ಬಡ್ಡಿ ಆಸೆ ತೋರಿಸಿ ಸಾವಿರಾರು ಜನರಿಗೆ ಪಂಗನಾಮ; ಕೋಟ್ಯಂತರ ರೂ. ಹಣದೊಂದಿಗೆ ಎಸ್ಕೆಪ್!

By Ravi Nayak  |  First Published Aug 23, 2022, 1:17 PM IST
  • ದಿನಕ್ಕೆ ಲಕ್ಷಕ್ಕೆ 2 ಪರ್ಸೆಟೆಂಜ್ ಬಡ್ಡಿ ಕೊಡತೇನಿ ಅನ್ಲೈನ್ ನಲ್ಲಿ ವಂಚನೆ ಮಾಡಿದ್ರು
  • ಕೋಟಿ ಕೋಟಿ ಹಣ ಸಂಗ್ರಹ ಮಾಡಿಕೊಂಡು ಪರಾರಿಯಾದ್ರು.
  • ನೂರಾರು ಜನರಿಗೆ ವಂಚನೆ ಮಾಡಿದವರಿಗೆ ಹುಡುಕಾಡಿ ಸುಸ್ತಾದ ಖಾಕಿ
  • ಟೆನ್ ಪೋರ್ಡ್ ಕಂಪನಿಯ ಮೂವರು ವಂಚಕರ ಬಂಧನ ಯಾವಾಗ?

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಆ.23) : ಬ್ಯಾಂಕ್ ನಲ್ಲಿ ಹಣ ಹೂಡಿಕೆ(Invest) ಮಾಡಿದ್ರೆ ಬಡ್ಡಿ(interest) ಕಡಿಮೆ ಬರುತ್ತದೆ.  ನೀವೂ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದ್ರೆ ದಿನಕ್ಕೆ 2 ಪರ್ಸೆಂಟೇಜ್(Percentage) ಬಡ್ಡಿ ನೀಡುತೇವೆ. ಹೂಡಿಕೆ ಮಾಡಿದ ಹಣಕ್ಕೆ ಕೆಲ ತಿಂಗಳಿಗೆ ಡಬಲ್ ಬಡ್ಡಿ ನೀಡುತ್ತೇವೆಂದು ಎಂದು ಹೇಳಿದ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿ ಮತ್ತೊಮ್ಮೆ ಬಳ್ಳಾರಿ(Ballari)ಯ ಜನರು ಕೋಟಿ ಕೋಟಿ ಹಣ ಕಳೆದು ಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಹಣ ಸಂಗ್ರಹವಾಗ್ತಿದ್ದಂತೆ ಆ ಮೂವರು ವಂಚಕರು ಪರಾರಿಯಾಗಿದ್ರೇ, ಇತ್ತ ಹಣ ಹೂಡಿಕೆ ಮಾಡಿದ 400ಕ್ಕೂ ಹೆಚ್ಚು ಜನರು ಪೊಲೀಸ್ ಠಾಣೆ ಸುತ್ತುತ್ತಿದ್ದಾರೆ.  

Latest Videos

undefined

  ಠೇವಣಿದಾರರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿ ಸೆಕ್ರೆಟರಿ ಎಸ್ಕೇಪ್!

ಆರೋಪಿಗಳಿಗೆ ಹುಡುಕಾಡಿ ಸುಸ್ತಾದ ಪೊಲೀಸರು: ಟೆನ್ ಪೋರ್ಡ್ ಈ ಹೆಸರು ಕೇಳಿದ್ರೆ ಸಾಕು ಬಳ್ಳಾರಿ ಜನರು ಬೆಚ್ಚಿಬಿಳ್ತಿದ್ದಾರೆ. ಯಾಕಂದ್ರೆ ಕಳೆದ ಆರು ತಿಂಗಳ ಹಿಂದೆಯಷ್ಟೇ ಪರ್ಲ್ಸ್ ವರ್ಡ್(Pearls World)  ಕಂಪನಿಯಿಂದ ವಂಚನೆಗೊಳಗಾದ ಜನರು‌ ಇದೀಗ  ಟೆನ್ ಪೋರ್ಡ್ ಕಂಪನಿ ಹಣ ಹೂಡಿಕೆ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಸ್ಟಾಕ್ ಬ್ರೋಕೇರೇಜ್(stock brokerage). ಷೇರು ಕಂಪನಿ, ಬಿಟ್ ಕ್ವಾಯಿನ್(Bitcoin). ಕ್ರಿಪ್ಟೋ ಕರೆನ್ಸಿ(cryptocurrency) ಹೆಸರಿನಲ್ಲಿ ಕೋಟ್ಯಂತ ರೂಪಾಯಿ ಹಣ ಹೂಡಿಕೆ ಮಾಡಿಸಿಕೊಂಡ ಟೆನ್ ಪೋರ್ಡ್(Tenford) ಕಂಪನಿ ಇದೀಗ ‌ಪಂಗನಾಮ ಹಾಕಿ ಹೋಗಿದೆ. ಹೌದು, ಅದೆಷ್ಟೇ ಬಾರಿ ಮೋಸ ಹೋದ್ರು ನಮ್ಮ ಜನರಿಗೆ ಬುದ್ಧಿಯೇ ಬರುತ್ತಿಲ್ಲ.  

ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ರೆ ದಿನಕ್ಕೆ 2 ಸಾವಿರ ರೂಪಾಯಿ ಬಡ್ಡಿ ನೀಡುತ್ತೇವೆ ಎಂದು ಅಂತಾ ಟೆನ್ ಪೋರ್ಡ್ ಕಂಪನಿ ಆಮಿಷ್ ನೀಡಿತ್ತು. ವಂಚಕರ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿ ನೂರಾರು ಜನರು ಕೋಟ್ಯಂತರರೂಪಾಯಿ ಹಣವನ್ನ ಟೆನ್ ಪೋರ್ಡ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ರು. ಬರೋಬ್ಬರಿ 400ಕ್ಕೂ ಹೆಚ್ಚು ಜನರು ಟೆನ್ ಪೋರ್ಡ್ ಕಂಪನಿಯಲ್ಲಿ ಹತ್ತು ಕೋಟಿಗೂ ಅಧಿಕ ಹಣ ಹೂಡಿಕೆ ಮಾಡುತ್ತಿದ್ದಂತೆ ವಂಚಕರು ಪರಾರಿಯಾಗಿದ್ದಾರೆ.. ಕಳೆದ ನಾಲ್ಕು ತಿಂಗಳ ಹಿಂದೆ ನೂರಾರು ಜನರಿಂದ ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ಪರಾರಿಯಾದ ವಂಚಕರು ಇಂದಿಗೂ ಪತ್ತೆಯಾಗಿಲ್ಲ. ವಂಚಕರ ವಿರುದ್ದ ವಂಚನೆಗೊಳ ಗಾದವರು ಸಾಲು ಸಾಲಾಗಿ ದೂರು ನೀಡಿದ್ರು ಖದೀಮರು ಮಾತ್ರ ಪೊಲೀಸರ ಬಲೆಗೆ ಬೀಳುತ್ತಿಲ್ಲ. ಆಂಧ್ರ ಮೂಲದ ವಂಚಕರಿಗಾಗಿ ವಿಶೇಷ ತಂಡ ರಚನೆ ಮಾಡಿದ್ದೇವೆಂದು ಎಸ್ಪಿ ಸೈದುಲು ಅಡಾವತ್ ಹೇಳುತ್ತಿದ್ದಾರೆ..

ಮಿಲ್ಟ್ರಿ ಆಫೀಸರ್ ಅಂತ ಹೇಳಿ ಆಟೋ ಡ್ರೈವರ್‌ಗೆ ಪಂಗನಾಮ ಹಾಕಿದ ನಯವಂಚಕ..!

ಷೇರ್ ಮಾರ್ಕೆಟಿಂಗ್ ಹೆಸರಲ್ಲಿ ಆನ್ಲೈನ್ ವಂಚನೆ: ಸ್ಟಾಕ್ ಬ್ರೋಕೇರೇಜ್. ಶೇರು ಕಂಪನಿ, ಬಿಟ್ ಕ್ವಾಯಿನ್. ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ  ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿಸಿಕೊಂಡ ಮೂವರು ವಂಚಕರು ಕಳೆದ ನಾಲ್ಕು ತಿಂಗಳಿಂದ ನಾಪತ್ತೆಯಾಗಿದ್ದಾರೆ. ಟೆನ್ ಪೋರ್ಡ್ ಕಂಪನಿಯ ಮಾಲೀಕ ಅರ್ಜುನ್. ವೆಂಕಟೇಶ್, ಜಗನ್(Venkatesh jagn) ಗಾಗಿ ಪೊಲೀಸರು ತನಿಖಾ ತಂಡ ರಚಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ಆದ್ರೇ ಆಂದ್ರ ಪ್ರದೇಶದಲ್ಲಿ ತೆಲೆಮರೆಸಿಕೊಂಡಿ ರುವ ಆರೋಪಿಗಳು ಪೊಲೀಸರ ಬಲೆಗೆ ಬೀಳುತ್ತಿಲ್ಲ. ಇನ್ನೊಂದೆಡೆ ಹಣ ಹೂಡಿಕೆ ಮಾಡಿದ ಹೂಡಿಕೆದಾರರು ದೂರು ನೀಡಿದ್ರು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ನಮ್ಮ ಹಣ ನಮ್ಮಗೆ ಕೊಡಿಸಿ. ನ್ಯಾಯ ಕೊಡಿಸಿ ಅಂತಾ ಹೂಡಿಕೆದಾರರು ಠಾಣೆಗೆ ಅಲೆಯುತ್ತಿದ್ದಾರೆ.  

ಸಾಲು ಸಾಲು ವಂಚನೆಯಾದ್ರೂ‌ ಪೊಲೀಸರೇನು ಮಾಡ್ತಿದ್ದಾರೆ: ಈ ಹಿಂದೆ ಐಎಂಎ, ಮೊನ್ನೆ ಫರ್ಲ್ಸ್ ವರ್ಡ್,  ಇದೀಗ ಟೆನ್ ಪೋರ್ಡ್ ಕಂಪನಿಯಲ್ಲೂ ಕೋಟಿ ಕೋಟಿ ಹಣ ಹೂಡಿಕೆ ಮಾಡಿ ಹೂಡಿಕೆದಾರರು ಪಂಗನಾಮ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಗಣಿನಾಡಿನ ಜನರಿಗೆ ಬಡ್ಡಿ. ಲಾಭದ ಆಸೆ ತೋರಿಸಿ ವಿವಿಧ ರೀತಿಯಲ್ಲಿ ವಂಚನೆ ಮಾಡ್ತಿರೋ ವಂಚಕರಿಗೆ ಪೊಲೀಸರು ತಕ್ಕ ಪಾಠ ಕಲಿಸಲು ಮುಂದಾಗಬೇಕಿದೆ. ಜೊತೆಗೆ ಲಾಭದ ಆಸೆಗಾಗಿ ಜನರು ಸಹ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗುವುದು ನಿಲ್ಲಿಸಬೇಕಾಗಿದೆ. ಇಲ್ಲದಿದ್ದರೇ ವಂಚನೆಗೊಳಗಾಗುವವರು ಇರೋವರೆಗೂ ವಂಚನೆ ಮಾಡೋರು ಇದ್ದೆ ಇರುತ್ತಾರೆ..

click me!