Moral Policing Mangaluru: ಬಸ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದವರ ಬಂಧನ

Published : Dec 13, 2021, 05:14 AM ISTUpdated : Dec 13, 2021, 05:15 AM IST
Moral Policing Mangaluru: ಬಸ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದವರ ಬಂಧನ

ಸಾರಾಂಶ

* ಬಸ್‌ನಲ್ಲಿ ಭಿನ್ನ ಕೋಮಿನ ಯುವಕ-ಯುವತಿ ಮೇಲೆ ಹಲ್ಲೆ * ಮಂಗಳೂರಲ್ಲಿ ನೈತಿಕ ಪೊಲೀಸ್‌ಗಿರಿ * ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕೇಸ್‌ * ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆಕೋರಿದ ಒಬ್ಬ ವಿದ್ಯಾರ್ಥಿ

ಮಂಗಳೂರು(ಡಿ. 13)  ಬಸ್‌ನಲ್ಲಿ ಸಂಚರಿಸುತ್ತಿದ್ದ ಅನ್ಯಕೋಮಿನ ಜೋಡಿ ಮೇಲೆ ನಡೆದ ನೈತಿಕ ಪೊಲೀಸ್‌ಗಿರಿ(moral policing) ಪ್ರಕರಣಕ್ಕೆ ಸಂಬಂಧಿಸಿ ಬಸ್‌ನ ಚಾಲಕ, ನಿರ್ವಾಹಕ ಸಹಿತ ನಾಲ್ವರನ್ನು (Mangaluru)ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ್‌, ರಾಘವೇಂದ್ರ, ರಂಜಿತ್‌ ಮತ್ತು ಪವನ್‌ ಬಂಧಿತರು. ಘಟನೆ ಬಗ್ಗೆ ಪಾಂಡೇಶ್ವರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸದ್ಯ ಯುವಕ ಮತ್ತು ಯುವತಿ ತಮ್ಮ ಊರಿಗೆ ತೆರಳಿದ್ದಾರೆ. ಅವರನ್ನು ಪತ್ತೆ ಹಚ್ಚಲಾಗಿದ್ದು, ಯುವಕ ಶಿವಮೊಗ್ಗದವನಾಗಿದ್ದು(Shivamogga), ವಿದ್ಯಾರ್ಥಿನಿ ಉಡುಪಿ (Udupi)ಮೂಲದವಳು. ಹೆತ್ತವರನ್ನು ಕರೆದುಕೊಂಡು ಬರುವಂತೆ ಸೂಚಿಸಲಾಗಿದೆ. ಬಳಿಕ ಅವರಿಂದಲೇ ದೂರು ಕೊಡಿಸಲಾಗುವುದು ಎಂದಿದ್ದಾರೆ.

ಇಲ್ಲಿನ ವಾಮಂಜೂರು ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿ ಜೋಡಿ ಶುಕ್ರವಾರ ಊರಿಗೆ ತೆರಳಲು ಮಂಗಳೂರು-ಉಡುಪಿ ಮಧ್ಯೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕುಳಿತಿತ್ತು. ಈ ವೇಳೆ ಬಸ್‌ ನಿರ್ವಾಹಕ ಮತ್ತು ಕೆಲವು ಯುವಕರ ಗುಂಪು ಜೋಡಿ ಹಲ್ಲೆ ನಡೆಸಿತ್ತು. ಮಂಗಳೂರಿನ ಖಾಸಗಿ ಬಸ್‌ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆಗೆ ಘಟನೆ ನಡೆದಿದೆ ಎಂದಿದ್ದಾರೆ ವಿದ್ಯಾರ್ಥಿಯ ಐಡಿ, ವಿಳಾಸ ಕೇಳಿ ಹಲ್ಲೆ ನಡೆಸುವ ವಿಡಿಯೋ ವೈರಲ್‌ ಆಗಿತ್ತು.

ಹಲ್ಲೆ ಮಾಡಿದ್ದ ವಿದ್ಯಾರ್ಥಿಗಳ ಮೇಲೆ ಪ್ರಕರಣ: ನಲ್ಲೂರು ಗ್ರಾಮದ ಸರ್ಕಾರಿ ಶಾಲೆಯ ಹಿರಿಯ ಹಿಂದಿ ಶಿಕ್ಷಕರ ತಲೆ ಮೇಲೆ ಕಸದ ಬುಟ್ಟಿಹಾಕಿ ಪುಂಡಾಟಿಗೆ ಮೆರೆದಿದ್ದ ಆರು ವಿದ್ಯಾರ್ಥಿಗಳ ವಿರುದ್ಧ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ನೊಂದ ಶಿಕ್ಷಕನೇ ಈ ಸಂಬಂಧ ದೂರು ನೀಡಿದ್ದಾರೆ.

ಮಾತನಾಡಿದ್ದಕ್ಕೆ ನೈತಿಕ ಪೊಲೀಸ್ ಗಿರಿ

ಈ ಮಧ್ಯೆ, ಶಿಕ್ಷಕರ ಜತೆ ಅಮಾನವೀಯವಾಗಿ ವರ್ತಿಸಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬಾತ ನೊಂದ ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದು, ಆತನ ವರ್ತನೆ ವಿರುದ್ಧ ಗ್ರಾಮಸ್ಥರು ಕಪಾಳಮೋಕ್ಷ ಮಾಡಿ ಬುದ್ಧಿ ಹೇಳಿದ ಘಟನೆಯೂ ನಡೆದಿದೆ.

ಡಿ.3ರಂದು ನಡೆದಿದ್ದ ಘಟನೆ: ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ 10ನೇ ತರಗತಿಯ ಹಿಂದಿ ಶಿಕ್ಷಕ ಪ್ರಕಾಶ ಬೋಗಾರ್‌ರೊಂದಿಗೆ 6 ವಿದ್ಯಾರ್ಥಿಗಳು ಪುಂಡಾಟಿಕೆ ಮೆರೆದಿದ್ದರು. ಡಿ.3ರಂದು ನಡೆದಿದ್ದ ಈ ಘಟನೆಯ ವಿಡಿಯೋ ವೈರಲ್‌ ಆಗಿ ಸಾಕಷ್ಟುಆಕ್ರೋಶ ವ್ಯಕ್ತವಾಗಿತ್ತು.

ಈ ಬಗ್ಗೆ ನೊಂದ ಶಿಕ್ಷಕನ ಜತೆಗೆ ಶಾಲಾ ಮುಖ್ಯಸ್ಥರು, ಎಸ್‌ಡಿಎಂಸಿಯವರು, ಬಿಇಓ ಹಾಗೂ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸಭೆ ನಡೆಸಿದ್ದರು. ಅಂಥ ಪುಂಡ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿ, ಟಿಸಿ ಕೊಟ್ಟು ಕಳಿಸುವಂತೆ ಈ ವೇಳೆ ಗ್ರಾಮಸ್ಥರು ಒತ್ತಾಯಿಸಿದ್ದರು. ಅದರಂತೆ 6 ಮಂದಿ ಪುಂಡ ವಿದ್ಯಾರ್ಥಿಗಳ ವಿರುದ್ಧ ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕಪಾಳಮೋಕ್ಷ: ಗುರುಗಳಿಗೆ ಅವಮಾನಿಸಿದ್ದ ವಿದ್ಯಾರ್ಥಿಗಳ ಪೈಕಿ ಒಬ್ಬಾತ ಶಾಲೆಗೆ ಆಗಮಿಸಿ ಸಂತ್ರಸ್ತ ಶಿಕ್ಷಕ ಪ್ರಕಾಶ್‌ ಬೋಗಾರ್‌ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಈ ವೇಳೆ ವಿದ್ಯಾರ್ಥಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಎಬಿವಿಪಿ ಕಾರ್ಯಕರ್ತರು ಗುರುಗಳ ಜೊತೆಗೆ ಹೀಗಾ ವರ್ತಿಸುವುದು? ಆಕಸ್ಮಾತ್‌ ಯಾರಾದರೂ ನಿಮ್ಮ ಕುಟುಂಬದವರ ಜತೆಗೂ ಇದೇ ರೀತಿ ಮಾಡಿದರೆ ಏನನಿಸುತ್ತದೆ ಎಂದೆಲ್ಲ ಪ್ರಶ್ನಿಸಿ ಬುದ್ಧಿ ಹೇಳಿದರು. ಶಿಕ್ಷಕರ ಕಾಲಿಗೆ ಬೀಳಲು ಸರಿಯಾಗಿ ಬಾಗದಾಗ ಕಪಾಳಕ್ಕೆ ಬಾರಿಸಿ ಬುದ್ಧಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು