ಕೊರೋನಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ ಮಹಿಳೆ| ಮಹಿಳೆಯ ಮೃತ ದೇಹವನ್ನು ಮನೆಗೆ ಒಯ್ಯುವ ಸಂದರ್ಭದಲ್ಲಿ ಕತ್ತಿನಲ್ಲಿದ್ದ 80 ಗ್ರಾಂ ಮಾಂಗಲ್ಯ ಸರ, 8 ಗ್ರಾಂ ತಾಳಿ, 4 ಗ್ರಾಂ ಗುಂಡುಗಳು ನಾಪತ್ತೆ| ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ ಮೃತರ ಸಂಬಂಧಿಕರು|
ಚಿಕ್ಕಬಳ್ಳಾಪುರ(ಮೇ.03): ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿನಿಂದ ಮೃತಪಟ್ಟ ಮಹಿಳೆಯಿಂದ ಸುಮಾರು 90 ಗ್ರಾಂ ಚಿನ್ನ ಕಳವಾಗಿದೆ ಎಂಬ ಆರೋಪ ಕೇಳಿಬಂದಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿ ವಾಸಿ ಲಕ್ಷ್ಮಮ್ಮ ಇತ್ತೀಚೆಗೆ ಕೊರೋನಾ ಸೋಂಕು ದೃಢಪಟ್ಟು ಉಸಿರಾಟದ ತೊಂದರೆಯಿಂದ ಚಿಕ್ಕಬಳ್ಳಾಪುರದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.
undefined
1ನೇ ಅಲೆಗಿಂತ 2ನೇ ಅಲೆ ಎಷ್ಟು ಡೇಂಜರಸ್ : ಕೊರೋನಾ ಕರಾಳತೆ
ಕಳೆದ ಶನಿವಾರ ರಾತ್ರಿ ಲಕ್ಷ್ಮಮ್ಮ ಕೊರೋನಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದರು. ಆದರೆ ಮಹಿಳೆಯ ಮೃತ ದೇಹವನ್ನು ಮನೆಗೆ ಒಯ್ಯುವ ಸಂದರ್ಭದಲ್ಲಿ ಕತ್ತಿನಲ್ಲಿದ್ದ 80 ಗ್ರಾಂ ಮಾಂಗಲ್ಯ ಸರ, 8 ಗ್ರಾಂ ತಾಳಿ, 4 ಗ್ರಾಂ ಗುಂಡುಗಳು ನಾಪತ್ತೆಯಾಗಿವೆ. ಕೇವಲ ಕಾಲು ಚೈನು ಉಳಿಸಿ, ಉಳಿದಂತೆ ಆಕೆಯ ಕತ್ತಿನಲ್ಲಿದ್ದ ಲಕ್ಷಾಂತರ ರು, ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು ಎಂದು ಮೃತರ ಸಂಬಂಧಿಕರು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona