ವಿದೇಶದಿಂದ ಹಡಗಿನ ಮೂಲಕ ಮುಂಬೈ ಬಂದರಿಗೆ ಆಹಾರ ವಸ್ತುಗಳನ್ನು ತಂದು ಅಲ್ಲಿಂದ ಬೆಂಗಳೂರಿಗೆ ನರೇಂದ್ರ ತರುತ್ತಿದ್ದ. ನಗರದಲ್ಲಿ ದುಬಾರಿ ಬೆಲೆಗೆ ಅವುಗಳನ್ನು ಮಾರಾಟ ಮಾಡಿ ಲಕ್ಷಾಂತರ ರುಪಾಯಿ ಹಣ ಸಂಪಾದಿಸುತ್ತಿದ್ದ ಬಂಧಿತ ಅರೋಪಿ
ಬೆಂಗಳೂರು(ಜು.11): ಅಕ್ರಮವಾಗಿ ವಿದೇಶದಿಂದ ಚಾಕೋಲೆಟ್ ಹಾಗೂ ಬಿಸ್ಕತ್ ಸೇರಿದಂತೆ ಇತರೆ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನರೇಂದ್ರ ಸಿಂಗ್ ಬಂಧಿತನಾಗಿದ್ದು, ಆರೋಪಿಯಿಂದ ಚಾಕೋಲೆಟ್, ಬಿಸ್ಕತ್ ಹಾಗೂ ತಂಪು ತಂಪು ಪಾನೀಯ ಸೇರಿದಂತೆ ₹1 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ರಾಜಸ್ಥಾನ ಮೂಲದ ನರೇಂದ್ರ ಸಿಂಗ್, ಕುಟುಂಬದ ಜತೆ ಸುಧಾಮನಗರದಲ್ಲಿ ನೆಲೆಸಿದ್ದ. ಕಳೆದ ಐದಾರು ವರ್ಷಗಳಿಂದ ಆರೋಪಿ ವಿದೇಶದಿಂದ ಕಳ್ಳ ಸಾಗಾಣಿಕೆ ಮೂಲಕ ಚಾಕೋಲೆಟ್, ಬಿಸ್ಕತ್ ಹಾಗೂ ತಂಪು ಪಾನೀಯ ಸೇರಿ ಇನ್ನಿತರ ಆಹಾರ ಪದಾರ್ಥಗಳನ್ನ ತರಿಸಿಕೊಳ್ಳುತ್ತಿದ್ದ. ವಿದೇಶದಿಂದ ಹಡಗಿನ ಮೂಲಕ ಮುಂಬೈ ಬಂದರಿಗೆ ಆಹಾರ ವಸ್ತುಗಳನ್ನು ತಂದು ಅಲ್ಲಿಂದ ಬೆಂಗಳೂರಿಗೆ ನರೇಂದ್ರ ತರುತ್ತಿದ್ದ. ನಗರದಲ್ಲಿ ದುಬಾರಿ ಬೆಲೆಗೆ ಅವುಗಳನ್ನು ಮಾರಾಟ ಮಾಡಿ ಲಕ್ಷಾಂತರ ರುಪಾಯಿ ಹಣ ಸಂಪಾದಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕದ್ದು ಮುಚ್ಚಿ ಗೆಳತಿ ಜೊತೆ ರಾಸಲೀಲೆಯಲ್ಲಿರುವಾಗಲೇ ಪತ್ನಿ ಕೈಗೆ ಸಿಕ್ಕಿ ಬಿದ್ದ ಗಂಡ; ದೃಶ್ಯ ಸೆರೆ!
ಈ ಬಗ್ಗೆ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಕಲಾಸಿಪಾಳ್ಯ ಸಮೀಪದ ಸುಧಾಮನಗರದ ನಾರಾಯಣಸ್ವಾಮಿ ಲೇಔಟ್‌ನಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಆಹಾರ ಪದಾರ್ಥಗಳ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಸ್ಟಿಕ್ಕರ್‌ಗಳನ್ನು ಅಂಟಿಸಿ ನಗರದ ಸೂಪರ್ ಮಾರ್ಕೆಟ್, ಮಾಲ್‌ಗಳಿಗೆ ಮಾರಾಟ ಮಾಡುತ್ತಿದ್ದ. ಈ ಆಹಾರ ಉತ್ಪನ್ನಗಳ ಮಾರಾಟಕ್ಕೆ ಎಫ್‌ಎಸ್‌ಎಐನ ಅನುಮತಿ ಸಹ ಆತ ಪಡೆದಿರಲಿಲ್ಲ. ನಕಲಿ ಸ್ಟೀಕರ್‌ಗಳನ್ನು ಅಂಟಿಸಿ ಆರೋಪಿ ವಿಲೇವಾರಿ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.