Renukaswamy Murder Case ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ನಾಲ್ಕು ಪ್ರಮುಖ ಕ್ರೈ ಸ್ಪಾಟ್‌ಗಳನ್ನು ಪೊಲೀಸರು ಗುರುತಿಸಿದ್ದಾರೆ.
ಬೆಂಗಳೂರು (ಆ.16): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಚಿತ್ರ ನಟ ದರ್ಶನ್ ಗ್ಯಾಂಗ್ಗೆ ಕಾನೂನಿನ ಕುಣಿಕೆ ಇನ್ನಷ್ಟು ಬಿಗಿಯಾಗಿದೆ. ಕೊಲೆ ಕೇಸ್‌ನಲ್ಲಿ 4 ಕ್ರೈಂ ಸ್ಪಾಟ್‌ಗಳನ್ನು ಪೊಲೀಸರು ಗುರುತಿಸಿದ್ದಾರೆ. ಈ 4 ಸ್ಥಳದಿಂದ ಬರೋಬ್ಬರಿ 160ಕ್ಕೂ ಹೆಚ್ಚು ಸಾಕ್ಷ್ಯವನ್ನೂ ಸಂಗ್ರಹ ಮಾಡಲಾಗಿದೆ. ಪೊಲೀಸರು ಈಗಾಗಲೇ ಸಾಕ್ಷ್ಯ ಸಂಗ್ರಹ ಮಾಡಿ ಹೇಳಿಕೆಯನ್ನೂ ಪಡೆದುಕೊಂಡಿದ್ದಾರೆ. ಇದರಲ್ಲಿ ಮೊಟ್ಟಮೊದಲ ಸ್ಪಾಟ್ ಚಿತ್ರದುರ್ಗವಾಗಿದೆ. ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದ ಮೆಡಿಕಲ್ ಸ್ಟೋರ್ ಪ್ರಮುಖ ಸ್ಪಾಟ್ ಆಗಿದೆ. ಇಲ್ಲಿಂದ ಅವರು ಆಟೋದಲ್ಲಿ ಹೋಗಿ ಆರೋಪಿಗಳನ್ನು ಭೇಟಿಯಾಗಿದ್ದರು. ರೇಣುಕಾಸ್ವಾಮಿಯನ್ನು ರಾಘವೇಂದ್ರ ಅವರ ಕಾರ್‌ಗೆ ಇದೇ ಸ್ಥಳದಲ್ಲಿ ಹತ್ತಿಸಿಕೊಳ್ಳಲಾಗಿತ್ತು. ಅದರೊಂದಿಗೆ ಬೆಂಗಳೂರಿಗೆ ಬರುವ ವೇಳೆ ಹೋಟೆಲ್ಗೆ ಹೋದ ಸ್ಥಳವನ್ನೂ ಗುರುತು ಮಾಡಲಾಗಿದೆ.
ಇನ್ನು 2ನೇ ಪ್ರಮುಖ ಕ್ರೈಂ ಸ್ಪಾಟ್ ಪಟ್ಟಣಗೆರೆ ಶೆಡ್ ಆಗಿದೆ. ಇಲ್ಲಿ ಪಟ್ಟಣಗೆರೆ ಶೆಡ್ ಜಾಗದ ಸೆಕ್ಯೂರಿಟಿ ಗಾರ್ಡ್ಗಳು, ಶೆಡ್ನ ಮಾಲೀಕರು, ಕೆಲಸ ಮಾಡುತ್ತಿದ್ದ ಸಿಬ್ಬಂದಿ, ರೇಣುಕಾಸ್ವಾಮಿ ಕೊಲೆ ನಂತರ ಯಾರೆಲ್ಲಾ ಭೇಟಿಯಾಗಿದ್ದಾರೋ ಅವರೆಲ್ಲರ ಹೇಳಿಕೆ ಪಡೆಯಲಾಗಿದೆ. ಪ್ರತ್ಯಕ್ಷ , ಪರೋಕ್ಷವಾಗಿ ಆರೋಪಿಗಳ ಸಂಪರ್ಕ ಪಡೆದವರ ಹೇಳಿಕೆಯನ್ನೂ ತೆಗೆದುಕೊಂಡಿದ್ದಾರೆ.
ಇನ್ನು ಮೂರನೇ ಕ್ರೈ ಸ್ಪಾಟ್ ಬೆಂಗಳೂರಿನ ಸ್ಟೋನಿ ಬ್ರೂಕ್ ಪಬ್. ಇಲ್ಲಿ ಸ್ಟೋನಿ ಬ್ರೂಕ್ ಪಬ್ನ ಸಿಬ್ಬಂದಿ, ಪಬ್ ನ ಸೆಕ್ಯೂರಿಟಿ ಗಾರ್ಡ್ಗಳು, ಅಂದು ಪಬ್ಗೆ ಬಂದಿದ್ದ ಗ್ರಾಹಕರು., ಪಬ್ಗೆ ಬಂದಿದ್ದ ದರ್ಶನ್ ಕೆಲ ಅಪ್ತರ ಹೇಳಿಕೆಯನ್ನು ಪಡೆಯಲಾಗಿದೆ. ನಾಲ್ಕನೇ ಕ್ರೈಂ ಸ್ಪಾಟ್ ಸುಮ್ಮನಹಳ್ಳಿ ರಾಜಕಾಲುವೆಯಾಗಿದೆ. ರಾಜಕಾಲುವೆ ಬಳಿಯ ಅಪಾರ್ಟ್ ಮೆಂಟ್ ಸಿಬ್ಬಂದಿ, ರೇಣುಕಾಸ್ವಾಮಿ ಶವ ನೋಡಿದ ಸಾರ್ವಜನಿಕರು, ಶವ ಸಾಗಿಸಿದ ವಾಹನ ನೋಡಿದ್ದ ಅಪಾರ್ಟ್ಮೆಂಟ್ ಸಿಬ್ಬಂದಿಯ ಹೇಳಿಕೆಯನ್ನು ದಾಖಲು ಮಾಡಲಾಗಿದೆ.
ಅಭಿಮಾನಿ ಹಿಡಿದಿದ್ದ ದರ್ಶನ್ ಫೋಟೋ ನೋಡಿ ಓಡೋಡಿ ಬಂದ ಹಂಗರಳ್ಳಿ ಪವಾಡ ಬಸವ; ವಿಡಿಯೋ ವೈರಲ್!
undefined
ದರ್ಶನ್ ಗ್ಯಾಂಗ್ಗೆ ಕೊಲೆ ಕೇಸ್ ಮತ್ತಷ್ಟು ಸಂಕಷ್ಟ ತಂದೊಡ್ಡಿರುವುದಂತೂ ಖಚಿತವಾಗಿದೆ. ಈಗಾಗಲೇ ದರ್ಶನ್, ಪವಿತ್ರಾ ಸೇರಿ 17 ಆರೋಪಿಗಳ ಪ್ರೊಫೈಲ್ ಕೂಡ ರೆಡಿಯಾಗಿದೆ. ಪೊಲೀಸರು ತಯಾರಿಸಿದ ಪ್ರೊಫೈಲ್ ಹೇಗಿದೆ ಅನ್ನೋದನ್ನ ನೋಡೋದಾರೆ, ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪಿಗಳ ಮಾಹಿತಿ ಸಂಪೂರ್ಣವಾಗಿ ಸಂಗ್ರಹವಾಗಿದೆ. ಹುಟ್ಟಿನಿಂದ ಹಿಡಿದು ಕೊಲೆ ದಿನಗಳವರೆಗಿನ ಅವರ ಮಾಹಿತಿ ಪಡೆದುಕೊಳ್ಳಲಾಗಿದೆ. ಆರೋಪಿಗಳ ಆದಾಯ ಎಷ್ಟು..? ಏನ್ ಕೆಲಸ ಮಾಡುತ್ತಿದ್ದರು..? ಆರೋಪಿಗಳು ಯಾವ ವಿಳಾಸದಲ್ಲಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಪಡೆದಿದ್ದಾರೆ. ಯಾವ ಆರೋಪಿಗಳ ವಿರುದ್ಧ ಯಾವ್ಯಾವ ಸಾಕ್ಷ್ಯಗಳು ಇದೆ. ಕೊಲೆ ಕೇಸ್‌ನಲ್ಲಿ ಪ್ರತಿಯೊಬ್ಬ ಆರೋಪಿಯ ಪಾತ್ರವೇನು? ಕೊಲೆ ಕೇಸ್ ನಲ್ಲಿ ಆರೋಪಿಗಳು ಬಂದು ಸಿಲುಕಿದ್ದು ಹೇಗೆ? ಹಿಂದೆ ಆರೋಪಿಗಳ ವಿರುದ್ಧ ಯಾವುದಾದ್ರೂ ಕೇಸ್ ಇದ್ಯಾ? ಹಳೇ ಪ್ರಕರಣಗಳ ಬಗ್ಗೆ ಪ್ರಸ್ತುತ ಸ್ಟೇಟಸ್ ಏನು..? ಎನ್ನುವ ವಿವರಗಳನ್ನೂ ಇದರಲ್ಲಿ ದಾಖಲು ಮಾಡಲಾಗಿದೆ.
ಡಿ ಗ್ಯಾಂಗ್ ಕ್ರೌರ್ಯ ಬಿಚ್ಚಿಟ್ಟ FSL ರಿಪೋರ್ಟ್, ವೃಷಣಕ್ಕೆ ಹಲ್ಲೆ ಸಂಜೆ 6 ರಿಂದ 6.30ರೊಳಗೆ ರೇಣುಕಾಸ್ವಾಮಿ ಸಾವು