ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯೆಯ ಮೃತದೇಹ: ಅಪ್ಪ ಬಿಚ್ಚಿಟ್ರು ಚಿತ್ರಹಿಂಸೆಯ ಗುಟ್ಟು!

By Web DeskFirst Published Nov 21, 2019, 5:04 PM IST
Highlights

ಫ್ಯಾಟ್‌ನಲ್ಲಿ ವೈದ್ಯೆಯ ಮೃತದೇಹ ಪತ್ತೆ| ಏಕಾಂಗಿಯಾಗಿ ವಾಸಿಸುತ್ತಿದ್ದ ವೈದ್ಯೆಗೆ ಆಗಿದ್ದೇನು?| ಪೊಲೀಸರು ಆತ್ಮಹತ್ಯೆ ಎಂದು ತಿಳಿಸಿದರೂ ತಂದೆ ಹೇಳಿದ ಕತೆಯೇ ಬೇರೆ

ನವದೆಹಲಿ[ನ.21]: ಏಮ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ 29 ವರ್ಷದ ವೈದ್ಯೆ ತಮ್ಮ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ಅಧಿಕ ಪ್ರಮಾಣದ ಅನಸ್ತೇಶಿಯಾದಿಂದ ಮೃತಪಟ್ಟಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೃತ ವೈದ್ಯೆಯನ್ನು ಶೋನಂ ಮೋತಿಸ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಶೋನಂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಶೋನಂ ತಂದೆ, ತನ್ನ ಮಗಳ ಗಂಡ ಹಾಗೂ ಅತ್ತೆ ಮಾವನ ವಿರುದ್ಧ ದೂರು ಸಲ್ಲಿಸಿದ್ದಾರೆ. ಈ ದೂರು ಸ್ವೀಕರಿಸಿದ ಪೊಲೀಸರು ಏಮ್ಸ್ ನಲ್ಲಿ ವೈದ್ಯರಾಗಿರುವ ಆಕೆಯ ಗಂಡ ಹಾಗೂ ಅತ್ತೆ, ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ. 

ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್‌ ಮೇಲ್: ಬೆದರಿಕೆ ಹಾಕಿದಾತನ ಹತ್ಯೆಗೈದ ದಂಪತಿ!

'ಮೃತದೇಹದ ಬಳಿ ಹಲವಾರು ಮಾತ್ರೆ ಹಾಗೂ ಇಂಜೆಕ್ಷನ್ ಸಿರಿಂಜ್ ಗಳು ಪತ್ತೆಯಾಗಿದ್ದು, ವೈದ್ಯೆ ಅಧಿಕ ಪ್ರಮಾಣದ ಅನಸ್ತೇಶಿಯಾ ಸ್ವೀಕರಿಸಿದ್ದಾರೆ. ಈಗಾಗಲೇ ಇವರ ಸಾವಿನ ಹಿಂದಿನ ನಿಖರ ಕಾರಣ ತಿಳಿಯಲು ಸ್ಯಾಂಪಲ್ ಗಳನ್ನು ಲ್ಯಾಬ್ ಗೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ವರದಿ ಸಿಗಲಿದೆ' ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಪವನ್ ಚೌಧರಿ ತಿಳಿಸಿದ್ದಾರೆ.

'2017ರಲ್ಲಿ ಏಮ್ಸ್ ಗೆ ಸೇರ್ಪಡೆಗೊಂಡಿದ್ದ ಶೋನಂ, 2018ರಲ್ಲಿ ತನ್ನ ಸಹೋದ್ಯೋಗಿ ಶಿಖರ್ ಮೋರ್ ರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲ ದಿನಗಳಲ್ಲೇ ಇವರ ನಡುವೆ ಹಲವಾರು ಭಿನ್ನಾಭಿಪ್ರಾಯಗಳು ತಲೆ ದೋರಿದ್ದವು. ಗಾಂಜಾ ವ್ಯಸನಿಯಾಗಿದ್ದ ಶಿಖರ್ , ನನ್ನ ಮಗಳಿಗೂ ಅದನ್ನು ಸೇವಿಸುವಂತೆ ಒತ್ತಾಯಿಸುತ್ತಿದ್ದ. ಶೋನಂ ಏಪ್ರಿಲ್ ನಲ್ಲಿ ಏಮ್ಸ್ ಗೆ ಅಡ್ಮಿಟ್ ಆಗಿದ್ದಾಗ ಈ ವಿಷಯ ನಮಗೆ ತಿಳಿದು ಬಂತು' ಎಂಬುವುದು ಶೋನಂ ತಂದೆಯ ಮಾತಾಗಿದೆ.

'ಶೋನಂ ಗಂಡ ಮಾತ್ರವಲ್ಲ, ಅತ್ತೆ ಹಾಗೂ ಮಾವ ಕೂಡಾ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದರು. ಆಕೆ ಈ ಹಿಂದೆ ಅಪಘಾತಕ್ಕೀಡಾದಾಗಲೂ ಆಕೆಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದರು. ಇದರಿಂದ ಚೇತರಿಸಿಕೊಂಡು ಮತ್ತೆ ಏಮ್ಸ್ ಗೆ ಮತ್ತೆ ಸೇರಿಕೊಂಡಿದ್ದಳು. ಆದರೆ ಮತ್ತೆ ಶೋನಂಗೆ ಗಂಡ ಕಿರುಕುಳ ನೀಡಲಾರಂಭಿಸಿದ್ದ. ಹೀಗಾಗಿ ಆಕೆ ಅಕ್ಟೋಬರ್ ನಲ್ಲಿ ಏಮ್ಸ್ ಬಿಟ್ಟು ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆಗೆ ಸೇರಿದ್ದಳು. ಆದರೆ ಇಲ್ಲಿ ಕೇವಲ ಒಂದೇ ವಾರದಲ್ಲಿ ರಾಜೀನಾಮೆ ನೀಡಿದ್ದಳು' ಎಂದು ಮಗಳ ಕತೆಯನ್ನು ಬಿಚ್ಚಿಟ್ಟಿದ್ದಾರೆ. 

ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನನ್ನು ಕೊಂದ ಮೈದುನ: ವಿಷ ಕುಡಿದು ಸಾವನ್ನಪ್ಪಿದ ಅತ್ತಿಗೆ

'ಆದರೆ ಸೋಮವಾರ ರಾತ್ರಿ ಶೋನಂ ನನ್ನ ಕರೆಗೆ ಉತ್ತರಿಸಲಿಲ್ಲ. ವಾಚ್ ಮನ್ ಗೆ ಕರೆ ಮಾಡಿದಾಗ ಆಕೆ ಬೆಳಗ್ಗಿನಿಂದಲೇ ಕೆಳಗೆ ಬಂದಿಲ್ಲ ಎಂದಿದ್ದಾನೆ. ಇದಾದ ಬಳಿಕ ಮಗಳ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರಿಂದ ಕರೆ ಬಂತು. ನಾನು ಅಲ್ಲಿಗೆ ತಲುಪಲು ಮಂಗಳವಾರವಾಗುತ್ತಿತ್ತು ಹೀಗಾಗಿ ಶಿಖರ್ ಗೆ ಕರೆ ಮಾಡಿ ಅಲ್ಲಿಗೆ ಹೋಗುವಂತೆ ತಿಳಿಸಿದೆ. ಆದರೆ ಆತ ಹೋಗಲು ನಿರಾಕರಿಸಿದ್ದ' ಎಂದು ಶೋನಂ ತಂದೆ ತಿಳಿಸಿದ್ದಾರೆ.

ನವೆಂಬರ್ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!