ದಲಿತ ಯುವಕನಿಗೆ ಬಲವಂತದಿಂದ ಮುಂಜಿ ಮಾಡಿಸಿ ಇಸ್ಲಾಂಗೆ ಮತಾಂತರ: ಹುಬ್ಬಳ್ಳಿಯಲ್ಲಿ ಕೇಸು ದಾಖಲು

By Govindaraj S  |  First Published Sep 25, 2022, 2:15 AM IST

ದಲಿತ ಯುವಕನಿಗೆ ಒತ್ತಾಯ ಪೂರ್ವಕವಾಗಿ ಖತ್ನಾ ಮಾಡಿ ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ಹುಬ್ಬಳ್ಳಿ ನವನಗರ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 


ಹುಬ್ಬಳ್ಳಿ (ಸೆ.25): ದಲಿತ ಯುವಕನಿಗೆ ಒತ್ತಾಯ ಪೂರ್ವಕವಾಗಿ ಖತ್ನಾ ಮಾಡಿ ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ಹುಬ್ಬಳ್ಳಿ ನವನಗರ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಹುಬ್ಬಳ್ಳಿ ಪೊಲೀಸರ ತಂಡವೊಂದು ಬೆಂಗಳೂರಿಗೆ ತನಿಖೆಗೆಂದು ತೆರಳಿದೆ. ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ (26) ಮತಾಂತರಕ್ಕೆ ಒಳಗಾದ ಯುವಕ. ಮಂಡ್ಯದ ಅತ್ತಾವರ ರೆಹಮಾನ್‌, ಬೆಂಗಳೂರಿನ ಅಜೀಸಾಬ್‌, ನಯಾಜ್‌ ಪಾಷಾ, ನದೀಮ್‌ ಖಾನ್‌, ಅನ್ಸಾರ್‌ ಪಾಷಾ, ಸಯ್ಯದ್‌ ದಸ್ತಗಿರ, ಮಹ್ಮದ್‌ ಇಕ್ಬಾಲ್‌, ರಫಿಕ್‌, ಶಬ್ಬೀರ್‌, ಖಾಲಿದ್‌, ಶಾಕಿಲ್‌ ಮತ್ತು ಅಲ್ತಾಪ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಆಗಿದ್ದೇನು?: ಶ್ರೀಧರ ಗಂಗಾಧರ ಖಾಸಗಿ ಕಂಪನಿಯೊಂದರಲ್ಲಿನ ನೌಕರ. ಈತನಿಗೆ ಹಣಕಾಸಿನ ತೊಂದರೆ ಇತ್ತು. ಈ ವಿಷಯವನ್ನು ಆರೋಪಿ ಅತ್ತಾವರ ರೆಹಮಾನ್‌ಗೆ ತಿಳಿಸಿದ್ದಾನೆ. ಹಣಕಾಸಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಆತನನ್ನು ನಂಬಿಸಿ ಮೇ ತಿಂಗಳಲ್ಲಿ ಬೆಂಗಳೂರಿನ ಬನಶಂಕರಿಯ ಮಸೀದಿಯೊಂದರಲ್ಲಿ ಬಲವಂತವಾಗಿ ಬಂಧಿಸಿಟ್ಟಿದ್ದರು. ನಂತರ ಮುಸ್ಲಿಂ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮನಪರಿವರ್ತನೆ ಮಾಡಿ, ಮರ್ಮಾಂಗದ ತುದಿ ಕತ್ತರಿಸಿ ಖತ್ನಾ ಮಾಡಿದ್ದಾರೆ. ದನದ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಿ ತಿನ್ನಿಸಿದ್ದಾರೆ. ಮತಾಂತರದ ಬಗ್ಗೆ ಖಾಲಿ ಬಾಂಡ್‌ ಪೇಪರ್‌ ಮೇಲೆ ಸಹಿ ಕೂಡ ಪಡೆದಿದ್ದಾರೆ. 

Tap to resize

Latest Videos

Pak Hindu ಹದಿಹರೆಯ ಹಿಂದೂ ಹುಡುಗಿಯರ ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ!

ಅಲ್ಲಿಂದ ತಿರುಪತಿ, ಆಂಧ್ರದ ಚಿತ್ತೂರ, ಭುವನ್‌ನಗರ ಸೇರಿದಂತೆ ವಿವಿಧ ಊರಿನ ಮಸೀದಿಗಳಿಗೆ ಕರೆದುಕೊಂಡು ಹೋಗಿ ಇಸ್ಲಾಂ ಧರ್ಮದ ತರಬೇತಿ ನೀಡಿದ್ದಾರೆ. ಪ್ರಾರ್ಥನೆ ಹಾಗೂ ಇತರೆ ಪದ್ಧತಿಗಳ ಕುರಿತು ತರಬೇತಿ ನೀಡಿದ್ದಾರೆ. ಪ್ರಾರ್ಥನೆಯನ್ನೂ ಮಾಡಿಸಿದ್ದಾರೆ. ಶ್ರೀಧರ ಕೈಯಲ್ಲಿ ಪಿಸ್ತೂಲ್‌ ಹಿಡಿಸಿ ಫೋಟೋ ತೆಗೆಸಿದ್ದಾರೆ. ವಿಡಿಯೋ ಮಾಡಿಕೊಂಡಿದ್ದಾರೆ. ಫೋಟೋ-ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಭಯೋತ್ಪಾದಕನೆಂದು ಬಿಂಬಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ. ಶ್ರೀಧರ ಖಾತೆಗೆ 35 ಸಾವಿರ ಹಣ ವರ್ಗಾಯಿಸಿ ತಾವು ಹೇಳಿದಂತೆ ಕೇಳಬೇಕು. ಪ್ರತಿವರ್ಷ ಮೂವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಬೇಕು ಎಂದು ಜೀವ ಬೆದರಿಕೆ ಹಾಕಿದ್ದಾರೆ.

ಹುಬ್ಬಳ್ಳಿಗೆ ಬಂದಿದ್ದು ಹೇಗೆ?: ಈ ನಡುವೆ ಶ್ರೀಧರ ಅವರಿಗೆ ಫೇಸ್‌ಬುಕ್‌ನಲ್ಲಿ ಹುಬ್ಬಳ್ಳಿಯ ಯುವತಿಯೊಬ್ಬಳು ಪರಿಚಯವಾಗುತ್ತದೆ. ಆ ಯುವತಿಯ ಜತೆಗೆ ಚಾಟಿಂಗ್‌ ನಡೆಯುತ್ತದೆ. ಯುವತಿಯೂ ಶ್ರೀಧರನಿಗೆ ಹುಬ್ಬಳ್ಳಿಗೆ ಬರುವಂತೆ ಕರೆದಿದ್ದಾಳೆ. ಅದರಂತೆ ಸೆ. 18ರಂದು ಹುಬ್ಬಳ್ಳಿಗೆ ಶ್ರೀಧರ ಆಗಮಿಸಿದ್ದಾನೆ. ಇಲ್ಲೇ ಎರಡ್ಮೂರು ದಿನ ಕಳೆದಿದ್ದಾನೆ. ಸೆ. 21ರಂದು ರಾತ್ರಿ ವೇಳೆ ಇಲ್ಲಿನ ಭೈರಿ ದೇವರಕೊಪ್ಪದಲ್ಲಿ ಅಡ್ಡಾಡುತ್ತಿದ್ದಾಗ ಅಪರಿಚಿತರು ಈತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಈತ ಇಲ್ಲಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಕಿಮ್ಸ್‌ನಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಹಿಂದಿನ ಘಟನೆಯೆಲ್ಲ ಬಿಚ್ಚಿಟ್ಟಿದ್ದಾನೆ. ನವನಗರ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Anti Conversion Act: ಮತಾಂತರ ನಿಷೇಧ ಕಾಯ್ದೆ ಹಿಂದಿನ ಶಕ್ತಿ ಮುನಿರಾಜಗೌಡ..!

ಬೆಂಗಳೂರಿಗೆ ತಂಡ: ಈ ನಡುವೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನೂ ಶುರು ಮಾಡಿದ್ದಾರೆ. ಎಸಿಪಿ ಹಂತದ ಹಿರಿಯ ಅಧಿಕಾರಿಯ ನೇತೃತ್ವದ ತಂಡವೊಂದು ತನಿಖೆಗೆಂದು ಬೆಂಗಳೂರಿಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

click me!