ಹುಬ್ಬಳ್ಳಿಯಲ್ಲಿ ಮಾಟ, ಮಂತ್ರದ ನೆಪವೊಡ್ಡಿ ಚಿನ್ನಾಭರಣ ಕಳ್ಳತನ

By Kannadaprabha News  |  First Published Feb 10, 2024, 4:00 AM IST

ಮೋಸ ಹೋದ ಮಹಿಳೆ ಬೆಂಡಿಗೇರಿ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.


ಹುಬ್ಬಳ್ಳಿ(ಫೆ.10):  ಮಾಟ ಮಂತ್ರದ ನೆಪವೊಡ್ಡಿ ಆಗಂತುಕನೊಬ್ಬ ಚಿನ್ನಾಭರಣ ಎಗರಿಸಿಕೊಂಡು ಹೋದ ಘಟನೆ ಇಲ್ಲಿಯ ಮಿಲ್ಲತನಗರದಲ್ಲಿ ನಡೆದಿದೆ. 

ಮಹಿಳೆಯೊಬ್ಬರನ್ನು ಭೇಟಿ ಮಾಡಿದ ಅಪರಿಚಿತನೊಬ್ಬ ನಿಮ್ಮ ಮನೆಗೆ ಮಾಟಮಂತ್ರ ಮಾಡಿಸಿದ್ದಾರೆ. ನಿಮಗೆ ದೊಡ್ಡ ತೊಂದರೆ ತಪ್ಪಿದ್ದಲ್ಲ ಎಂದು ಹೆದರಿಸಿದ್ದಾನೆ. ಒಟ್ಟು ₹ 1.65 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮಹಿಳೆಯ ಮಗಳ ಕೊರಳಲ್ಲಿ ಇದ್ದುದ್ದನ್ನು ತೆಗೆಯಿಸಿ ಚಿಕ್ಕ ಮಣ್ಣಿನ ಗಡಿಗೆಗೆ ಹಾಕಿಸಿದ್ದಾನೆ. ಇನ್ನೊಂದು ಗಡಿಗೆಯಲ್ಲಿ ಲಿಂಬೆಹಣ್ಣು, ಸಣ್ಣ ಕಲ್ಲು ಹಾಕಿ ಹಸಿರು ಬಟ್ಟೆ ಸುತ್ತಿದ್ದನ್ನು ಕೊಟ್ಟಿದ್ದಾನೆ. 

Latest Videos

undefined

ಏಕಾಂಗಿ ಜೀವನ ನಡೆಸುತ್ತಿದ್ದ ವೃದ್ಧೆ; ಆಸ್ತಿ ವಿಚಾರಕ್ಕೆ ದುಷ್ಕರ್ಮಿಗಳಿಂದ ಹತ್ಯೆ!

ಚಿನ್ನಾಭರಣವಿದ್ದ ಗಡಿಗೆ ತೆಗೆದುಕೊಂಡು ಹೋಗಿದ್ದಾನೆ ಎಂದು ಮಹಿಳೆಯು ಬೆಂಡಿಗೇರಿ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

click me!