* ಬೇಲೂರಿನ ಸಂಕೇನಹಳ್ಳಿಯಲ್ಲಿ ಕೆಎಸ್ ಆರ್ ಟಿ ಸಿ ಬಸ್ ಮತ್ತು ಆಲ್ಟೊ ಕಾರು ನಡುವೆ ಮುಖಾಮುಖಿ ಡಿಕ್ಕಿ
* ದುರ್ಘಟನೆಯಲ್ಲಿ ಐವರು ಐವರು ವಿದ್ಯಾರ್ಥಿಗಳ ಸಾವು
* ಮೃತದೇಹಗಳನ್ನು ತೆಗೆಯಲು ಹರಸಾಹಸ
* ತುಂಗಾ ನದಿಯಲ್ಲಿ ವಿದ್ಯಾರ್ಥಿಗಳು ನೀರು ಪಾಲು
ಹಾಸನ( ಮಾ. 23) ಆಗಷ್ಟೇ ಕಾಲೇಜು ಮುಗಿಸಿ ಕಾರಿನಲ್ಲಿ ಸ್ಟಡಿ ಮೆಟೀರಿಯಲ್ ತರೋದಕ್ಕೆ ಅಂತ ಹೊರಟಿದ್ದ ಐವರು ವಿದ್ಯಾರ್ಥಿಗಳನ್ನ (Students) ರಸ್ತೆ ಮಧ್ಯೆ ಕಾದು ಕುಳಿತಿದ್ದ ಜವರಾಯ ಹೊತ್ತೊಯ್ದಿರೋ ಭೀಕರ ಘಟನೆ ಹಾಸನದಲ್ಲಿ (Hassan)ನಡೆದಿದೆ. ಕೆಎಸ್ ಆರ್ ಟಿಸಿ (KSRTC)ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ರೆ, (Death)ಆಸ್ಪತ್ರೆಗೆ ಸಾಗಿಸೋ ಮಾರ್ಗಮಧ್ಯೆ ಓರ್ವ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸೂಕ್ತಪರಿಹಾರಕ್ಕೆ ಸಂಬಂಧಿಕರು ಆಗ್ರಹಿಸಿದ್ದಾರೆ
ಕೆ.ಎಸ್ ಆರ್ ಟಿಸಿ ಬಸ್ ಮತ್ತು ಆಲ್ಟೋ ಕಾರು ನಡುವೆ ಭೀಕರ ಅಪಘಾತ.. ಕಾರಿನಲ್ಲಿದ್ದ ಐವರು ವಿದ್ಯಾರ್ಥಿಗಳ ಧಾರುಣ ಸಾವು.. ಮೃತ ದೇಹಗಳನ್ನು ಹೊರ ತೆಗೆಯಲು ಸ್ಥಳೀಯರ ಹರಸಾಹಸ.. ಆಗಷ್ಟೇ ಕಾಲೇಜು ಮುಗಿಸಿ ಒಂದೇ ಕಾರಿನಲ್ಲಿ ಹೊರಟಿದ್ದ ಐವರು ವಿದ್ಯಾರ್ಥಿಗಳ ಮೇಲೆ ಜವರಾಯನ ಅಟ್ಟಹಾಸ...ಹೌದು, ಹಾಸನ ಜಿಲ್ಲೆ ಬೇಲೂರು ತಾ. ಸಂಕೇನಹಳ್ಳಿ ಗ್ರಾಮದ ಬಳಿ ಭೀಕರ ಈ ಅಪಘಾತ ನಡೆದಿದ್ದು, ಬೇಲೂರಿನಿಂದ ಹಾಸನದ ಕಡೆ ತೆರಳುತ್ತಿದ್ದ ವಿದ್ಯಾರ್ಥಿಗಳಿದ್ದ ಆಲ್ಟೋ ಕಾರು ಬೆಂಗಳೂರಿನಿಂದ ಚಿಕ್ಕಮಗಳೂರು ಕಡೆ ತೆರಳುತ್ತಿದ್ ಎದುರಿನಿಂದ ಬಂದ ಸಾರಿಗೆ ಬಸ್‌ಗೆ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ವಿದ್ಯಾರ್ಥಿ ಹಾಸನದ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ಸಾಗಿಸೋ ವೇಳೆ ಮೃತಪಟ್ಟಿದ್ದಾನೆ.
ಸಾವನ್ನಪ್ಪಿರೋ ವಿದ್ಯಾರ್ಥಿಗಳು ಬೇಲೂರು ಪಟ್ಟಣ ನಿವಾಸಿಗಳೇ ಆಗಿದ್ದು, ಕಾಲೇಜು ಮುಗಿಸಿ ಹಾಲ್ ಟಿಕೇಟ್ ಹಾಗೂ ಸ್ಟಡಿ ಮೆಡೀರಿಯಲ್ ತರೋದಕ್ಕೆ ಅಂತಾ ಹಾಸದ ಕಡೆ ಹೊರಟಿದ್ದಾರೆ. ನಾಲ್ವರು ಬೇಲೂರಿನ ವಿದ್ಯಾ ವಿಕಾಸ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಓರ್ವ ಹಾಸನ ನಗರದ ಎನ್ ಡಿ ಆರ್ ಕೆ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಹಾಸನದಲ್ಲಿ ಓದ್ತಿರೋ ರಿಹಾನ್ ಪಾಷಾನ ಅಡ್ಮಿಶನ್ ಟಿಕೇಟ್ ತರೋದಕ್ಕೆ ಹೋಗ್ತಿದ್ರು ಅಂತಾ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಹಸನ್ ಮೋಹಿನ್(20) ರಿಹಾನ್ ಪಾಷಾ (19 ) ಮೊಹಮ್ಮದ್ ಕೈಫ್ (18), ಮೊಹಮ್ಮದ್ ಜಿಲಾನಿ (20), ಅಕ್ಮಲ್ ಪಾಷಾ (19) ಸಾವಿಗೀಡಾದ ವಿದ್ಯಾರ್ಥಿಗಳಾಗಿದ್ದಾರೆ. ಘಟನೆಗೆ ಅತಿ ವೇಗದಿಂದ ಮತ್ತೊಂದು ವಾಹನವನ್ನು ಹಿಮ್ಮೆಟ್ಟುವಾಗ ಎದುರಿನಿಂದ ಬರುತ್ತಿದ್ದ ಬಸ್‌ನ್ನು ಗಮನಿಸದೇ ಮುನ್ನುಗ್ಗಿದ್ದೇ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಪೊಲೀಸರ ತನಿಖೆ ನಂತರವಷ್ಟೇ ಘಟನೆಗೆ ಸರಿಯಾದ ಕಾರಣ ಸಿಗಬೇಕಿದೆ.
Mysuru: ಮಗು ಹುಟ್ಟುವ ವೇಳೆ ಅಡ್ಡ ಬಂದ ಜಾತಿ...ಗರ್ಭಿಣಿ ಪತ್ನಿ ಕೊಲೆ
ಕೆ ಎಸ್ ಆರ್ ಟಿ ಸಿ ಚಾಲಕನ ಅಜಗರೂಕತೆ ಹಾಗೂ ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ಸಂಬಂಧಿಕರು ಆರೋಪಿಸ್ತಿದ್ದಾರೆ. ಒಟ್ಟಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಿ ನಮಗೆ ಮುಂದೆ ದಾರಿ ದೀಪವಾಗ್ತಾರೆ ಎಂದುಕೊಂಡಿಂದ ಪೋಷಕರು ಈ ಘಟನೆಯಿಂದ ಜರ್ಜರಿತರಾಗಿದ್ದು. ಜವರಾಯನ ಅಟ್ಟಹಾಸಕ್ಕೆ ಐವರು ವಿದ್ಯಾರ್ಥಿಗಳು ಏಕಕಾಲಕ್ಕೆ ಇಹಲೋಕ ತ್ಯಜಿಸುವಂತಾಗಿದೆ.
ವಿದ್ಯಾರ್ಥಿಗಳು ನೀರು ಪಾಲು: ತುಂಗಾ ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿಗಳಿಬ್ಬರು ನೀರು ಪಾಲಾಗಿದ್ದಾರೆ. ತೀರ್ಥಹಳ್ಳಿ ಪಟ್ಟಣದ ರಾಮ ಮಂಟಪ ಬಳಿ ದುರ್ಘಟನೆ ನಡೆದಿದೆ.
ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಸೋಮವಾರ ಮಧ್ಯಾಹ್ನ ನೀರು ಪಾಲಾಗಿದ್ದಾರೆ . ತುಂಗಾ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ , ಅರಳ ಸುರಳಿ ಸಮೀಪದ ಬಂದ್ಯಾದ ವರ್ಧನ್ ( 19 ) ಹಾಗೂ ಎಲೆಕ್ಟ್ರಾನಿಕ್ ಅಂಗಡಿ ಕೆಲಸಗಾರ , ಸೋನಲೆ ಮಂಜು ( 20 ) ನೀರು ಪಾಲಾದವರು
ಮೊಬೈಲ್ ಆಧಾರದ ಮೇಲೆ ಲೊಕೇಷನ್ ಪತ್ತೆ ಮಾಡಲಾಗಿದೆ. ಅಗ್ನಿಶಾಮಕದ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ . ಸ್ಥಳದಲ್ಲಿ ಯೂನಿ ಫಾರ್ಮ್ , ಮೊಬೈಲ್ ಪತ್ತೆಯಾಗಿವೆ . ತೀರ್ಥಹಳ್ಳಿ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿ ಶೋಧ ಕಾರ್ಯ ನಡೆಸಿದ್ದಾರ