ಯುವತಿ ವಿಚಾರಕ್ಕೆ 2 ಗ್ಯಾಂಗ್ ಮಧ್ಯೆ ಜಾತ್ರೆಯಲ್ಲಿ ಜಗಳ: ಲಾಂಗು, ಮಚ್ಚು ಝಳಪಿಸಿದ್ದ ಖದೀಮರ ಬಂಧನ

Published : Aug 31, 2023, 09:45 AM IST
ಯುವತಿ ವಿಚಾರಕ್ಕೆ 2 ಗ್ಯಾಂಗ್ ಮಧ್ಯೆ ಜಾತ್ರೆಯಲ್ಲಿ ಜಗಳ: ಲಾಂಗು, ಮಚ್ಚು ಝಳಪಿಸಿದ್ದ ಖದೀಮರ ಬಂಧನ

ಸಾರಾಂಶ

ಯುವತಿಯರಿಗೆ ಚುಡಾಯಿಸ್ತಿದ್ದ ವಿಷ್ಯಕ್ಕೆ ಅಜಿತ್ ಮತ್ತು ರಾಜಾ ಎಂಬ ರೌಡಿಶೀಟರ್ ಗ್ಯಾಂಗ್ ಮಧ್ಯೆ ಜಗಳ ಆಗಿತ್ತು. ಏಕಾಏಕಿ ಲಾಂಗ್ ಮುಚ್ಚುಗಳನ್ನ ಬೀಸಿ ಹಲ್ಲೆ ಮಾಡಿದ್ದ ರಾಜಾ ಗ್ಯಾಂಗ್‌ನ ನಾಲ್ವರನ್ನ ಬಂಧಿಸಿದ ಸಿದ್ದಾಪುರ ಪೊಲೀಸರು 

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಆ.31): ಅವತ್ತು ಆ ಏರಿಯಾದಲ್ಲಿ ಜಾತ್ರೆ ನಡೀತಿತ್ತು.. ಪೂಜೆ ಪುನಸ್ಕಾರ,  ಮೆರವಣಿಗೆ, ಹಬ್ಬದ ವಾತಾವರಣ ಕೂಡಿತ್ತು. ಏಳೆಂಟು ಗಂಟೆ ಟೈಮು.. ಸಾವಿರಾರು ಸಂಖೇಲಿ ಸೇರಿದ್ದ ಜನ ಜಾತ್ರೆ ಕಣ್ತುಂಬಿಕೊಳ್ತಿದ್ರು.. ಜಾತ್ರೆ ಮಧ್ಯೆಯೇ ಎರಡು ಗ್ಯಾಂಗ್‌ಗಳ ಮಧ್ಯೆ ಜಗಳ ಶುರುವಾಗಿತ್ತು.. ಏರಿಯಾ ಹುಡ್ಗೀರ ವಿಚಾರಕ್ಕೆ ಶುರುವಾಗಿದ್ದ ಜಗಳದಲ್ಲಿ ಲಾಂಗು ಮಚ್ಚುಗಳು ಝಳಪಿಸಿದ್ವು..!

ದೇವರಿಗೆ ಪೂಜೆ ಪುನಸ್ಕಾರ, ಸಾವಿರಾರು ಜನ.. ಮಕ್ಕಳ ಸಂಭ್ರಮ.. ಜನರ ಓಡಾಟ.. ಇದೆಲ್ಲಾ ಸಿದ್ದಾಪುರ ಠಾಣಾ ವ್ಯಾಪ್ತೀಯ ಮುತ್ತುಮಾರಿಯಮ್ಮ ಜಾತ್ರೇಲಿ ಕಂಡುಬಂದ ದೃಶ್ಯ.. ಕಳೆದ 28ನೇ ತಾರೀಖು ನಡೆದಿದ್ದ ಈ ಜಾತ್ರೇಲಿ ಎರಡು ಗ್ಯಾಂಗ್ ಮಧ್ಯೆ ಜಗಳ ನಡೆದಿತ್ತು.. ಯುವತಿಯರಿಗೆ ಚುಡಾಯಿಸ್ತಿದ್ದ ವಿಷ್ಯಕ್ಕೆ ಅಜಿತ್ ಮತ್ತು ರಾಜಾ ಎಂಬ ರೌಡಿಶೀಟರ್ ಗ್ಯಾಂಗ್ ಮಧ್ಯೆ ಜಗಳ ಆಗಿತ್ತು. ಏಕಾಏಕಿ ಲಾಂಗ್ ಮುಚ್ಚುಗಳನ್ನ ಬೀಸಿ ಹಲ್ಲೆ ಮಾಡಿದ್ದ ರಾಜಾ ಗ್ಯಾಂಗ್‌ನ ನಾಲ್ವರನ್ನ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. 

ತುಮಕೂರು: ಪತ್ನಿಯ ಅಂತ್ಯಸಂಸ್ಕಾರಕ್ಕೆ ಬಾರದ ಗಂಡ; ಮನೆ ಮುಂದೆ ಶವ ಬಿಟ್ಟು ಹೋದ ಗ್ರಾಮಸ್ಥರು!

ಒಂದೇ ಏರಿಯಾದ ಈ ಎರಡು ಗ್ಯಾಂಗ್ ನಡುವೆ ಆಗಾಗ ಸಣ್ಣಪುಟ್ಟ ಜಗಳ ನಡೀತಿತ್ತು.. ಒಬ್ಬರಿಗೊಬ್ಬರು ಗಲಾಟೆ, ಹವಾ ಮಾಡೋಕೆ ಕಾದು ಕೂತಿದ್ರು.. ಸಿನಿಮಾ ಸ್ಟೈಲ್ ನಲ್ಲೇ ಕಾದಾಡೋಕೆ ಪ್ಲಾನ್ ಮಾಡಿದ್ದ ಎದುರಾಳಿ ಗ್ಯಾಂಗ್ ಟಾರ್ಗೆಟ್ ಮಾಡಿದ್ದು ಇದೇ ಮಾರಿಯಮ್ಮ ಜಾತ್ರೆ ಟೈಮು.. ಅಜಿತ್, ಗಣೇಶ ಮತ್ತು ರಾಜು, ಅಪ್ಪು ಗ್ಯಾಂಗ್ ಎರಡೂ ಗ್ಯಾಂಗ್ ಅವತ್ತು ರಾತ್ರಿ ಜಾತ್ರೇಲಿ ಸೇರಿದ್ರು.. ಈ ವೇಳೆ ರಾಜು ಗ್ಯಾಂಗ್ ಅಲ್ಲಿನ ಏರಿಯಾದ ಯುವತಿಯರನ್ನ ರೇಗಿಸ್ತಿತ್ತಂತೆ.. ಈ ವೇಳೆ ಎರಡೂ ಗ್ಯಾಂಗ್ ಮಧ್ಯೆ ವಾಗ್ವಾದ ನಡೆದಿತ್ತು.. ಇದೇ ಕೋಪದಲ್ಲಿ ಅಜಿತ್ ಮನೆಗೂ ಹೋಗಿದ್ದ ರೌಡಿಶೀಟರ್ ರಾಜು ಟೀಂ ವಾರ್ನ್ ಮಾಡಿದ್ರು.. ನಂತರ ಅಂದ್ರೆ ಅದೇ ರಾತ್ರಿ 11.30ರ ಸುಮಾರಿಗೆ ಅಜಿತ್ ಅಲ್ಲಿನ ದೀಪಾ ಬಾರ್ ಬಳಿ ಹೋಗಿದ್ದ ಈ ವೇಳೆ ಏಕಾ ಏಕಿ ಲಾಂಗು ಮಚ್ಚುಗಳ ಸಮೇತ ಬಂದಿದ್ದ ರೌಡಿಶೀಟರ್ ಗ್ಯಾಂಗ್ ಅಜಿತ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದೆ..

ಇನ್ನು ಈ ಬಗ್ಗೆ ಕೇಸ್ ದಾಖಲಾದ ಬೆನ್ನಲ್ಲೇ ತನಿಖೆ ನಡೆಸಿದ್ದ ಸಿದ್ದಾಪುರ ಪೊಲೀಸರು ಅರವಿಂದ್ @ಅಬ್ಬು, ರಾಜಾ, ಗಣೇಶ್ ಶ್ರೀನಿವಾಸ್ ಎಂಬ ನಾಲ್ವರನ್ನ ಅರೆಸ್ಟ್ ಮಾಡಿದ್ದಾರೆ. ಅತ್ತ ಉಳಿದ ಅಭಿ, ಗಾಂಧಿ, ಮನೋಜ್, ಸೈಯದ್ ಸಲೀಂ, ವಿಜಯ್ ಬಂಧನಕ್ಕೆ ಬಲೆ ಬೀಸಿದ್ದು ಬಂಧನದ ನಂತರ ಮತ್ತಷ್ಟು ವಿಚಾರ ಬಯಲಿಗೆ ಬರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ