ಉದ್ಯಮಿ ಆತ್ಮಹತ್ಯೆ ಕೇಸ್‌ನಲ್ಲಿ ಅರವಿಂದ ಲಿಂಬಾವಳಿಗೆ ಬಿಗ್‌ ರಿಲೀಫ್‌: ಡೆತ್‌ನೋಟ್‌ ಆರೋಪಕ್ಕೆ ಸಾಕ್ಷ್ಯಗಳಿಲ್ಲ

By Sathish Kumar KHFirst Published May 31, 2023, 4:33 PM IST
Highlights

ಬೆಂಗಳೂರಿನ ಉದ್ಯಮಿ ಪ್ರದೀಪ್‌ ಕಗ್ಗಲೀಪುರದಲ್ಲಿ ಕಾರಿನಲ್ಲಿಯೇ ಶೂಟ್‌ಔಟ್‌ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದರು. ಈ ಕೇಸಿನ ಆರೋಪಿ ಮಾಜಿ ಶಾಸಕ ಅರವಿಂದ ಲಿಂಬಾವಳಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. 

ಬೆಂಗಳೂರು (ಮೇ 31): ಬೆಂಗಳೂರಿನ ಉದ್ಯಮಿ ಪ್ರದೀಪ್‌ ಕಗ್ಗಲೀಪುರದಲ್ಲಿ ಕಾರಿನಲ್ಲಿಯೇ ಡೆತ್‌ನೋಟ್‌ ಬರೆದಿಟ್ಟು ಶೂಟ್‌ಔಟ್‌ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದರು. ಅದರಲ್ಲಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ಆತ್ಮಹತ್ಯೆಗೆ ಕಾರಣವೆಂದು ಹೆಸರು ಬರೆದಿಟ್ಟಿದ್ದರು. ಆದರೆ, ಡೆತ್‌ನೋಟ್‌ನಲ್ಲಿ ಬರೆದಿಟ್ಟ ಆರೋಪಕ್ಕೆ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ಅರವಿಂದ ಲಿಂಬಾವಳಿಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ. 

ಕಗ್ಗಲೀಪುರದ ಬಳಿ ಜ.2ರಂದು ಉದ್ಯಮಿ ಪ್ರದೀಪ್ ಶೂಟೌಟ್ ಮೂಲಕ ಕಾರಿನಲ್ಲಿಯೇ ಕುಳಿರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ, ಹಣಕಾಸಿನ ಸಮಸ್ಯೆ ಮತ್ತು ಸಾಲದಿಂದ ಹೀಗೆ ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿತ್ತು. ಆದರೆ, ಉದ್ಯಮಿ ಸಾಯುವ ಮುನ್ನ ಡೆತ್‌ನೋಟ್‌ ಅನ್ನು ಬರೆದು ಅದರಲ್ಲಿ ಒಟ್ಟು 6 ಜನರ ಹೆಸರನ್ನು 1. ಗೋಪಿ ಕೆ. ಉದ್ಯಮಿ, 2. ಸೋಮಯ್ಯ, ಉದ್ಯಮಿ, 3. ಅರವಿಂದ್ ಲಿಂಬಾವಳಿ, ಶಾಸಕ 4. ಜಿ ರಮೇಶ್ ರೆಡ್ಡಿ, ಉದ್ಯಮಿ, 5. ಜಯರಾಮ್ ರೆಡ್ಡಿ, ಉದ್ಯಮಿ ಹಾಗೂ 6. ರಾಘವ ಭಟ್, ಉದ್ಯಮಿ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ, ಈಗ ಪೊಲೀಸ್‌ ತನಿಖಾಧಿಕಾರಿಯಿಂದ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ. 

ಉದ್ಯಮಿ ಆತ್ಮಹತ್ಯೆ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್‌ಐಆರ್‌ ಪ್ರಶ್ನಿಸಿ ಪೊಲೀಸರಿಗೆ ಪ್ರಭಾವಿಗಳ ಕರೆ

ಇನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾದ ಬಿ ರಿಪೋರ್ಟ್‌ನಲ್ಲಿ ಉದ್ಯಮಿ ಪ್ರದೀಪ್‌ ಶೂಟೌಟ್ ಪ್ರಕರಣಗಳಲ್ಲಿ ಯಾವುದೇ ಸಾಕ್ಷ್ಯವಿಲ್ಲ ಎಂದು ಉಲ್ಲೇಖ ಮಾಡಲಾಗಿದೆ. ತಾನು ಮಾಡಿದ ಹಣಕಾಸಿನ ಸಮಸ್ಯೆಯಿಂದಲೇ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಇನ್ನು ಅರವಿಂದ ಲಿಂಬಾವಳಿ ಸೇರಿ ಬರೋಬ್ಬರಿ 25 ಮಂದಿಯ ಹೇಳಿಕೆಯನ್ನ ಪೊಲೀಸರು ದಾಖಲಿಸಿದ್ದಾರೆ. ಇದರಲ್ಲಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ಕೂಡ 4 ಪುಟಗಳ ಹೇಳಿಕೆ ನೀಡಿದ್ದಾರೆ.

ಹೆಸರು ಬರೆದಿಟ್ಟರೂ ಸಾಕ್ಷಿ ಸಿಕ್ಕಿಲ್ಲ:  ಅರವಿಂದ ಲಿಂಬಾವಳಿಯ ಸಾಮಾಜಿಕ ಜಾಲತಾಣ ವ್ಯವಸ್ಥೆಯನ್ನು ಉದ್ಯಮಿ ಪ್ರದೀಪ್‌ ನೋಡಿಕೊಳ್ತಿದ್ದರು.  ಆದರೆ, ಹಣಕಾಸಿನ ವಿಚಾರವಾಗಿಯೂ ಸ್ನೇಹಿತನ ಜೊತೆ ಜಗಳವಾದಾಗ ಸಮಸ್ಯೆ ಬಗೆಹರಿಸುವಂತೆಯೂ ಮಾಜಿ ಶಾಸಕ ಅರವಿಂದ ಲಿಂಬಾವಳಿಗೆ ಪ್ರದೀಪ್‌ ಮನವಿ ಮಾಡಿದ್ದರು. ಆದರೆ, ಸಾಲದ ವಿಚಾರವಾಗಿ ಯಾವುದೇ ಸಹಾಯವಾಗಿಲ್ಲ ಎಂದು ತನ್ನ ಆತ್ಮಹತ್ಯೆಗೆ ಅರವಿಂದ ಲಿಂಬಾವಳಿ ಅವರೂ ಕಾರಣವೆಂದು ಡೆತ್‌ನೋಟ್‌ ಬರೆದಿಟ್ಟಿದ್ದರು. ಆದರೆ, ಡೆತ್‌ನೋಟ್‌ನಲ್ಲಿ ಪ್ರದೀಪ್ ಮಾಡಿರೋ ಆರೋಪಕ್ಕೆ ಸ್ಪಷ್ಟ ಸಾಕ್ಷ್ಯ ಸಿಗ್ತಿಲ್ಲ. ಪ್ರದೀಪ್ ಕೆಲವರ ಬಳಿ ಸಾಕಷ್ಟು ಸಾಲ ಮಾಡಿರೋದು ಸಹ ಬೆಳಕಿಗೆ ಬಂದಿದೆ. ಆತ್ಮಹತ್ಯೆ‌ಗೆ ಎರಡ್ಮೂರು ದಿನದ ಮುಂಚೆಯೇ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡನನ್ನೇ ಕೊಲ್ಲಿಸಿದ ಪತ್ನಿ

ಆತ್ಮಹತ್ಯೆಗೆ ಕೌಟುಂಬಿಕ, ಹಣಕಾಸಿನ ಸಮಸ್ಯೆ ಕಾರಣ: ಕೌಟುಬಿಕ‌ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಎ-1 ಆರೋಪಿ ಗೋಪಿ ಸೇರಿ ಶಾಸಕ ಅರವಿಂದ ಲಿಂಬಾವಳಿ, ಹಾಗೂ ಪತ್ನಿ ಸೇರಿ ಹತ್ತು ಮಂದಿ ಕುಟುಂಬಸ್ಥರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಮೊಬೈಲ್ ನ ಟೆಕ್ನಿಕಲ್ ಎವಿಡೆನ್ಸ್‌ನಲ್ಲಿಯೂ ಕೂಡ ಪ್ರದೀಪ್‌ನ ಡೆತ್ ನೋಟ್ ಬಗ್ಗೆ ಪ್ರಬಲ ಸಾಕ್ಷಿಗಳು ಲಭ್ಯವಾಗಿಲ್ಲ. ಎ1 ಆರೋಪಿಯಾಗಿದ್ದ ಗೋಪಿ ಮತ್ತು ಮೃತ ಪ್ರದೀಪ್ ಇಬ್ಬರೂ ಪಾರ್ಟರ್  ಆಗಿದ್ದು, ಪಬ್ ಪ್ರಾರಂಭಿಸಿದ್ದರು. ಪ್ರದೀಪ್ ಪತ್ನಿಯೂ ಸಹ ಸ್ನೇಹಿತರ ಹಣಕಾಸಿನ ವ್ಯವಹಾರದ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲವೆಂದು ಹೇಳಿಕೆ ನೀಡಿದ್ದಾರೆ.

click me!