ರಾಯಚೂರು ಹಾಗೂ ಚಿತ್ರದುರ್ಗದಲ್ಲಿ ಪ್ರತ್ಯೇಕವಾಗಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಹಾಗೂ ರಾಯಚೂರಿನ ಅಪಘಾತ ಸುದ್ದಿಯ ಇನ್ನು ಮಾಹಿತಿ ಈ ಕೆಳಗಿನಂತಿದೆ.
ರಾಯಚೂರು, (ಜುಲೈ.18): ಕಾರು ಮತ್ತು ಲಾರಿ ನಡುವೆ ಇಂದು(ಸೋಮವಾರ) ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಾ ಸಮೀಪದ ಬಾಲಯ್ಯ ಕ್ಯಾಂಪ್ ಬಳಿ ನಡೆದಿದೆ. ಮೃತ ನಾಲ್ವರು ಆಂಧ್ರಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.
ಸೇತುವೆಯ ಹಳಿ ಮುರಿದು ನರ್ಮದಾ ನದಿಗುರುಳಿದ ಬಸ್, 13 ಸಾವು, 15 ಜನರ ರಕ್ಷಣೆ!
ಮೃತರ ಹೆಸರು ಹಾಗೂ ಅಡ್ರೆಸ್ ಬಗ್ಗೆ ಇನ್ನೂ ಯಾವುದೇ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಬಳಗಾನೂರು, ಸಿಂಧನೂರು ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿರು. ಅಲ್ಲದೇ ಜೆಸಿಬಿಗಳಿಂದ ಕಾರು ಹಾಗೂ ಲಾರಿಯನ್ನು ಬೇರ್ಪಡಿಸಿ, ಸುಗಮ ಮಾರ್ಗಕ್ಕೆ ರಸ್ತೆ ಕ್ಲಿಯರ್ ಮಾಡಿಕೊಟ್ಟರು.
ಸದ್ಯ ಮೃತದೇಹಗಳನ್ನು ಸಿಂಧನೂರು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಬಗ್ಗೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳಾಳ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ
ಚಿತ್ರದುರ್ಗ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಕೊಳಾಳ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಇದುವರೆಗೂ ಮೃತರ ಗುರುತು ಪತ್ತೆ ಆಗಿಲ್ಲ. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು, ಚಾಲಕನ ಅಜಾಗರೂಕತೆಯಿಂದ ನಡೆದ ದುರ್ಘಟನೆ.
ದಾವಣಗೆರೆ ಮೂಲದ ಅಬಕಾರಿ ಇಲಾಖೆಯ ನಿವೃತ್ತ ಡಿವೈಎಸ್ಪಿ ಜಯರಾಂ ನಾಯ್ಕ್(64), ಪತ್ನಿ ಲತಾ(57) ಮೃತರು.
ಬೆಂಗಳೂರಿನಿಂದ ದಾವಣಗೆರೆಗೆ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು