ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯ ಮತ್ತು ವರದಕ್ಷಿಣೆ ಆರೋಪ ಹೊರಿಸಿದ್ದಾರೆ.
ಮಲ್ಟಿ-ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತ ಮಹಿಳೆ ಮುಂಬೈ ಉಪನಗರದಲ್ಲಿರುವ ಪೊವಾಯಿ ಪೊಲೀಸ್ ಠಾಣೆಗೆ ತನ್ನ ಪತಿ ಸೇರಿದಂತೆ ಆತನ
ಕುಟುಂಬದ ಎಂಟು ಸದಸ್ಯರ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ.
ಯೋನಿ ಮತ್ತು ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟಿದ್ದ 3 ಮಹಿಳೆಯರು!
ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಆದರೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೇ 2013 ರಲ್ಲಿ ತಮ್ಮ
ಮದುವೆಯಾಗಿದ್ದು, ಮದುವೆಯ ನಂತರ, ಅತ್ತೆ, ಮಾವ ಮತ್ತು ಇತರ ಕುಟುಂಬ ಸದಸ್ಯರು ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ಈಗ ನಿಸರ್ಗಕ್ಕೆ
ವಿರುದ್ಧವಾದ ರೀತಿಯಲ್ಲಿ ಸೆಕ್ಸ್ ಗೆ ಒತ್ತಾಯ ಮಾಡುತ್ತಿದ್ದು ದೂರು ನೀಡುತ್ತಿದ್ದೇನೆ ಎಂದು ನೊಂದ ಮಹಿಳೆ ತಿಳಿಸಿದ್ದಾರೆ.
ತವರಿನಿಂದ ಹಣ ತೆಗೆದುಕೊಂಡು ಬಾ ಎಂದು ಪ್ರತಿದಿನ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಗಂಡನ ಮನೆಯನ್ನು ತೊರೆದಿರುವ ಮಹಿಳೆ ತನ್ನ ಹೆತ್ತವರ
ಜತೆ ವಾಸ ಮಾಡುತ್ತಿದ್ದಾರೆ.