ಬೆಂಗಳೂರಿನ ಶ್ರೀನಿವಾಸಪುರದಲ್ಲಿ ನಡೆದ ಘಟನೆ| ಟ್ರ್ಯಾಕ್ಟರ್ ವೇಗವಾಗಿ ಓಡಿಸಿದ್ದಕ್ಕೆ ಚಿಕ್ಕಪ್ಪಂದಿರ ಜಗಳ| ಈ ವೇಳೆ ಮುನಿರಾಜುವಿನ ಹತ್ಯೆ, ಅಳಿಯನ ಮೇಲೆ ಹಲ್ಲೆ| ಮಾವನ ಹತ್ಯೆಗೈದವರ ಕೊಲ್ಲಲು ಅಳಿಯ ಸ್ಕೆಚ್| ಪರಾರಿ ಆಗಲು ಸಹಾಯ ಮಾಡಿದ್ದಾನೆ ಎಂದು ಭಾವನ ಹತ್ಯೆ|
ಬೆಂಗಳೂರು(ಏ.13): ಹಳೇ ದ್ವೇಷಕ್ಕಾಗಿ ಸಂಬಂಧಿಕರೇ ಯುವಕನನ್ನು ಹತ್ಯೆ ಮಾಡಿ ಮಾಡಿ ರುಂಡ- ಮುಂಡ ಬೇರ್ಪಡಿಸಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀನಿವಾಸಪುರದ ರಾಘವೇಂದ್ರ (28) ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಹೇಮಣ್ಣ ಮತ್ತು ವೇಲು ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಟೈಲ್ಸ್ ಕೆಲಸ ಮಾಡುತ್ತಿದ್ದ ರಾಘವೇಂದ್ರ ಪೋಷಕರೊಂದಿಗೆ ಶ್ರೀನಿವಾಸಪುರದಲ್ಲಿ ನೆಲೆಸಿದ್ದ. ಮೃತ ವ್ಯಕ್ತಿಗೆ ಮುನಿರಾಜು ಮತ್ತು ಮುನಿಸ್ವಾಮಿ ಎಂಬುವರು ಇಬ್ಬರು ಚಿಕ್ಕಪ್ಪರಿದ್ದಾರೆ. ಎರಡು ವರ್ಷಗಳ ಹಿಂದೆ ಮುನಿಸ್ವಾಮಿ ಮನೆ ಮುಂದೆ ಮುನಿರಾಜು ವೇಗವಾಗಿ ಟ್ರ್ಯಾಕ್ಟರ್ ಓಡಿಸಿದ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಆಗ ಮುನಿಸ್ವಾಮಿ ಮತ್ತು ಆತನ ಪುತ್ರ ವಾಸು ಸೇರಿಕೊಂಡು ಮುನಿರಾಜುನನ್ನು ಹತ್ಯೆ ಮಾಡಿದ್ದರು. ಅಲ್ಲದೆ, ಮುನಿರಾಜು ಅಳಿಯ ಹೇಮಣ್ಣನ ಮೇಲೂ ಹಲ್ಲೆ ನಡೆಸಿದ್ದರು.
undefined
ಬೆಂಗ್ಳೂರಲ್ಲಿ ಜೋಡಿ ಕೊಲೆ: ನಗ್ನಸ್ಥಿತಿಯಲ್ಲಿ ಮೃತದೇಹ ಪತ್ತೆ
ಪ್ರಕರಣದಲ್ಲಿ ಮುನಿಸ್ವಾಮಿ ಮತ್ತು ವಾಸು ಜೈಲು ಸೇರಿ ಬಳಿಕ ಬಿಡುಗಡೆಯಾಗಿದ್ದರು. ಆರೋಗ್ಯ ಚೇತರಿಕೆ ಕಂಡ ಮೇಲೆ ಹೇಮಣ್ಣ, ಮಾವನ ಕೊಲೆ ಹತ್ಯೆ ದ್ವೇಷಕ್ಕೆ ಮುನಿಸ್ವಾಮಿ ಮತ್ತು ವೇಲು ಹತ್ಯೆಗೆ ಯತ್ನಿಸಿದ್ದ. ಈ ಕೇಸಿನಲ್ಲಿ ಸಂಪಿಗೆಹಳ್ಳಿ ಪೊಲೀಸರು ಹೇಮಣ್ಣನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತ ಭಯಗೊಂಡ ಮುನಿಸ್ವಾಮಿ ಮತ್ತು ವಾಸು ಊರು ಖಾಲಿ ಮಾಡಿಕೊಂಡು ದಾವಣಗೆರೆಯಲ್ಲಿ ನೆಲೆಸಿದ್ದರು. ಜೈಲಿನಿಂದ ಬಿಡುಗಡೆಯಾದ ಹೇಮಣ್ಣ, ಪ್ರತೀಕಾರ ತೀರಿಸಿಕೊಳ್ಳಲು ಮುನಿಸ್ವಾಮಿ ಮತ್ತು ವಾಸುನನ್ನು ಹುಡುಕಾಡುತ್ತಿದ್ದರು.
ಈ ಇಬ್ಬರು ತಲೆಮರೆಸಿಕೊಳ್ಳಲು ರಾಘವೇಂದ್ರ ಕುಟುಂಬ ಸಹಾಯ ಮಾಡಿದೆ ಎಂದು ಅವರ ಮೇಲೆ ಹೇಮಣ್ಣ ಪದೇ ಪದೆ ಜಗಳ ಮಾಡುತ್ತಿದ್ದ. ಇದೇ ದ್ವೇಷಕ್ಕೆ ಭಾನುವಾರ ಸಂಜೆ 6ಕ್ಕೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ರಾಘವೇಂದ್ರನ ಮೇಲೆ ಹೇಮಣ್ಣ ಮತ್ತು ವೇಲು ದಾಳಿ ನಡೆಸಿ ಹತ್ಯೆ ಹತ್ಯೆ ಮಾಡಿ ರುಂಡ-ಮುಂಡ ಬೇರ್ಪಡಿಸಿದ್ದರು ಎಂದು ಪೊಲೀಸರು ತಿಳಿಸಿದರು.