ಆರೋಪಿಗಳಿಂದ 250 ಗ್ರಾಂ ಗಾಂಜಾ, ಒಂದು ಕಾರು, ಒಂದು ಬೈಕ್ ಹಾಗೂ 5700 ರು. ಹಣ ವಶ| ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿ ಸಮುದ್ರದ ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರ ದಾಳಿ|
ಭಟ್ಕಳ(ಸೆ.16): ಇಲ್ಲಿನ ಜಾಲಿ ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ಪಟ್ಟಣದ ಹಳೇ ಬಸ್‌ನಿಲ್ದಾಣದ ಸನಿಹದ ನಿವಾಸಿ ಸೈಯದ್ ಅಕ್ರಮ ಮೊಹ್ಮದ್ ಹುಸೇನ್, ಹೆಬಳೆ ಹನೀಪಾಬಾದ್ ತಲಹಾ ಕಾಲನಿಯ ಸೈಯದ್ ಮೂಸಾ ಸೈಯದ್, ಜಾಲಿ ದೇವಿನಗರದ ರೂಪೇಶ ಮಾಸ್ತಪ್ಪ ಮೊಗೇರ, ಹೆಬಳೆ ಗಾಂಧಿನಗರದ ಹೇಮಂತ ಶ್ರೀಧರ ನಾಯ್ಕ ಪೊಲೀಸರಿಂದ ಬಂಧಿತರು.
ಚಿತ್ರದುರ್ಗದಲ್ಲಿ ಭಾರೀ ಪ್ರಮಾಣದ ಗಾಂಜಾ ಸೀಜ್ : ಗುತ್ತಿಗೆ ಪಡೆದು 4 ಎಕರೆಯಲ್ಲಿ ಬೆಳೆ
ಆರೋಪಿತರಿಂದ 250 ಗ್ರಾಂ ಗಾಂಜಾ, ಒಂದು ಕಾರು, ಒಂದು ಬೈಕ್ ಹಾಗೂ 5700 ರು. ಹಣವನ್ನ ವಶಪಡಿಸಿಕೊಂಡಿದ್ದಾರೆ. ಇವರು ಸೆ. 15 ರಂದು ಬೆಳಗ್ಗೆ 7.15ರ ಸುಮಾರಿಗೆ ಭಟ್ಕಳದ ಜಾಲಿ ಸಮುದ್ರದ ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು.