ನಟ ಸತೀಶ್ ವಜ್ರ ಕೊಲೆ ಪ್ರಕರಣ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಗೆಳೆಯ

Published : Jun 19, 2022, 05:31 PM IST
ನಟ ಸತೀಶ್ ವಜ್ರ ಕೊಲೆ ಪ್ರಕರಣ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಗೆಳೆಯ

ಸಾರಾಂಶ

ಯುವ ನಟ ಸತೀಶ್ ವಜ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಸತೀಶ್ ಕೊಲೆ ಬಗ್ಗೆ ಗೆಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, (ಜೂನ್.19): ಯುವ ನಟ ಸತೀಶ್ ವಜ್ರ ಕೊಲೆ ಪ್ರಕರಣಕ್ಕೆ ಸಂಬಂಧ  ವಿಕ್ಟೋರಿಯಾ ಆಸ್ಪತ್ರೆ ಬಳಿ ಸತೀಶ್ ಸ್ನೇಹಿತ ಹರೀಶ್ ಮಾಧ್ಯಮಗಳೀಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.,

 2009 ರಲ್ಲಿ ಇಬ್ಬರು ಸತೀಶ್ ಹಾಗೂ ಸುಧಾ ಇಬ್ಬರು ಲವ್ ಮಾಡತ್ತಿದ್ರು.. ಮೊದಲಿಗೆ ಸುಧಾ ಮನೆ ಕಡೆಯಿಂದ ವಿರೋಧ ಮಾಡಿದ್ರು. 2013 ರಲ್ಲಿ ಎರಡು ಕಡೆ ಮನೆಯವರು ಒಪ್ಪಿ ಮದುವೆ ಮಾಡಿದ್ರು. ಇಬ್ಬರು ಗಂಡ ಹೆಂಡತಿ ಚನ್ನಾಗಿ ಇದ್ರು. ಇತ್ತೀಚೆಗೆ ಸುಧಾ ಅವರಿಗೆ ಲಂಗ್ಸ್ ಸಮಸ್ಯೆ ಇತ್ತು. ಡಾಕ್ಟರ್ ಕೂಡ ಹೇಳಿದ್ರು ತುಂಬಾ ದಿನ ಬದುಕಲ್ಲ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದರು. ಅದರಂತೆ ಎಲ್ಲಾ ರೀತಿಯ ಟ್ರೀಟ್ ಮೆಟ್ ಕೊಡಸಿದ್ದ. ಆದ್ರೆ, ಇತ್ತೀಚೆಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಸುಧಾ ಸಾವನ್ನಪ್ಪಿದ್ರು ಎಂದರು.

ಮೈದುನನಿಂದಲೇ ಸ್ಯಾಂಡಲ್‌ವುಡ್‌ ನಟನ ಕೊಲೆ: ಚಾಕುವಿನಿಂದ ಇರಿದು ಹತ್ಯೆ ಶಂಕೆ

ಆಕೆ ಸಾವನ್ನಪ್ಪಿದ ಬಳಿಕ ನಂತರ ಸತೀಶ್ ವಿರುದ್ಧ ಆರ್ ಆರ್ ನಗರದಲ್ಲಿ ಸುಧಾ ಮನೆಯವರು ದೂರು ಕೂಡ ನೀಡಿದ್ರು. ನಂತರ ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವು ಎಂದ ವರದಿ ಬಂತು.  ನಿನ್ನೆ ರಾತ್ರಿ ಸುದರ್ಶನ್ ಹಾಗೂ ಆತನ ಸ್ನೇಹಿತ ಸೇರಿಕೊಂಡು ಈ ಕೆಲಸ ಮಾಡಿದ್ದಾರೆ. ರಾತ್ರಿ ಸತೀಶ್ ಗೆ ಸುದರ್ಶನ್ ಪೋನ್ ಮಾಡಿ ಮನೆಗೆ ಬರತ್ತೀನಿ ಅಂತಾ ಹೇಳಿದ್ದ. ಬಾ ಅಂತಾ ಸತೀಶ್ ಹೇಳಿದ್ರು. ಸುದರ್ಶನ್ ಹಾಗೂ ಆತನ ಸ್ನೇಹಿತ ಸೇರಿ ಸತೀಶ್ ಮಲಗಿರೋ ವೇಳೆಯಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಹೇಳಿದರು.

ಸತೀಶ್ ಚನ್ನಾಗಿ ಬದುಕತ್ತಿದ್ದ,ವಿಡಿಯೋಗಳು ಎಲ್ಲಾ ಚನ್ನಾಗಿ ಕ್ಲಿಕ್ ಆಗಿತ್ತು ,ಒಳ್ಳೆ ದುಡಿಮೆ ಮಾಡುತ್ತಿದ್ದ. ಇದನ್ನು ಸಹಿಸಲಾಗಿದೆ ಈ ಕೆಲಸ ಮಾಡಿದ್ದಾರೆ. ಇನ್ನೊಂದು ಮದುವೆ ಅಗ್ತಾನೆ,ಚನ್ನಾಗಿ ಬದುಕುತ್ತಾನೆ ಅನ್ನೋ ಒಂದೇ ಕಾರಣಕ್ಕೆ ಹೀಗೇ ಮಾಡಿದ್ದಾರೆ. ಸುದರ್ಶನ್ ಬಂದು ಹೋಗಿರೋ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇಬ್ಬರ ಬಂಧನ
ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಕೊಲೆಯಾದ ಸತೀಶ್ ಬಾಮೈದ ಸುದರ್ಶನ್ ಹಾಗೂ ಆತನ ಸಹೋದರ ಸಂಬಂಧಿ ನಾಗೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಸತೀಶ್ ವಜ್ರ ಪತ್ನಿ ಸುಧಾ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದರು. ತನ್ನ ತಂಗಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಿಲ್ಲವೆಂದು ಬಾವ ಸತೀಶ್ ಮೇಲೆ ಅಂದಿನಿಂದಲೂ ಸುದರ್ಶನ್ ಕೋಪಗೊಂಡಿದ್ದ. ಇದಲ್ಲದೇ ಸುಧಾ ಸಾವನ್ನಪ್ಪಿದ ಬಳಿಕ ಮಗು ಯಾರ ಬಳಿ ಇರಬೇಕು ಎಂಬ ವಿಚಾರಕ್ಕೆ ಬಾವ-ಬಾಮೈದನ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.

ಕ್ರವಾರ ರಾತ್ರಿ 10.30ರ ವೇಳೆ ತನ್ನ ಸಂಬಂಧಿ ನಾಗೇಂದ್ರನ ಜೊತೆ ಸತೀಶ್ ಮನೆಗೆ ಬಂದಿದ್ದ ಸುದರ್ಶನ್, ಸಹೋದರಿಯ ಸಾವಿನ ವಿಚಾರವಾಗಿ ಮತ್ತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಸುದರ್ಶನ್ ತನ್ನ ಬಾವನನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. ಕೊಲೆ ಬಳಿಕ ಆರೋಪಿಗಳು ಸತೀಶ್ ಬೈಕ್ ಸಮೇತ ಎಸ್ಕೇಪ್ ಆಗಿದ್ದರು.

ಯುವನಟ ಸತೀಶ್ ವಜ್ರ ಕೊಲೆಯಾಗಿರುವ ವಿಚಾರ ಶವಿವಾರ ಬೆಳಗ್ಗೆ ಗೊತ್ತಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಆರ್.ಆರ್.ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳಿಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!