ಬಿಗ್ ಬಾಸ್ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ಗೆ ಮತ್ತೆ ಸಂಕಷ್ಟ ಶುರುವಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬನಶಂಕರಿ ಮೂಲದ ಪರಮೇಶ್ ಎಂಬುವರು ದೂರು ನೀಡಿದ್ದಾರೆ.
ಬೆಂಗಳೂರು (ಫೆ.01): ಬಿಗ್ ಬಾಸ್ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ಗೆ ಮತ್ತೆ ಸಂಕಷ್ಟ ಶುರುವಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬನಶಂಕರಿ ಮೂಲದ ಪರಮೇಶ್ ಎಂಬುವರು ದೂರು ನೀಡಿದ್ದಾರೆ. ಡ್ರೋನ್ ಪ್ರತಾಪ್ ನಾಗರೀಕ ವಿಮಾನಯಾನ ಇಲಾಖೆ (ಡಿಜಿಸಿಎ) ಡ್ರೋನ್ ಮಾರಾಟ ಮಾಡುತ್ತಿರೋ ಆರೋಪ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಡ್ರೋನ್ಣ್ ಪ್ರತಾಪ್ ನಡೆಸ್ತಿರೋ ಡ್ರೋನಾರ್ಕ್ ಏರೋಸ್ಪೇಸ್ ಪ್ರೈ. ಲಿ ಸಂಸ್ಥೆ ಪರವಾನಗಿ ಪಡೆದಿಲ್ಲ. ಅನುಮತಿ ಇಲ್ಲದೆ ಡ್ರೋನ್ ಮಾರಾಟ ಮಾಡುವ ಮೂಲಕ ಜನರಿಗೆ ವಂಚನೆ ಮಾಡಲಾಗುತ್ತಿದೆ. ದೂರಿನಲ್ಲಿ ಪರವಾನಗಿ ಇಲ್ಲದ ಡ್ರೋನ್ ಮಾರಾಟ ಮಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಸದ್ಯ ಪರಮೇಶ್ ದೂರು ಆಧರಿಸಿ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ.
ಡ್ರೋನ್ ನೀಡ್ತೇನೆಂದು 35 ಲಕ್ಷ ಟೋಪಿ?: ಬಿಬಿಎಂಪಿ ಅಧಿಕಾರಿಗಳು ಮಾನನಷ್ಟ ಮೊಕದ್ದಮೆ ಕೇಸ್ ದಾಖಲು ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಈ ಸಂದರ್ಭದಲ್ಲಿ ಅವರು ದುಃಖಕರ ವಿಷಯವೊಂದನ್ನು ಹಂಚಿಕೊಂಡಿದ್ದು, ಅದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲ ದಿನಗಳ ಹಿಂದೆ ತಮ್ಮ ನೋವಿನ ದಿನಗಳ ಬಗ್ಗೆ ಮಾತನಾಡಿದ್ದ ಪ್ರತಾಪ್, ಕೋವಿಡ್ ಸಮಯದಲ್ಲಿ ತಮಗೆ ಅಧಿಕಾರಿಗಳು ಹಿಂಸೆ ಕೊಟ್ಟಿರುವುದಾಗಿ ಹೇಳಿದ್ದರು. ಕೋವಿಡ್ ಸೋಂಕು ತಗುಲಿತ್ತು. ಕ್ವಾರಂಟೈನ್ ಮುಗಿಸಿ ಚಿಕ್ಕಮಗಳೂರಿಗೆ ಹೋದೆ. ಆದರೆ ನನ್ನ ಮೇಲೆ ಪ್ರಕರಣ ದಾಖಲು ಮಾಡಲಾಯ್ತು. ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಚಿತ್ರಹಿಂಸೆ ಕೊಟ್ಟರು.
ತಲೆ-ತಲೆಗೆ ಹೊಡೆದರು, ಕೆಟ್ಟದಾಗಿ ಮಾತನಾಡಿದರು ಎಂದು ಪ್ರತಾಪ್ ಹೇಳಿದ್ದರು. ಅದೇ ಸಮಯದಲ್ಲಿ ಅಪ್ಪ-ಅಮ್ಮನ ಬಳಿ ನನ್ನ ಬಗ್ಗೆ ಇಲ್ಲ-ಸಲ್ಲದ ದೂರುಗಳನ್ನು ಹೇಳಿದರು. ವಿಷವಿಟ್ಟು ಸಾಯಿಸಿ ಎಂದೆಲ್ಲ ಐಡಿಯಾ ಕೊಟ್ಟರು ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇವೆಲ್ಲಾ ಸುಳ್ಳು ಎಂದು ಬಿಬಿಎಂಪಿ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಇದಾಗಲೇ ಕೆಲವರು ಡ್ರೋನ್ ವಿಷಯದಲ್ಲಿ ಪ್ರತಾಪ್ ಕಾಗೆ ಹಾರಿಸಿದ್ದ ಎಂದು ಗಂಭೀರ ಆರೋಪ ಮಾಡಿದ್ದಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಮೂಲದ ಸಾರಂಗ್ ಮಾನೆ ಎನ್ನುವವರು ಇದೀಗ ಇನ್ನೊಂದು ಆರೋಪ ಮಾಡಿದ್ದಾರೆ.
ಅವಮಾನ-ಆಕ್ರೋಶಕ್ಕೆ ಯಶಸ್ಸಿನ ಉತ್ತರ: ಬಿಗ್‌ಬಾಸ್ ಕನ್ನಡ ಸೀಸನ್ 10 ರನ್ನರ್ ಅಪ್ ಡ್ರೋನ್ ಪ್ರತಾಪ್!
9 ಡ್ರೋನ್ ಕೊಡೋದಾಗಿ ಹೇಳಿದ್ದ ಪ್ರತಾಪ್ ತಮಗೆ ವಂಚಿಸಿರುವುದಾಗಿ ಅವರು ಹೇಳಿದ್ದಾರೆ. ಮುಂಗಡ ಹಣವಾಗಿ 35 ಲಕ್ಷದ 75 ಸಾವಿರ ರೂಪಾಯಿ ನೀಡಲಾಗಿತ್ತು. ಆದರೆ ನಾನು ಹೇಳಿದಂತೆ ಡ್ರೋನ್ ನಿಡಲಿಲ್ಲ. ತಾವು ದುಡ್ಡು ವಾಪಸ್ ನೀಡುವಂತೆ ಇ-ಮೇಲ್ ಮೂಲಕ ವಾರ್ನ್ ಕೂಡ ಮಾಡಿದ್ದರೂ ದುಡ್ಡು ಕೊಟ್ಟಿಲ್ಲ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಎಕ್ಸಿಬಿಶನ್ ಸಂದರ್ಭದಲ್ಲಿ ಪ್ರತಾಪ್ ಪರಿಚಯವಾಗಿತ್ತು. ಕೃಷಿ ಜಮೀನಿಗೆ ಔಷಧಿ ಸಿಂಪಡಿಸುವ ಸಲುವಾಗಿ ಡ್ರೋನ್ ಕೇಳಿದ್ದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಮ್ಮಿಬ್ಬರ ನಡುವೆ ಒಪ್ಪಂದ ಕೂಡ ಆಗಿದೆ. 38 ಲಕ್ಷ ರೂಪಾಯಿ ಹಣ ಕಳಿಸಿದ್ದರ ಬಗ್ಗೆ ದಾಖಲೆ ಇದೆ. ಆದರೆ ಡ್ರೋನ್ ನೀಡಲೂ ಇಲ್ಲ, ಹಣನೂ ವಾಪಸ್ ಮಾಡಿಲ್ಲ ಎಂದಿದ್ದಾರೆ.