ವೀಸಾ ಕೊಡಿಸುವುದಾಗಿ ₹50 ಲಕ್ಷ ರು. ಅಧಿಕ ವಂಚನೆ: ಆರೋಪಿ ಸುಧೀರ್ ರಾವ್ ಬಂಧನ

By Kannadaprabha News  |  First Published Apr 7, 2023, 8:45 PM IST

: ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ನಗರದಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರು. ಪಡೆದುಕೊಂಡು ವಂಚಿಸಿದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬಿಜೈ ನ್ಯೂರೋಡ್‌ ನಿವಾಸಿ ಸುಧೀರ್‌ ರಾವ್‌ ವಿ.ಆರ್‌.(42) ಬಂಧಿತ ಆರೋಪಿ.


ಮಂಗಳೂರು (ಏ.7): ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ನಗರದಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರು. ಪಡೆದುಕೊಂಡು ವಂಚಿಸಿದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬಿಜೈ ನ್ಯೂರೋಡ್‌ ನಿವಾಸಿ ಸುಧೀರ್‌ ರಾವ್‌(Sudheer rao) ವಿ.ಆರ್‌.(42) ಬಂಧಿತ ಆರೋಪಿ.

ಈತ ಬಲ್ಗೇರಿಯಾ( BulgariaBulgaria )ದಲ್ಲಿ ಉದ್ಯೋಗದ ವೀಸಾ (Employment VisaEmployment Visa) ಕೊಡಿಸುವುದಾಗಿ ಸಾರ್ವಜನಿಕರನ್ನು ನಂಬಿಸುತ್ತಿದ್ದ. ಈತನ ಮೇಲೆ ಮಂಗಳೂರು ನಗರ ಕಮಿಷನರೇಟ್‌ ಮತ್ತು ದ.ಕ. ಜಿಲ್ಲಾ ವ್ಯಾಪ್ತಿಯ ವಿವಿಧ ಕಡೆ ಪ್ರಕರಣಗಳು ದಾಖಲಾಗಿತ್ತು. ಈತ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದು, ಈದೀಗ ಬಂಧಿಸುವಲ್ಲಿ ಸಿಸಿಬಿ ತಂಡ ಯಶಸ್ವಿಯಾಗಿದೆ.

Tap to resize

Latest Videos

ಬೆಂಗಳೂರು: 6 ಕಾರು ಖರೀದಿಗೆ ಸಾಲ ಪಡೆದು ಟೋಪಿ..!ಬೆಂಗಳೂರು: 6 ಕಾರು ಖರೀದಿಗೆ ಸಾಲ ಪಡೆದು ಟೋಪಿ..!

ಆರೋಪಿಯ ಮೇಲೆ ಕಾರು ಖರೀದಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೊಸೈಟಿಗಳಿಗೆ ಸಲ್ಲಿಸಿ ಸಾಲ ಪಡೆದು ವಂಚಿಸಿರುವ ಬಗ್ಗೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈತ ಸೊಸೈಟಿಗಳಿಂದ ಪಡೆದ ಸಾಲಕ್ಕೆ ಜಾಮೀನು ಹಾಕಿದವರು ನಷ್ಟಕ್ಕೊಳಗಾಗಿದ್ದಾರೆ. ವೀಸಾ ನೆಪದಲ್ಲಿ ಈತನ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದು, 50 ಲಕ್ಷ ರು.ಗೂ ಮಿಕ್ಕಿ ಹಣ ಪಡೆದು ವಂಚಿಸಿದ್ದಾನೆ. ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌(Kuldeep Kumar JainKuldeep Kumar Jain IPS) ಮಾರ್ಗದರ್ಶನದಲ್ಲಿ ಸಿಸಿಬಿ(CCB) ಎಸಿಪಿ ಪಿ.ಎ. ಹೆಗಡೆ ನಿರ್ದೇಶನದಲ್ಲಿ ಇನ್ಸ್‌ಪೆಕ್ಟರ್‌ ಶ್ಯಾಮ್‌ ಸುಂದರ ಎಚ್‌.ಎಂ. ಹಾಗೂ ಪಿಎಸ್‌ಐ ಸುದೀಪ್‌, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಾಳಮ್ಮನ ಬೆಟ್ಟದಲ್ಲಿ ದೇವರ ಹುಂಡಿ ಕಳವು

ತಿಪಟೂರು: ದೇವರ ಕಾಣಿಕೆ ಹುಂಡಿ ಕಳ್ಳತನವಾಗಿರುವ ಘಟನೆ ತಾಲೂಕಿನ ಹೊನ್ನವಳ್ಳಿ ಹೋಬಳಿ ಬಳುವನೇರಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಸಿದ್ಧ ದೇವಾಲಯ ಕಾಳಮ್ಮನ ಬೆಟ್ಟದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ದೇವಾಲಯದಲ್ಲಿದ್ದ ಕಾಣಿಕೆ ಹುಂಡಿ ಹಾಗೂ ಕಂಚಿನ ಆನೆಯನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು ಇಲ್ಲಿ ಪದೇ ಪದೇ ಕಾಣಿಕೆ ಹುಂಡಿ ಕಳ್ಳತನವಾಗುತ್ತಲೇ ಇದ್ದು ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಕಳ್ಳರನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆಂದು ವಿಶ್ವಕರ್ಮ ಸಮಾಜದ ಅಧ್ಯಕ್ಷ ನಿಂಗಾಚಾರ್‌, ಕಾರ್ಯದರ್ಶಿ ಮರಿಯಾಚಾರ್‌ ಸೇರಿದಂತೆ ಮುಖಂಡರು ಪೊಲೀಸ್‌ ಇಲಾಖೆ ಹಾಗೂ ಮುಜುರಾಯಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!