
ಪೀಣ್ಯ ದಾಸರಹಳ್ಳಿ : ರಸ್ತೆ ಬದಿಯ ಜಾಹಿರಾತು ಫ್ಲೆಕ್ಸ್‌ವೊಂದು ಯಮರೂಪದಲ್ಲಿ ಹಾರಿಬಂದು ಚಲಿಸುತ್ತಿದ್ದ ಕಾರಿಗೆ ಬಡಿದ ಪರಿಣಾಮ ಕಾರಿನ ಮುಂಭಾಗದ ಗ್ಲಾಸ್ ಪುಡಿ ಪುಡಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ತುಮಕೂರು ರಸ್ತೆಯ 8ನೇ ಮೈಲಿ ಬಳಿ ನಡೆದಿದ್ದು, ಈ ದೃಶ್ಯ ವೈರಲ್ ಆಗಿದೆ.
ನೆಲಮಂಗಲ ಮೂಲದ ದಂಪತಿ ಮಗು ಸಹಿತ ತಮ್ಮ ಕಾರಿನಲ್ಲಿ 8ನೇ ಮೈಲಿ ಫ್ಲೈ ಓವರ್ ಮೇಲೆ ನೆಲಮಂಗಲ ಕಡೆ ಬರುತ್ತಿದ್ದರು. ಇದೇ ವೇಳೆ ಫ್ಲೈ ಓವರ್ ಮೇಲೆ ಕಟ್ಟಲಾಗಿದ್ದ ಜಾಹಿರಾತು ಫ್ಲೆಕ್ಸ್ ತೆರವು ಮಾಡಲಾಗುತ್ತಿತ್ತು. ತೆರವು ಮಾಡುತ್ತಿರುವ ಸಿಬ್ಬಂದಿ ಮುಂಜಾಗ್ರತೆ ವಹಿಸದೆ ಏಕಾಏಕಿ ಎಳೆದ ಪರಿಣಾಮ ಫ್ಲೆಕ್ಸ್ ಕಾರಿಗೆ ಬಂದು ಅಪ್ಪಳಿಸಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ದಂಪತಿ ಹಾಗೂ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗದ ಗಾಜು ನುಚ್ಚುನೂರಾಗಿದೆ. ಈ ಭಯಾನಕ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ದುರಂತದ ಬಗ್ಗೆ ಪ್ರಶ್ನೆ ಮಾಡಲು ದಂಪತಿ ನೆಲಮಂಗಲ ನವಯುಗ ಬಳಿಯ ಟೋಲ್ ಕಂಪನಿ ಕಚೇರಿಗೆ ಹೋದಾಗ ಕಚೇರಿ ಸಿಬ್ಬಂದಿ ಸರಿಯಾಗಿ ಸ್ಪಂದಿಸದೆ ಉಡಾಫೆ ಉತ್ತರ ನೀಡಿದ್ದಾರೆ. ಅಲ್ಲದೇ ದಂಪತಿಗೆ ದಮ್ಕಿ ಸಹ ಹಾಕಿದ್ದಾರೆ. ಈ ವರ್ತನೆಗೆ ಸ್ಥಳಿಯರು ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು,
ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ.
ಜೀವ ಕೈಯಲ್ಲಿಡಿದು ಓಡಾಡುವ ದುಸ್ಥಿತಿ:
ತುಮಕೂರು ರಸ್ತೆಯ 8ನೇ ಮೈಲಿ ಫ್ಲೈ ಓವರ್ ಮೇಲೆ ಕಂಬಗಳಿಗೆ ಕಟ್ಟಿರುವ ಜಾಹಿರಾತು ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ. ಈಗ ಫ್ಲೆಕ್ಸ್ ಕಳಚಿಕೊಂಡು ಕಾರಿನ ಮೇಲೆ ಬಿಳುವ ದೃಶ್ಯದಿಂದ ವಾಹನ ಸವಾರರನ್ನು ಬೆಚ್ಚಿ ಬಿದ್ದಿದ್ದು, ರಾಷ್ಟ್ರಿಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ