ಕ್ಯಾಬ್ ಬುಕ್ ಮಾಡಿ ಚಾಲಕನನ್ನ ಕರೆಸಿ ದರೋಡೆ: ನಾಲ್ವರ ಬಂಧನ

Published : Apr 16, 2022, 09:38 AM ISTUpdated : Apr 16, 2022, 09:42 AM IST
ಕ್ಯಾಬ್ ಬುಕ್ ಮಾಡಿ ಚಾಲಕನನ್ನ ಕರೆಸಿ ದರೋಡೆ: ನಾಲ್ವರ ಬಂಧನ

ಸಾರಾಂಶ

*ಊಬರ್ ಬುಕ್ ಮಾಡಿ ಚಾಲಕನನ್ನ ಕರೆಸಿಕೊಂಡು ದರೋಡೆ ಮಾಡಿದ್ದ ಆರೋಪಿಗಳು *ಚಾಲಕನಿಗೆ ಮಾರಕಾಸ್ತ್ರಗಳನ್ನ ತೋರಿಸಿ ಹಣ, ಮೊಬೈಲ್, ಕಾರು ಕಿತ್ತುಕೊಂಡಿದ್ದ ಆರೋಪಿಗಳು *ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಿದ ಸಂಪಿಗೇಹಳ್ಳಿ ಪೊಲೀಸರು

ಬೆಂಗಳೂರು (ಏ. 16):   ಡಿಫ್ರೆಂಟಾಗಿ ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.  ಊಬರ್ ಕ್ಯಾಬ್ (Cab) ಬುಕ್ ಮಾಡಿ ಚಾಲಕನನ್ನ ಕರೆಸಿಕೊಂಡು ಆರೋಪಿಗಳು ದರೋಡೆ ಮಾಡಿದ್ದರು.  ಕ್ಯಾಬ್ ಕರೆಸಿಕೊಂಡು ಚಾಲಕನಿಗೆ ಮಾರಕಾಸ್ತ್ರಗಳನ್ನ ತೋರಿಸಿ ಹಣ, ಮೊಬೈಲ್, ಕಾರನ್ನು ಆರೋಪಿಗಳು ಕಿತ್ತುಕೊಂಡಿದ್ದರು.  ಪ್ರಕರಣ ಸಂಬಂಧ ನಾಲ್ವರನ್ನ ಸಂಪಿಗೇಹಳ್ಳಿ ಪೊಲೀಸರು (sampigehalli Police) ಬಂಧಿಸಿದ್ದಾರೆ. ಹೃತಿಕ್ ಗೌಡ (20), ನಿತಿನ್ ಗೌಡ (21),  ಸುಮಂತ್ (20), ದರ್ಶನ್ (20) ಬಂಧಿತ ಆರೋಪಿಗಳು

ಬಂಧಿತರಿಂದ 5ಲಕ್ಷ ಮೌಲ್ಯದ ಕಾರು, ಒಂದು ಬೈಕ್, ಒಂದು ಮೊಬೈಲ್ ಹಾಗೂ 18 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಬೆಳ್ಳಂದೂರು, ಹನುಮಂತ ನಗರ, ಹಾಸನದ ಕೊಣನೂರು ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಕೈ ಚಳಕ ತೋರಿಸಿದ್ದಾರೆ.  ಸದ್ಯ ಆರೋಪಿಗಳನ್ನ ಬಂಧಿಸಿರುವ ಸಂಪಿಗೇಹಳ್ಳಿ ಪೊಲೀಸರು ಹೆಚ್ಚಿನ ತನಿಖೆ  ನಡೆಸುತ್ತಿದ್ದಾರೆ

ಇದನ್ನೂ ಓದಿ: ಭಾರೀ ಚಿನ್ನ, ಹಣದ ದುರಾಸೆಯಿಂದ ನಿವೃತ್ತ ಯೋಧನ ಹತ್ಯೆ, ಹಂತಕರಿಗೆ ಸಿಕ್ಕಿದ್ದು ಪುಡಿಗಾಸು!

ಆಟೋದಲ್ಲಿ ಹಿಂಬಾಲಿಸಿ ದರೋಡೆ ಮಾಡುತ್ತಿದ್ದ ಖದೀಮರ ಸೆರೆ: ಆಟೋದಲ್ಲಿ ಹಿಂಬಾಲಿಸಿ ನಡೆದು ಹೋಗುವವರನ್ನು ಅಡ್ಡಗಟ್ಟಿ ದರೋಡೆ(Robbery) ಮಾಡುತ್ತಿದ್ದ ಇಬ್ಬರು ಕುಖ್ಯಾತ ದರೋಡೆಕೋರರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಶಿವಾಜಿನಗರ ಮಹಮ್ಮದ್‌ ಅರ್ಬಾಜ್‌(24) ಮತ್ತು ಥಣಿಸಂದ್ರದ ಸೈಯದ್‌ ಅರ್ಬಾಜ್‌(24) ಬಂಧಿತರು(Arrest). ಆರೋಪಿಗಳಿಂದ(Accused) ಚಿನ್ನದ ಸರ, ಬೆಳ್ಳಿಯ ಸರ, ಒಂದು ಮೊಬೈಲ್‌, ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಸೇರಿದಂತೆ ಒಟ್ಟು 2.15 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮಾ.3ರಂದು ಅಮರಜ್ಯೋತಿ ಲೇಔಟ್‌ನ ಮುಖ್ಯರಸ್ತೆಯಲ್ಲಿ ರಾತ್ರಿ 8.15ರ ಸುಮಾರಿಗೆ ಅಜಿತ್‌ ಎಂಬುವವರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆಟೋರಿಕ್ಷಾದಲ್ಲಿ ಬಂದಿರುವ ಆರೋಪಿಗಳು, ಅಜಿತ್‌ ಅವರಿಂದ ಚಿನ್ನ ಹಾಗೂ ಬೆಳ್ಳಿಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?