ತಂದೆ, ತಾಯಿ ಹಾಗೂ ಅಣ್ಣನನ್ನು 15 ವರ್ಷದ ಬಾಲಕ ಹತ್ಯೆ ಮಾಡಿದ್ದಾನೆ. ಬಾಲಕನ ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಕಾರಣ ಕೇಳಿ ಶಾಕ್ ಆಗಿದೆ.
ಘಾಜಿಪುರ್(ಜು.10) ಆತನ ವಯಸ್ಸು ಕೇವಲ 15. ಆದರೆ ಮಾಡಿದ ಕೆಲಸ ಮಾತ್ರ ಘನಘೋರ. ತಂದೆ, ತಾಯಿ ಹಾಗೂ ಅಣ್ಣನನ್ನೇ ಈತ ಹತ್ಯೆ ಮಾಡಿದ್ದಾನೆ. ಈ ಹತ್ಯೆಗೆ ಕೆಲ ದಿನಗಳಿಂದ ಪ್ಲಾನ್ ಮಾಡಿದ್ದಾನೆ. ಹತ್ಯೆಗಾಗಿ ಕೃಷಿಗೆ ಬಳಸುವ ಕತ್ತಿಯನ್ನು ಬಳಸಿ ಮೂವರು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಘಾಜಿಪುರ್‌ದ ಕುಸುಮ್ಹಿ ಕಲ್ಯಾಣ್ ಗ್ರಾಮದಲ್ಲಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕನ ಪತ್ತೆ ಹಚ್ಚಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತನ ಹತ್ಯೆ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾನೆ.
ತಂದೆ 45 ವರ್ಷದ ಮುನೀಶ್ ಬಿಂದ್, ತಾಯಿ 40 ವರ್ಷದ ದೇವಂತಿ ಬಿಂದ್ ಹಾಗೂ ಸಹೋದರ 20 ವರ್ಷದ ರಾಮ್ ಅಶಿಶ್ ಬಿಂದ್ ಮೃತ ದುರ್ದೈವಿಗಳು. ಇಡೀ ಕುಟುಂಬವನ್ನೇ ಹತ್ಯೆ ಮಾಡಿದ 15 ವರ್ಷದ ಬಾಲಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈ 15ರ ಬಾಲಕನಿಗೆ ಒಬ್ಬಳು ಗರ್ಲ್‌ಫ್ರೆಂಡ್ ಇದ್ದಾಳೆ. ಆಕೆಯನ್ನು ಮದುವೆಯಾಗೋದಾಗಿ ಮನೆಯಲ್ಲಿ ಹೇಳಿದ್ದಾನೆ. ವಯಸ್ಸು ಕೇವಲ 15, ಇನ್ನು ಈತನ ಗರ್ಲ್‌ಫ್ರೆಂಡ್ ವಯಸ್ಸು ಎಷ್ಟು ಅನ್ನೋದನ್ನು ಪೋಷಕರು ಹಾಗೂ ಈತನ ಸಹೋದರ ಕೇಳಿಲ್ಲ. ಅದಕ್ಕೂ ಮುನ್ನವೇ ನಿನಗೀಗ 15 ವರ್ಷ. ಗರ್ಲ್‌ಫ್ರೆಂಡ್, ಮದುವೆಗೆ ಇನ್ನು ಸಮಯವಿದೆ. ಈಗ ಅನಗತ್ಯ ವಿಚಾರದ ಕಡೆ ಗಮನ ಬೇಡ ಎಂದು ಬುದ್ದಿವಾದ ಹೇಳಿದ್ದಾರೆ.
Murder News: ಇವನದ್ದು ಕೇಕ್..ಬರ್ತ್ ಡೇ ಮತ್ತೊಬ್ಬನ ಜೊತೆಗೆ..! ಅವಳನ್ನ ಕೊಂದು ಪ್ರಪಾತಕ್ಕೆ ಬಿಸಾಡಿದ..!
ಪೋಷಕರು ಹಾಗೂ ಅಣ್ಣನ ಬುದ್ದಿವಾದ ಮಾತು, ಗರ್ಲ್‌ಫ್ರೆಂಡ್ ಜೊತೆ ಮದುವೆಯಾಗಲು ನಿರಾಕರಣೆ ಈ ಬಾಲಕ ಆಕ್ರೋಶ ಹೆಚ್ಚಿಸಿದೆ. ಇದಕ್ಕಾಗಿ ತನ್ನ ದಾರಿಗೆ ಅಡ್ಡ ಬಂದಿರುವ ತಂದೆ, ತಾಯಿ ಹಾಗೂ ಅಣ್ಣನ ಹತ್ಯೆಗೈಯಲು ನಿರ್ಧರಿಸಿದ್ದಾರೆ. ಕೃಷಿಗೆ ಬಳಸುವ ಉಪಕರಣವೊಂದನ್ನು ಪ್ರತಿ ದಿನ ಹರಿತ ಮಾಡಿದ್ದಾನೆ.
ಭಾನುವಾರ ಅಣ್ಣನ ಜೊತೆಯಲ್ಲಿ ಸಂಗೀತ ಕಾರ್ಯಕ್ರಮಕ್ಕೆ ತೆರಳಿದ್ದಾನೆ. ಮರಳುತ್ತಿದ್ದಂತೆ ಕಂಠಪೂರ್ತಿ ಕುಡಿದಿದ್ದಾನೆ. ಅಣ್ಣ ರಾಮ್ ಅಶೀಶ್ ಮನೆಗೆ ಹಿಂತಿರುಗಿದ ಬಳಿಕ ಪೋಷಕರ ಜೊತೆ ಆಹಾರ ಸೇವಿಸಿ ಮಲಗಿದ್ದಾನೆ. ಆದರೆ 15ರ ಬಾಲಕ ಕುಡಿಯತ್ತಲೇ ಹತ್ಯೆಗೆ ಸ್ಕೆಚ್ ಹಾಕಿದ್ದಾನೆ. ಎಲ್ಲರು ಮಲಗಿದ್ದಾಗ ಎದ್ದ ಈತ, ಮೂವರು ಕುತ್ತಿಗೆ ಸೀಳಿದ್ದಾನೆ.
ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ತೀವ್ರ ರಕ್ತಸ್ರಾವದಿಂದ ಮೂವರು ಮೃತಪಟ್ಟಿದ್ದಾರೆ. ಮರು ದಿನ ಬೆಳಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ಬಾಲಕನಿಗೆ ಹುಡಕಾಟ ನಡೆಸಿ ಬಂಧಿಸಿದ್ದಾರೆ.
8 ಹುಡುಗಿಯರ ಜೊತೆ 3 ಹುಡುಗರ ಸರಸ ಸಲ್ಲಾಪ; ಬಾಗಿಲು ತರೆದವರಿಗೆ ಕಂಡಿದ್ದು ಬೆತ್ತಲೆ ಲೋಕ!