ಕಳೆದ ಕೆಲ ವರ್ಷಗಳ ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಿದ್ರೆ ಜಿಮ್‌ನಲ್ಲಿ ಉಂಟಾಗುವ ಅನೈತಿಕ ಸಂಬಂಧಗಳಿಂದ ಉಂಟಾಗುವ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ.
ನವದೆಹಲಿ: ಉತ್ತರ ಭಾರತದ ಭಾಗದಲ್ಲಿ ಪತಿಯ ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಕರ್ವಾಚೌತ್ ಆಚರಿಸಿದ್ರೆ, ಕರ್ನಾಟಕದಲ್ಲಿ ಭೀಮನ ಅಮವಾಸ್ಯೆ ಆಚರಿಸುತ್ತಾರೆ. ಜಿಮ್ ಟ್ರೈನರ್ (Gym Trainer) ಮೋಹದ ಬಲೆಯಲ್ಲಿ ತಮ್ಮವರನ್ನೇ ಕೊಲೆ (Murder) ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ಹರಿಯಾಣದ ಪಾಣಿಪತ್ ಪೊಲೀಸರು ಎರಡೂವರೆ ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. 2021ರಲ್ಲಿ ವಿನೋದ್ ಬರಾಡಾ ಎಂಬವರ ಕೊಲೆ ನಡೆದಿತ್ತು. ತನಿಖೆಯಲ್ಲಿ ಆತನ ಪತ್ನಿಯೇ ಹಂತಕಿ ಎಂಬ ವಿಚಾರ ಬೆಳಕಿಗೆ ಬಂದಿದೆ. ವಿನೋದ್ ಪತ್ನಿ ನಿಧಿ ತನ್ನ ಪ್ರೇಮಿ ಜಿಮ್ ಟ್ರೈನರ್ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದಳು. ಕಳೆದ ಕೆಲ ವರ್ಷಗಳ ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಿದ್ರೆ ಜಿಮ್‌ನಲ್ಲಿ ಉಂಟಾಗುವ ಅನೈತಿಕ ಸಂಬಂಧಗಳಿಂದ ಉಂಟಾಗುವ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ.
ಸುಳ್ಳು ಹೇಳಿ ಮದುವೆಯಾಗಿದ್ದ ಜಿಮ್ ಟ್ರೈನರ್
ಜೂನ್ 2023ರಲ್ಲಿ ಗುಜರಾತಿನ ಸೂರತ್ ಎಂಬಲ್ಲಿ ನಡೆದ ಅಪರಾಧ ಪ್ರಕರಣ ಸ್ಥಳೀಯ ಜನರನ್ನು ಬೆಚ್ಚಿಬೀಳಿಸಿತ್ತು. ಕೌಸರ್ ಹೆಸರಿನ ವ್ಯಕ್ತಿ ಜಿಮ್ ಸೆಂಟರ್ ನಡೆಸುತ್ತಿದ್ದನು. ಈತನ ಬಳಿ ತರಬೇತಿಗಾಗಿ ವಿವಾಹಿತ ಮಹಿಳೆ ಬರುತ್ತಿದ್ದಳು. ತರಬೇತಿ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಮದುವೆಯಾಗೋದಾಗಿ ನಂಬಿಸಿದ ಕೌಸರ್, ಮಹಿಳೆ ಜೊತೆ ದೈಹಿಕ ಸಂಪರ್ಕ ಹೊಂದಿದ್ದಾನೆ. ಕೌಸರ್‌ಗಾಗಿ ಗಂಡನಿಗೆ ಡಿವೋರ್ಸ್ ನೀಡಿದ ಮಹಿಳೆಗೆ ಆತನ ಮನೆಗೆ ಹೋದಾಗ ಶಾಕ್ ಅಗಿತ್ತು. ಮನೆಯಲ್ಲಿದ್ದ ಮಹಿಳೆ ಕೌಸರ್‌ನ ಮೊದಲ ಪತ್ನಿ ಎಂಬ ವಿಷಯ ಆಕೆಗೆ ಗೊತ್ತಾಗಿದೆ. ಇದಾದ ಬಳಿಕ ಕೌಸರ್ ವಿರುದ್ಧ ಮಹಿಳೆ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಳು.
ಜಿಮ್ ಟ್ರೈನರ್ ವಿರುದ್ಧ ಲವ್ ಜಿಹಾದ್ ಆರೋಪ
2022ರಲ್ಲಿಉತ್ತರಪ್ರದೇಶದ ಲಕ್ನೋ ಪ್ರದೇಶದ ಜಿಮ್ ಟ್ರೈನರ್ ಮೇಲೆ ಲವ್ ಜಿಹಾದ್ ಆರೋಪ ಕೇಳಿ ಬಂದಿತ್ತು. ಆರೋಪಿ ಜೊತೆಯಲ್ಲಿಯೇ ಮಹಿಳೆ ಯೋಗದ ತರಬೇತಿ ನೀಡುತ್ತಿದ್ದಳು. ತನ್ನ ಗುರುತು ಮುಚ್ಚಿಟ್ಟ ನನ್ನನ್ನು ಪ್ರೀತಿಸಿ ಮದುವೆಯಾದನು. ಅವನಿಗೆ ಈ ಮೊದಲೇ ಒಂದು ಮದುವೆ ಆಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರೋಪಿಯನ್ನು ಕತ್ತಲಕೋಣೆಗೆ ತಳ್ಳದ್ದರು. ಆರೋಪಿ ಜೈಲುಪಾಲದ ನಂತರವೂ ತನಗೆ ಬೆದರಿಕೆ ಪೋನ್ ಕರೆ ಬರುತ್ತಿವೆ ಎಂದು ಮಹಿಳೆ ಆರೋಪಿಸಿದ್ದರು.
ಹೆಣ್ಣೆಂಬ ಮೋಹಪಾಶ: ದೇಶದ್ರೋಹಿ ಪಟ್ಟದ ಜೊತೆ ಜೈಲುವಾಸ: ಯುವ ವಿಜ್ಞಾನಿಯ ದುರಂತ ಕತೆ
ಜಿಮ್ ಟ್ರೈನರ್ ಜೊತೆ ಪತ್ನಿಯ ಸಂಬಂಧ- ಉದ್ಯಮಿ ಆತ್ಮಹತ್ಯೆ
26 ಜುಲೈ 2020ರಂದು ಮಧ್ಯಪ್ರದೇಶದ ಮಂದ್ಸೌರ್ ಎಂಬಲ್ಲಿ ಉದ್ಯಮಿಯ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಘಟನೆ ನಡೆದ ಒಂದು ತಿಂಗಳ ಬಳಿಕ ಪೊಲೀಸ್ ತನಿಖೆಯಲ್ಲಿ ಆತ್ಮಹತ್ಯೆಯ ನಿಖರ ಕಾರಣ ತಿಳಿದು ಬಂದಿತ್ತು. ಉದ್ಯಮಿಯ ಪತ್ನಿ ಜಿಮ್ ಟ್ರೈನರ್ ಜೊತೆ ಸಂಬಂಧ ಹೊಂದಿದ್ದಳು. ಇವರಿಬ್ಬರು ನೀಡಿದ ಮಾನಸಿಕ ಕಿರುಕುಳದಿಂದ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡದ್ದನು. ನಂತರ ಪೊಲೀಸರು ಉದ್ಯಮಿಯ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದರು.
ಜಿಮ್ ಟ್ರೈನರ್ ಹತ್ಯೆಗೆ 5 ಲಕ್ಷ ಸುಪಾರಿ
2019ರಲ್ಲಿ ಉತ್ತರ ಪ್ರದೇಶ ಆಗ್ರಾದ ಖ್ಯಾತ ಮೂಳೆತಜ್ಞ ಡಾ.ಅನುಭವ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಜಿಮ್ ಟ್ರೈನರ್ ಕೊಲೆಗೆ ಸುಪಾರಿ ನೀಡಿದ ಆರೋಪದಡಿಯಲ್ಲಿ ವೈದ್ಯರನ್ನು ಬಂಧಿಸಲಾಗಿತ್ತು. ವೈದ್ಯನ ಪತ್ನಿಗ ಮತ್ತು ಜಿಮ್ ಟ್ರೈನರ್ ನಡುವೆ ಅಕ್ರಮ ಸಂಬಂಧವಿತ್ತು. ಹಾಗಾಗಿ ಗಂಡ - ಹೆಂಡತಿ ನಡುವೆ ಪದೇ ಪದೇ ಜಗಳ ಆಗುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಡಾಕ್ಟರ್ ಕೊಲೆಗೆ ಸುಪಾರಿ ನೀಡಿ ಜೈಲು ಸೇರಿದ್ದನು.
ಬೆಟ್ಟದ ತುದಿಯಲ್ಲಿ ಕಾರ್ ರಿವರ್ಸ್ ಮಾಡುವ ರೀಲ್, 300 ಫೀಟ್ ಆಳಕ್ಕೆ ಬಿದ್ದು ಯುವತಿ ಸಾವು ಕಂಡ ವಿಡಿಯೋ ವೈರಲ್!