* ಪಶ್ಚಿಮ ಬಂಗಾಳದಿಂದ ಬಂದು ನಗರದಲ್ಲಿ ಮನೆಗಳಿಗೆ ಕನ್ನ
* ಆರೋಪಿಗಳಿಂದ 38 ಲಕ್ಷ ಮೌಲ್ಯದ 745 ಗ್ರಾಂ ತೂಕದ ಚಿನ್ನಾಭರಣ ಜಪ್ತಿ
* ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದ ಆರೋಪಿಗಳು
ಬೆಂಗಳೂರು(ಮಾ.19): ಹೊರರಾಜ್ಯದಿಂದ ವಿಮಾನದಲ್ಲಿ(Flight) ನಗರಕ್ಕೆ ಬಂದು ಮನೆಗಳವು ಮಾಡಿ ಪರಾರಿಯಾಗುತ್ತಿದ್ದ ಮೂವರು ಖತರ್ನಾಕ್‌ಗಳನ್ನು ಬಾಣಸವಾಡಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಹರಿದಾಸ್ ಬರಾಯಿ (37) ಮತ್ತು ಪಾರ್ಥ ಹಲ್ದಾರ್ (32) ಹಾಗೂ ರತನ್ ಸಾಹಾ (52) ಬಂಧಿತರು(Arrest). ಆರೋಪಿಗಳಿಂದ(Accused) 38 ಲಕ್ಷ ಮೌಲ್ಯದ 745 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಿಂದ(West Bengal) ನಗರಕ್ಕೆ ವಿಮಾನದಲ್ಲಿ ಬರುತ್ತಿದ್ದ ಆರೋಪಿಗಳು ಬಳಿಕ ಲಾಡ್ಜ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ರಾತ್ರಿ ವೇಳೆ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ನಿಗಾವಹಿಸುತ್ತಿದ್ದರು. ಮನೆ ಎದುರು, ಕಸ, ಹಾಲು, ನ್ಯೂಸ್ ಪೇಪರ್ ಬಿದ್ದಿರುವುದನ್ನು ಗಮನಿಸಿ, ಮನೆಯಲ್ಲಿ ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಬಳಿಕ ತಡರಾತ್ರಿ ಬೀಗ ಮೀಟಿ ಕಳವು ಮಾಡಿ ರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗುತ್ತಿದ್ದರು.
Greater Noida ಕುಡಿಯೋದ್ ಬಿಡು ಎಂದಿದ್ದಕ್ಕೆ ಅಕ್ಕನಿಗೆ ಗುಂಡಿಕ್ಕಿ ಕೊಂದ!
ಫೆ.12ರಂದು ಬಾಣಸವಾಡಿಯ ಮನೆಯೊಂದರಲ್ಲಿ ಚಿನ್ನಾಭರಣ(Gold) ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಾಗ ಆರೋಪಿಗಳ ಪಶ್ಚಿಮ ಬಂಗಾಳದಲ್ಲಿ ಆರೋಪಿಗಳಿರುವ ಸುಳಿವು ಸಿಕ್ಕಿತು. ಹೀಗಾಗಿ ಪೊಲೀಸರ ವಿಶೇಷ ತಂಡ ಪಶ್ಚಿಮ ಬಂಗಾಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗಲ್ಲಿ ನಡೆಸುತ್ತಿದ್ದ ವ್ಯಕ್ತಿಯ ಬಂಧನ: ಹಣ ಜಪ್ತಿ
ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್(Criket Betting) ಅಡ್ಡೆ ಮೇಲೆ ದಾಳಿ ಮಾಡಿರುವ ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು, ಒಬ್ಬನನ್ನು ಬಂಧಿಸಿದ್ದಾರೆ.
ವಿದ್ಯಾರಣ್ಯಪುರದ ಜಿ.ಸಂಪತ್ ಬಂಧಿತ. ಈತನಿಂದ .1.08 ಲಕ್ಷ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಲಾಗಿದೆ. ಆರೋಪಿಯು ಮಾ.17ರಂದು ವಿದ್ಯಾರಣ್ಯಪುರ ಬಿಇಎಲ್ ಲೇಔಟ್‌ನ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರಿನ ರಸ್ತೆ ಬದಿ ಐಸಿಸಿ ಮಹಿಳಾ ವಿಶ್ವಕಪ್(ICC Women's World Cup) ಸರಣಿಯ ನ್ಯೂಜಿಲೆಂಡ್-ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಪಂದ್ಯಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ. ಈ ಸಂಬಂಧ ದೊರೆತ ಖಚಿತ ಮಾಹಿತಿ ಮೇರೆಗೆ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಆರೋಪಿಗಳ ಬಂಧನ
ಸೋಮವಾರಪೇಟೆ: ತಾಲೂಕಿನ ಸುತ್ತ ಮುತ್ತ ಮನೆ, ಬೈಕ್ ಹಾಗೂ ದೇವಾಲಯ ಹುಂಡಿ ಕಳವು ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಸಗೋಡು ಗ್ರಾಮದ ವಿಕ್ರಮ್ ಎಂಬುವವರ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಚೌಡ್ಲು ಗ್ರಾಮದ ಗಾಂಧಿನಗರ ನಿವಾಸಿ ಸಂಜಯ್ ಕುಮಾರ್ ಮತ್ತು ಕುಶಾಲನಗರದ ಮುಳ್ಳುಸೋಗೆಯ ಸುನೀಲ್ ಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ.
Gadag Crime: ಹೆಂಡ್ತಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಇಜಾಜ್ ಅರೆಸ್ಟ್
ಸೋಮವಾರಪೇಟೆಯ ಸೋಮೇಶ್ವರ ದೇವಾಲಯ ಹಾಗೂ ಆಂಜನೇಯ ದೇವಾಲಯಗಳಲ್ಲಿ ಹುಂಡಿ ಕಳವು ಮತ್ತು ಹಾಸನ ಜಿಲ್ಲೆಯಲ್ಲಿ ಮನೆಗೆ ನುಗ್ಗಿ ಚಿನ್ನ ಕಳ್ಳತನ ಹಾಗೂ ಕರ್ಕಳ್ಳಿ ಗ್ರಾಮದ ಸೀತಮ್ಮ ಮನೆ ಕಳ್ಳತನದ ಆರೋಪಿ ವಿನೋದ ಆಲಿಯಾಸ್ ಪಾಪಣ್ಣಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ರು. 1.70 ಲಕ್ಷ ಮೌಲ್ಯದ ಚಿನ್ನಾಭರಣ, ರು. 2ಲಕ್ಷ ಮೌಲ್ಯದ ನಾಲ್ಕು ಬೈಕ್ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ತಾಲೂಕು ಡಿವೈಎಸ್‌ಪಿ ಶೈಲೇಂದ್ರ, ಇನ್ಸ್‌ಪೆಕ್ಟರ್ ಬಿ.ಜಿ. ಮಹೇಶ್, ಪೊಲೀಸ್ ಉಪ ನಿರೀಕ್ಷಕ ವಿರೂಪಾಕ್ಷ, ಪ್ರೊಬೇಷನರಿ ಪಿಎಸ್‌ಐ ಕಾಶಿನಾಥ್, ಆಪರಾಧ ಪತ್ತೆದಳದ ಎಎಸ್‌ಐ ಗೋಪಾಲ್, ಮಡಿಕೇರಿ ಸಿಡಿಆರ್ ಘಟಕದ ರಾಜೇಶ್, ಗಿರೀಶ್, ಪ್ರವೀಣ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರನ್ನು ಅಭಿನಂದಿಸಿದ್ದಾರೆ.