ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ ಮಲೆನಾಡಿನಲ್ಲಿ ನಡೆಯುತ್ತಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಾಡು ಪ್ರಾಣಿಗಳು ದಾಂದಲೆ ನಡೆಸಿ ಮಣ್ಣುಪಾಲು ಮಾಡುತ್ತಿವೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.08): ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ ಮಲೆನಾಡಿನಲ್ಲಿ ನಡೆಯುತ್ತಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಾಡು ಪ್ರಾಣಿಗಳು ದಾಂದಲೆ ನಡೆಸಿ ಮಣ್ಣುಪಾಲು ಮಾಡುತ್ತಿವೆ. ಇದರ ನಡುವೆ ಕಾಡು ಪ್ರಾಣಿಗಳನ್ನು ಕಳ್ಳಭೇಟೆ ನಡೆಸಿ ಅವುಗಳಿಂದ ಹಣ ಮಾಡುವ ದಂಧೆಯಲ್ಲಿ ಕೆಲವರು ತೊಡಗಿಕೊಂಡಿದ್ದಾರೆ. ಇಂತವ ಜಾಲವೊಂದನ್ನು ಕಾಫಿನಾಡಿನ ಸಂಚಾರಿ ದಳ ಪೊಲೀಸರು ಭೇದಿಸಿದ್ದಾರೆ.
ಐವರ ಬಂಧನ: ರಸ್ತೆ ಮಧ್ಯೆ ಎರಡು ಬೃಹತ್ ಆನೆ ದಂತಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನ ಚಿಕ್ಕಮಗಳೂರು ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಂತ ಸಮೇತ ಬಂಧಿಸಿದ್ದಾರೆ. ಬಂಧಿತರನ್ನ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಮೂಲದ ಶಿವಕುಮಾರ್, ಸುಂದ್ರೇಶ್, ಮಹಾಂತೇಶ್, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮೂಲದ ನೂರ್ ಅಹಮದ್, ಚಿತ್ರದುರ್ಗ ತಾಲೂಕಿನ ಅಂಜಿನಪ್ಪ ಎಂದು ಗುರುತಿಸಲಾಗಿದೆ. ಬಂಧಿತರು ಆನೆ ದಂತ ಆರು ತಿಂಗಳಿಂದ ನಮ್ಮ ಬಳಿಯೇ ಇತ್ತು. ಇಂದು ಮಾರಾಟ ಮಾಡಲು ಯತ್ನಿಸುತ್ತಿದ್ದೇವು ಎಂದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
Chikkamagaluru: ವಿವಾದದ ನಡುವೆಯೂ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಚಡ್ಡಿ ಸುಡುವ ಪ್ರತಿಭಟನೆ
ಭದ್ರಾ ವನ್ಯಜೀವ ವಲಯದಿಂದ ಆನೆ ದಂತ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಮೂಲದ ಆರೋಪಿಗಳಾದ ಶಿವಕುಮಾರ್ ಹಾಗೂ ಸುಂದ್ರೇಶ್ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅಕ್ಕಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಮೀಸಲು ಹಾಗೂ ದಟ್ಟಾರಣ್ಯ. ಅನುಮತಿ ಇಲ್ಲದೆ ಯಾರು ಒಳಗೆ ಹೋಗುವಂತಿಲ್ಲ. ಆದರೂ, ಕಾಫಿ ಎಸ್ಟೇಟ್‌ನಲ್ಲಿ ಕೆಲಸಗಾರರಾಗಿದ್ದ ಶಿವಕುಮಾರ್ ಹಾಗೂ ಸುಂದ್ರೇಶ್ ಮೀಸಲು ಅರಣ್ಯದ ಹಳ್ಳದಲ್ಲಿ ಅಕ್ರಮವಾಗಿ ಮೀನು ಹಿಡಿಯಲು ಹೋಗುತ್ತಿದ್ದರು.
ಈ ವೇಳೆ, ಕಾಡಿನಲ್ಲಿ ಆನೆ ಸಾವನ್ನಪ್ಪಿರೋದ ಕಂಡು ಅದರ ಎರಡು ಬೃಹತ್ ದಂತಗಳನ್ನ ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ಆರು ತಿಂಗಳಿಂದ ಇವರ ಬಳಿಯೇ ಇತ್ತು. ಅದನ್ನ ಮಾರಾಟ ಮಾಡಲು ಗೊತ್ತಾಗದೆ ಮಧ್ಯವರ್ತಿಗಳಿಂದ ತಾಲೂಕಿನ ಅಲ್ಲಂಪುರ ಪೆಟ್ರೊಲ್ ಬಂಕ್ ಮುಂಭಾಗ ಮಾರಾಟ ಮಾಡಲು ಮುಂದಾಗ ಮೂವರು ಮಧ್ಯವರ್ತಿಗಳು ಹಾಗೂ ಆನೆ ದಂತ ಇಬ್ಬರು ಸೇರಿ ಐವರನ್ನ ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
Chikkamagaluru: ಬಂಜಾರ ಸಮುದಾಯದ ಏಳಿಗೆಗೆ ಬದ್ಧ: ತಾಂಡಾ ನಿಗಮದ ಅಧ್ಯಕ್ಷ ಪಿ.ರಾಜೀವ್
ಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಆರೋಪಿಗಳು ಇದೇ ತಿಂಗಳು 18ರವರೆಗೂ ನ್ಯಾಯಾಂಗ ಬಂಧನದ ಆದೇಶವನ್ನು ನೀಡಿದೆ. ಈ ಕಾರ್ಯಾಚರಣೆಗೆ ಮಡಿಕೇರಿ ಅರಣ್ಯ ಘಟಕದ ಎಸ್ಪಿ ಚಂದ್ರಕಾಂತ್ ಮಾರ್ಗದರ್ಶನಲ್ಲಿ ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್ ಇನ್ಸ್ಪೆಕ್ಟರ್ ಶರತ್, ಸಿಬ್ಬಂದಿಗಳಾದ ಹೆಚ್.ದೇವರಾಜ್, ಡಿ.ಎಚ್.ದಿನೇಶ್, ಎಸ್.ಕೆ.ದಿವಾಕರ್, ಕೆ.ಎಸ್.ದಿಲೀಪ್, ಹಾಲೇಶ್, ಹೇಮಾವತಿ, ತಿಮ್ಮ ಶೆಟ್ಟಿಯವರು ಪಾಲ್ಗೊಂಡಿದ್ದರು. ಬಂಧಿತರಿಂದ ಎರಡು ಆನೆ ದಂತ ಹಾಗೂ ಒಂದು ಹೋಮಿನಿ ವ್ಯಾನನ್ನು ವಶಪಡಿಸಿಕೊಂಡಿದ್ದಾರೆ.