ಕೊಡಗು: ಬಾಲಕಿ ಮೇಲೆ ಅತ್ಯಾಚಾರ, ಮತ್ತೊಬ್ಬಾಕೆ ಮೇಲೆ ರೇಪ್‌ಗೆ ಸ್ಕೆಚ್‌, ಐವರು ಕಾಮುಕರ ಬಂಧನ

Published : Jul 11, 2024, 09:48 AM IST
ಕೊಡಗು:  ಬಾಲಕಿ ಮೇಲೆ ಅತ್ಯಾಚಾರ, ಮತ್ತೊಬ್ಬಾಕೆ ಮೇಲೆ ರೇಪ್‌ಗೆ ಸ್ಕೆಚ್‌, ಐವರು ಕಾಮುಕರ ಬಂಧನ

ಸಾರಾಂಶ

ಪ್ರಕರಣ ದಾಖಲಾದ 12 ಗಂಟೆಯಲ್ಲಿ 5 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕುಟ್ಟದ ನಾಥಂಗಾಲ ಗ್ರಾಮದ ನವೀಂದ್ರ, ಅಕ್ಷಯ್ ಹಾಗೂ ಕೇರಳ ರಾಜ್ಯ ತೋಲ್ಪಟ್ಟಿ ನಡುಂದನ ಕಾಲೋನಿಯ ರಾಹುಲ್, ಮನು, ಸಂದೀಪ ಬಂಧಿತ ಆರೋಪಿಗಳು.  

ಮಡಿಕೇರಿ(ಜು.11):  ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳನ್ನು ಹಾಗೂ ಇನ್ನೊಬ್ಬಾಕೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕುಟ್ಟದ ನಾಥಂಗಾಲ ಗ್ರಾಮದ ನವೀಂದ್ರ (24), ಅಕ್ಷಯ್ (27) ಹಾಗೂ ಕೇರಳ ರಾಜ್ಯ ತೋಲ್ಪಟ್ಟಿ ನಡುಂದನ ಕಾಲೋನಿಯ ರಾಹುಲ್ (21), ಮನು (23), ಸಂದೀಪ (27) ಬಂಧಿತ ಆರೋಪಿಗಳು.

ಪ್ರಕರಣದ ವಿವರ:

ಮಂಗಳವಾರ ಮಧ್ಯಾಹ್ನ 3.15ರ ವೇಳೆಗೆ ಕುಟ್ಟದಿಂದ ನಾಗರಹೊಳೆ ಕಡೆ ಹೋಗುವ ರಸ್ತೆಯಲ್ಲಿ ಇಬ್ಬರು ಬಾಲಕಿಯರು ತಮ್ಮ ಪರಿಚಯಸ್ಥ ಇಬ್ಬರು ಯುವಕರ ಸಹಿತ ಒಂಟು ಐದು ಮಂದಿ ತೆರಳುತ್ತಿದ್ದರು. ಈ ಸಂದರ್ಭ ಕುಟ್ಟ ಕಡೆಯಿಂದ ಬರುತ್ತಿದ್ದ ಕಾರನ್ನು ನಿಲ್ಲಿಸಿದ್ದು, ಕಾರಿನಲ್ಲಿ ಇದ್ದ ಅಪರಿಚಿತ ಇಬ್ಬರು ವ್ಯಕ್ತಿಗಳೊಂದಿಗೆ ನಾಗರಹೊಳೆ ಕಡೆಗೆ ಬಿಡುವಂತೆ ಈ ಐದು ಮಂದಿ ಕೇಳಿದ್ದರು. ಕಾರಿನಲ್ಲಿ ಏಳು ಜನ ಪ್ರಯಾಣಿಸಿದ್ದು, ಸ್ವಲ್ಪ ದೂರ ತೆರಳಿದ ನಂತರ ರಸ್ತೆ ಬದಿಯ ಕಾಫಿ ತೋಟದ ಬಳಿ ಕಾರನ್ನು ನಿಲ್ಲಿಸಿ ಕಾರಿನಲ್ಲಿ ಅಪರಿಚಿತ ಇಬ್ಬರೂ ವ್ಯಕ್ತಿಗಳು ಓರ್ವ ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಿದ್ದಾರೆ.

ರೇಪ್ ಮಾಡಿ ಬ್ಲಾಕ್‌ಮೇಲ್ ಆರೋಪ: ಹುಡುಗಿ ಮೊಬೈಲ್‌ನಿಂದ ಮೆಸೇಜ್ ಮಾಡಿ ಕರೆಸಿ ಕೊಲೆ

ಆಕೆಯ ಜೊತೆಯಲ್ಲಿ ಬಂದಿದ್ದ ಮೂವರು ಹುಡುಗರು ಮತ್ತೊಬ್ಬಳು ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿರುವ ಕುರಿತು ದೂರು ಸ್ವೀಕರಿಸಿದ್ದು ಕುಟ್ಟ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯರ ಜೊತೆಗಿದ್ದ ಯುವಕರೇ ಪೂರ್ವನಿಯೋಜಿತವಾಗಿ ಕೃತ್ಯ ನಡೆಸಿದ್ದು, ಅವರೇ ಕರೆ ಮಾಡಿ ಕಾರಿನಲ್ಲಿ ಇಬ್ಬರನ್ನು ಅದೇ ಮಾರ್ಗದಲ್ಲಿ ಕರೆಸಿದ್ದಾಗಿ ಬಳಿಕ ತಿಳಿದುಬಂದಿದೆ.

ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ವಿರಾಜಪೇಟೆ ಉವಿಭಾಗದ ಡಿವೈಎಸ್ಪಿ ಆರ್. ಮೋಹನ್ ಕುಮಾರ್, ಕುಟ್ಟ ವೃತ್ತ ಸಿಪಿಐ ಸಿ. ಎ.ಮಂಜಪ್ಪ, ಕುಟ್ಟ ಪೊಲೀಸ್ ಠಾಣೆ ಪಿಎಸ್ಐ ಮಹದೇವ ಹೆಚ್.ಕೆ. ಸಿಬ್ಬಂದಿಗಳು, ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಧಾರಗಳನ್ನು ಕಲೆಹಾಕಿದರು. ದೂರುದಾರರು ನೀಡಿದ ಮಾಹಿತಿ ಅನ್ವಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಮತ್ತು ತಾಂತ್ರಿಕ ಸಿಬ್ಬಂದಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣ ದಾಖಲಾದ 12 ಗಂಟೆಯಲ್ಲಿ 5 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!