ನಕಲಿ ಸರ್ಕಾರಿ ಕಚೇರಿ ತೆರೆದು ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ. ವಂಚನೆ..!

By BK Ashwin  |  First Published Feb 4, 2023, 12:55 PM IST

ಇದು ನಿಜವಾಗಿಯೂ ಸರ್ಕಾರಿ ಕೆಲಸ ಎಂದು ನಂಬಿಸಲು ನಕಲಿ ಅಂಚೆ ಕಚೇರಿಗೆ ಬರಲು ಹೇಳಿ ಭಾರತೀಯ ಪೋಸ್ಟಲ್‌ ಸೇವೆಯಲ್ಲಿ ಪವನ್‌ ವರ್ಮಾ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ಗ್ಯಾಂಗ್‌ ಹಲವು ಯುವಕರನ್ನು ವಂಚಿಸುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. 


ಲಖನೌ (ಫೆಬ್ರವರಿ 4, 2023): ಸರ್ಕಾರಿ ಉದ್ಯೋಗಕ್ಕಾಗಿ ಪ್ರತಿ ವರ್ಷ ಕೋಟ್ಯಂತರ ಜನ ಹಾತೊರೆಯುತ್ತಿರುತ್ತಾರೆ. ಹಲವು ಉದ್ಯೋಗಾಕಾಂಕ್ಷಿಗಳು ಸರ್ಕಾರಿ ಕೆಲಸಕ್ಕಾಗಿ ಅನೇಕ ಅರ್ಜಿ ಹಾಕುವುದು, ಅನೇಕ ಪರೀಕ್ಷೆ ಬರೆಯುವುದನ್ನು ಮಾಡುತ್ತಿರುತ್ತಾರೆ ಇನ್ನು, ಅನೇಕರು ಲಂಚ ಕೊಟ್ಟು ಉದ್ಯೋಗ ಪಡೆಯಲು ಕಾಯುತ್ತಿರುತ್ತಾರೆ ಈ ಪೈಕಿ, ಅನೇಕರು ಲಂಚ ಕೊಟ್ಟರೂ ಸಹ ಉದ್ಯೋಗ ಸಿಗುವುದೇ ಇಲ್ಲ. ಇದೇ ರೀತಿ, ಉದ್ಯೋಗಾಕಾಂಕ್ಷಿಗಳನ್ನೇ ಬಂಡವಾಳವಾಗಿಸಿಟ್ಟುಕೊಂಡು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ. ಲಂಚ ಪಡೆದಿರುವ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌನಲ್ಲಿ ನಡೆದಿದೆ. ಆದರೆ, ಇಲ್ಲಿ ಕೇವಲ ಲಂಚ ಪಡೆದಿರುವುದು ಮಾತ್ರವಲ್ಲ, ಜನರಿಗೆ ನಂಬಿಕೆ ಬರಲೆಂದು ನಕಲಿ ಅಂಚೆ ಕಚೇರಿಯೊಂದನ್ನೇ ತೆರೆದಿದ್ದಾರೆ ನೋಡಿ..

ಲಖನೌನಲ್ಲಿ ಉದ್ಯೋಗ ಕೊಡಿಸೋದಾಗಿ ಗ್ಯಾಂಗ್‌ವೊಂದು ನಕಲಿ ಅಂಚೆ ಇಲಾಖೆ ಕಚೇರಿಯನ್ನೇ ತೆರೆದಿದೆ ನೋಡಿ. ಈ ಮೂಲಕ ಅನೇಕ ಯುವಕರಿಗೆ ವಂಚನೆ ಮಾಡಿದ್ದಾರೆ. ಉತ್ತರ ಪ್ರದೇಶ ಎಸ್‌ಟಿಎಫ್‌ ಈ ಗ್ಯಾಂಗ್‌ ಅನ್ನು ಪತ್ತೆ ಹಚ್ಚಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ರಾಹುಲ್‌ ಸಿಂಗ್, ಪವನ್‌ ವರ್ಮಾ, ಅಜಿತ್ ಸಿಂಗ್ ಹಾಗೂ ಅಂಕಿತ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಈ ಪೈಕಿ ಪವನ್, ಅಂಚೆ ಇಲಾಖೆಯಲ್ಲಿ ಕಾಂಟ್ರ್ಯಾಕ್ಟ್‌ ಮೇರೆಗೆ ಕೆಲಸ ಮಾಡುತ್ತಿದ್ದ ಎಂದೂ ತಿಳಿದುಬಂದಿದೆ.

Latest Videos

undefined

ಇದನ್ನು ಓದಿ: ಬ್ಯೂಸಿನೆಸ್ ಹೆಸ್ರಲ್ಲಿ ಕ್ರಿಕೆಟಿಗ ದೀಪಕ್ ಚಹಾರ್ ಪತ್ನಿಗೆ 10 ಲಕ್ಷ ರೂ ವಂಚನೆ, ಕಂಗಾಲಾದ ಜಯಾ!

ಇನ್ನು, ಈ ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್‌ಟಿಎಫ್‌ನ ಹೆಚ್ಚುವರಿ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್, ವಿಶಾಲ್‌ ವಿಕ್ರಮ್ ಸಿಂಗ್, ಆರೋಪಿ ಪವನ್‌ ಕುಮಾರ್‌ ರೈಲ್ವೆ ಪೋಸ್ಟಲ್‌ ಇಲಾಖೆಯ ರೈಲ್ವೆ ಮೇಲ್‌ ಸರ್ವೀಸ್‌ ಜಿಪಿಒನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬುದನ್ನು ರಾಹುಲ್‌ ಸಿಂಗ್ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಆಕಾಂಕ್ಷಾ ಶ್ರೀವಾಸ್ತವ ಹಾಗೂ ಮೋಹಿತ್‌ ಖರೆ ಎಂಬುವರು ನಕಲಿ ನೇಮಕಾತಿ ಪತ್ರಗಳನ್ನು ತಯಾರು ಮಾಡುತ್ತಿದ್ದರು. ಅವರು ಸಹ ಈ ಗ್ಯಾಂಗ್‌ನ ಸದಸ್ಯರು ಎಂದು ತಿಳಿದುಬಂದಿದೆ ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಇದು ನಿಜವಾಗಿಯೂ ಸರ್ಕಾರಿ ಕೆಲಸ ಎಂದು ನಂಬಿಸಲು ನಕಲಿ ಅಂಚೆ ಕಚೇರಿಗೆ ಬರಲು ಹೇಳಿ ಭಾರತೀಯ ಪೋಸ್ಟಲ್‌ ಸೇವೆಯಲ್ಲಿ ಪವನ್‌ ವರ್ಮಾ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ಗ್ಯಾಂಗ್‌ ಹಲವು ಯುವಕರನ್ನು ವಂಚಿಸುತ್ತಿದ್ದರು ಎಂದೂ ವಿಶಾಲ್‌ ವಿಕ್ರಮ್ ಸಿಂಗ್ ತಿಳಿಸಿದ್ದಾರೆ. ಹಾಗೆ, ಆಹಾರ ಕಾರ್ಪೊರೇಷನ್‌ ಹಾಗೂ ಐಆರ್‌ಸಿಟಿಸಿ ಇಲಾಖೆಯಲ್ಲಿ ಕೆಲಸಕ್ಕಾಗಿ ಉದ್ಯೋಗಾಕಾಂಕ್ಷಿಗಳು ಬಂದರೆ, ಅವರಿಗೆ ಆನಂದ್‌ ಮಿಶ್ರಾ ಎಂಬುವರನ್ನು ಭೇಟಿ ಮಾಡಿಸುತ್ತಿದ್ದರು. 

ಇದನ್ನೂ ಓದಿ: CBSE ಶಾಲೆ ಕುರಿತು ಸುಳ್ಳು ಆರೋಪ: ನನ್ನ ಬಂಧನವಾಗಿಲ್ಲ ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಸ್ಪಷ್ಟನೆ

ಇದೇ ರೀತಿ, ರಾಜಸ್ಥಾನದಲ್ಲೂ ಸಹ ಸ್ಥಳೀಯರ ನೆರವಿನ ಮೇರೆಗೆ ಸಿಆರ್‌ಪಿಎಫ್‌ನಲ್ಲಿ ಕೆಲಸ ಕೊಡಿಸೋದಾಗಿಯೂ ವಂಚಿಸಿದ್ದಾರೆ ಎಂದೂ ತಿಳಿದುಬಂದಿದೆ. ಪ್ರತಿ ಉದ್ಯೋಗಾಕಾಂಕ್ಷಿಗಳಿಂದ ಅವರು ಕೇಳಿಕೊಂಡು ಬರುತ್ತಿದ್ದ ಕೆಲಸದ ಆಧಾರದ ಮೇಲೆ 5 ಲಕ್ಷ ರೂ. ನಿಂದ 20 ಲಕ್ಷ ರೂ. ವರೆಗೆ ಹಣ ಪಡೆಯುತ್ತಿದ್ದರು ಎಂದೂ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಈ ಮಧ್ಯೆ, ಸಮೀರ್‌, ಆಕಾಂಕ್ಷಾ ಶ್ರೀವಾಸ್ತವ, ಮೋಹಿತ್‌ ಖರೆ, ಆನಂದ್‌ ಮಿಶ್ರಾ, ಕುಲ್ವೀರ್‌ ಸಿಂಘಾನಿಯಾ ಹಾಗೂ ಮಹಿಪಾಲ್‌ ಎಂಬ ಈ ಗ್ಯಾಂಗ್‌ನ ಇತರೆ ಸದಸ್ಯರನ್ನು ಸಹ ಬಂಧಿಸಲು ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದೂ  ವಿಶಾಲ್‌ ವಿಕ್ರಮ್ ಸಿಂಗ್ ಹೇಳಿದ್ದಾರೆ. 

ನವೆಂಬರ್‌ ತಿಂಗಳಲ್ಲೂ ಸಹ ಉತ್ತರ ಪ್ರದೇಶದ ಹಜರತ್‌ಗಂಜ್ ಪೊಲೀಸರು ಆದಾಯ ತೆರಿಗೆ ಇಲಾಖೆ ಕಚೇರಿ ಆವರಣದಲ್ಲಿ ನಡೆಸುತ್ತಿದ್ದ ನಕಲಿ ಉದ್ಯೋಗ ಗ್ಯಾಂಗ್‌ ಅನ್ನು ಬೆಳಕಿಗೆ ತಂದಿದ್ದರು. ಆ ಗ್ಯಾಂಗ್‌ 12 ಜನ ಯುವಕರಿಗೆ ವಂಚನೆ ಮಾಡಿದ್ದರು ಎಂದು ವರದಿಯಾಗಿತ್ತು.

ಇದನ್ನೂ ಓದಿ: ಯಾದಗಿರಿ: ರಿಯಲ್ ಎಸ್ಟೇಟ್ ದಂಧೆಕೋರರಿಂದ ವಂಚನೆ, ಲೇಔಟ್ ರಚಿಸಿ ಗ್ರಾಹಕರಿಗೆ ಮೋಸ..!

click me!