ಯುಟ್ಯೂಬ್ ಮೂಲಕ ತರಬೇತಿ ಪಡೆದು ಕೇರಳದಿಂದ ಮಂಗಳೂರು ನಗರಕ್ಕೆ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರು ಖತರ್ನಾಕ್ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು (ಆ.19): ಯುಟ್ಯೂಬ್ ಮೂಲಕ ತರಬೇತಿ ಪಡೆದು ಕೇರಳದಿಂದ ಮಂಗಳೂರು ನಗರಕ್ಕೆ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರು ಖತರ್ನಾಕ್ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಕೊಳತ್ತೂರಿನ ವಿ. ಪ್ರಿಯೇಶ್(38), ಮುಳಿಯಾರಿನ ವಿನೋದ್ ಕುಮಾರ್.6(33), ಹೊಸದುರ್ಗದ ಅಬ್ದುಲ್ ಖಾದರ್ ಎಸ್.ಎ(58) ಹಾಗೂ ಪುತ್ತೂರಿನ ಅಯೂಬ್ ಖಾನ್ (51) ಬಂಧಿತರು. ಬಂಧಿತರಿಂದ ಸುಮಾರು 2,13,500 ರೂ. ಮೌಲ್ಯದ 500 ರೂಪಾಯಿ ಮುಖಬೆಲೆಯ 427 ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು.
ಛತ್ತೀಸ್‌ಗಢದಲ್ಲಿ ನಕ್ಸಲರ ಬೃಹತ್ ಖೋಟಾ ನೋಟು ಫ್ಯಾಕ್ಟರಿ ಪತ್ತೆ!
ಅರೋಪಿ ಪ್ರಿಯೇಶ್ ಕಾಸರಗೋಡು ಜಿಲ್ಲೆಯ ಚೆರ್ಕಳ ಎಂಬಲ್ಲಿ ಪ್ರಿಂಟಿಂಗ್ ಪ್ರೆಸ್ ನ್ನು ಹೊಂದಿದ್ದ. ಇದೇ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಖೋಟಾನೋಟು ತಯಾರಿಸುತ್ತಿದ್ದ ಖದೀಮರು. ಖೋಟಾ ನೋಟು ತಯಾರಿಸಲು ಬೇಕಾದ ಕಚ್ಚಾ ಸಾಮಗ್ರಿಗಳನ್ನ ಕೇರಳದ ಕೋಝಿಕೋಡ್ ಮತ್ತು ದೆಹಲಿಯಿಂದ ಖರೀದಿ ಮಾಡಿ ತರಿಸಿಕೊಳ್ಳುತ್ತಿದ್ದ ಗ್ಯಾಂಗ್. ಬಳಿಕ ಪ್ರಿಯೆಶ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಖೋಟಾನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದರು. ಖೋಟಾನೋಟು ತಯಾರಿಸುವ ವಿಧಾನವನ್ನು ಯುಟ್ಯೂಬ್ ಮೂಲಕವೇ ವೀಕ್ಷಿಸಿ ಕರಗತ ಮಾಡಿಕೊಂಡಿದ್ದ ಗ್ಯಾಂಗ್. ಮಂಗಳೂರಿನಲ್ಲಿ ಖೋಟಾನೋಟು ಚಲಾವಣೆ ಆಗುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಗಳ ಬೆನ್ನಹತ್ತಿದ್ದ ಮಂಗಳೂರು ಸಿಸಿಬಿ ಟೀಂ. ಕೊನೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Bengaluru crime: ಕಡಿಮೆ ಬಡ್ಡಿ ಆಸೆ ತೋರಿಸಿ ಖೋಟಾ ನೋಟು ಚಲಾವಣೆ!
ಖೋಟಾನೋಟು ಚಲಾವಣೆಯಲ್ಲಿ ದೊಡ್ಡ ಜಾಲವೇ ಇದೆಯಾ? ದೇಶಾದ್ಯಂತ ಚಲಾವಣೆ ಮಾಡುತ್ತಿದ್ದರಾ? ಇದುವರೆಗೆ ಎಷ್ಟು ಖೋಟಾನೋಟುಗಳನ್ನ ಚಲಾವಣೆ ಮಾಡಿದ್ದಾರೆ? ಎಲ್ಲ ಆಯಾಮಗಳಲ್ಲಿ ವಿಚಾರಣೆ ನಡೆಸಲಿರುವ ಪೊಲೀಸರು.