
ಬೆಂಗಳೂರು(ಮಾ.18): ಭ್ರಷ್ಟಾಚಾರ ನಿಗ್ರಹ ದಳ (ACB) ತನಿಖೆಯಿಂದ ನಿಮಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ನಂಬಿಸಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (BDA) ಮೂವರು ಎಂಜಿನಿಯರ್‌ಗಳಿಂದ 10 ಲಕ್ಷ ಪಡೆದು ವಂಚಿಸಿದ್ದ(Fraud) ನಾಲ್ವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ಬನಶಂಕರಿಯ ಪ್ರವೀಣ್ (27), ನಾಗರಬಾವಿಯ ಬಿಡಿಎ ಕಂಪ್ಯೂಟರ್ ಅಪರೇಟರ್ ಚೇತನ್ (33) ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಮನೋಜ್ ಕುಮಾರ್ (46) ಹಾಗೂ ವಿನಯ್ ಕುಮಾರ್(35) ಬಂಧಿತರು(Arrest). ವಂಚನೆಗೆ ಒಳಗಾದ ಬಿಡಿಎ ಎಂಜಿನಿಯರ್ ಅರವಿಂದ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು(Accused) ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru Crime; ಅಡವಿಟ್ಟ ಒಡವೆ ಕಡಿಮೆ ಬೆಲೆಗೆ ಬಿಡಿಸಿಕೊಡುವುದಾಗಿ ಧೋಖಾ..!
ದೂರುದಾರ ಅರವಿಂದ್ ಅವರು ಎಚ್‌ಎಸ್‌ಆರ್ ಲೇಔಟ್‌ನ ಬಿಡಿಎ ಪೂರ್ವ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ 4 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾಡುಬೀಸನಹಳ್ಳಿ, ಎಸ್‌ಟಿ ಬೆಡ್ ಲೇಔಟ್‌ಗಳಲ್ಲಿ ಅನಧಿಕೃತ ಸೈಟ್‌ಗಳ ನಿರ್ಮಾಣ ಮತ್ತು ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ಕುರಿತು ವರದಿ ಸಲ್ಲಿಸುವ ಜವಾಬ್ದಾರಿ ವಹಿಸಲಾಗಿತ್ತು. ಈ ನಡುವೆ 2021ರ ನವೆಂಬರ್ 19ರಂದು ಎಸಿಬಿ ಅಧಿಕಾರಿಗಳು ಬಿಡಿಎ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪೂರ್ವ ತಾಲೂಕು ವರ್ತೂರು ಹೋಬಳಿ ಕಾಡುಬೀಸನಹಳ್ಳಿ ಗ್ರಾಮದಲ್ಲಿ 1.18 ಎಕರೆ ಜಮೀನಿನ ಸಂಬಂಧಪಟ್ಟ ಕಡತವನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದರು.
ಆರೋಪ ಮುಕ್ತಗೊಳಿಸುವ ಭರವಸೆ:
ಇದರ ಬೆನ್ನಲ್ಲೇ ಸಹಾಯಕ ಎಂಜಿನಿಯರ್ ಅರವಿಂದ್ ಅವರು ಬಿಡಿಎ ಪ್ರಧಾನ ಕಚೇರಿಯಲ್ಲಿರುವ ಕಾರ್ಯಪಾಲಕ ಎಂಜಿನಿಯರ್ ಮಹದೇವೇಗೌಡ ಮತ್ತು ಗೋವಿಂದರಾಜು ಅವರನ್ನು ಭೇಟಿಯಾಗಿ ಎಸಿಬಿ ಅಧಿಕಾರಿಗಳು ಕಡತ ಜಪ್ತಿ ಮಾಡಿರುವ ವಿಚಾರವಾಗಿ ಚರ್ಚಿಸಿದ್ದರು. ಎಸಿಬಿ ದಾಳಿ(ACB Raid) ಬಗ್ಗೆ ತಿಳಿದುಕೊಂಡಿದ್ದ ಆರೋಪಿ ಚೇತನ್, ಈ ಮೂವರು ಎಂಜಿನಿಯರ್‌ಗಳನ್ನು ಕರೆದು ಎಸಿಬಿ ತನಿಖೆಯಲ್ಲಿ ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದ.
ಎಸಿಬಿ ಅಧಿಕಾರಿ ಸೋಗಿನಲ್ಲಿ ಕರೆ:
ಎಫ್‌ಐಆರ್(FIR), ತನಿಖೆಯಿಂದ(Investigation) ಕೆಲಸಕ್ಕೆ ಸಮಸ್ಯೆಯಾಗಲಿದೆ ಎಂದು ಹೆದರಿದ್ದ ಎಂಜಿನಿಯರ್‌ಗಳು, ಆರೋಪಿ ಚೇತನ್ ಹೇಳಿದಂತೆ ಹಣ ಕೊಡಲು ಒಪ್ಪಿದ್ದರು. ಅದರಂತೆ ಆರೋಪಿ ಚೇತನ್ ಹಾಗೂ ಪ್ರವೀಣ್ ಎಂಜಿನಿಯರ್‌ಗಳನ್ನು ಸ್ಟಾರ್ ಹೋಟೆಲ್‌ವೊಂದಕ್ಕೆ ಬರುವಂತೆ ಸೂಚಿಸಿ ಬಳಿಕ ಮಾತುಕತೆ ನಡೆಸಿದ್ದರು. ಬಳಿಕ ಸ್ನೇಹಿತನಿಂದ ವಾಟ್ಸ್‌ಪ್ ಕರೆ ಮಾಡಿಸಿ ಎಸಿಬಿ ಅಧಿಕಾರಿ ಎಂದು ಎಂಜಿನಿಯರ್‌ಗಳೊಂದಿಗೆ ಮಾತನಾಡಿಸಿದ್ದರು. ಇದನ್ನು ನಂಬಿದ ಎಂಜಿನಿಯರ್‌ಗಳು ಎಸಿಬಿ ತನಿಖೆಯಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು 10 ಲಕ್ಷ ನೀಡಲು ಒಪ್ಪಿದ್ದರು.
Cyber Fraud: ಸೈಬರ್ ವಂಚಕರಿಗೆ ಸಿಮ್ ಮಾರುತ್ತಿದ್ದವರ ಬಂಧನ
ಸದಾಶಿವನಗರದ ಕಾಫಿ ಡೇಯಲ್ಲಿ ಆರೋಪಿಗಳನ್ನು ಭೇಟಿಯಾಗಿ ಹಣ ನೀಡಿದ್ದರು. ಬಳಿಕ ಆರೋಪಿಗಳು ಯಾವುದೇ ಕೆಲಸ ಮಾಡಿಕೊಡದೆ ವಂಚಿಸಿದ್ದರು. ಬಳಿ ಎಂಜಿನಿಯರ್ ಅರವಿಂದ್ ಅವರು ಈ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾದ್ಯಂತ ಎಸಿಬಿ ಬೃಹತ್ ದಾಳಿ: 18 ಭ್ರಷ್ಟ ಅಧಿಕಾರಿಗಳಿಗೆ ನಡುಕ, 75 ಕಡೆ ಶೋಧ ಕಾರ್ಯ!
ಬೆಂಗಳೂರು: ಮಾ.16 ರಂದು ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ನೀಡಿದ್ದರು. ಅಕ್ರಮ ಆಸ್ತಿ ಹೊಂದಿರುವ 18 ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆದಿತ್ತು. ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿ ಒಟ್ಟು 75 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದರು, 100 ಅಧಿಕಾರಿಗಳು ಹಾಗೂ 300 ಸಿಬ್ಬಂದಿಯ ತಂಡ ಇದರಲ್ಲಿ ಭಾಗಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ