ಚಲಿಸುತ್ತಿದ್ದ ಓಮ್ನಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ/ ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ಘಟನೆ/ ತಕ್ಷಣವೇ ದೌಡಾಯಿಸಿದ ಅಗ್ನಿ ಶಾಮಕ ದಳ/ ಯಾವುದೆ ಅಪಾಯ ಆಗಿಲ್ಲ
ಶಿವಮೊಗ್ಗ(ಮಾ. 01) ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಸಾಗರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಚಲಿಸುತ್ತಿದ್ದ ಮಾರುತಿ ಓಮ್ನಿ ಗ್ಯಾಸ್ ಕಿಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣವೇ ಕಾರಿನಲ್ಲಿದ್ದವರು ಕೆಳಗೆ ಇಳಿದಿದ್ದಾರೆ. ಈ ವೇಳೆ ಸ್ಥಳೀಯ ಎಳನೀರು ಅಂಗಡಿಯವರು ಹಾಗೂ ಸಾಗರ ನಗರ ಸಭೆ ಆಶ್ರಯ ಸಮಿತಿ ಹಾಗೂ ಆಂಬ್ಯುಲೆನ್ಸ್ ಸಂಘದ ಸದಸ್ಯ ಎಸ್.ಎಂ. ಬಾಷಾ ರವರು ನೀರು ಹಾಕಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಧ್ಯ ರಸ್ತೆಯಲ್ಲೇ ಬೈಕ್ ಗೆ ಬೆಂಕಿ ಇಟ್ಟ ಅಪ್ಪ
ಕಾರಿನಲ್ಲಿ ಚಾಲಕ ರಮೇಶ್ ಒಬ್ಬರೆ ಇದ್ದರು. ಸಾಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಭರ್ತಿ ಮಾಡಿಕೊಂಡು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬಂದಗದ್ದೆಯಲ್ಲಿರುವ ಗ್ಯಾಸ್ ಗೋಡೋನ್ ಕಡೆಗೆ ವ್ಯಾನ್ ತೆರಳುತ್ತಿತ್ತು. ದಟ್ಟ ಹೊಗೆ, ಧಗಧಗ ಉರಿದ ಬೆಂಕಿಯಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ತಕ್ಷಣವೇ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು ಆಸ್ಪದ ನೀಡಿಲ್ಲ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಮೇಲ್ಸೇತುವೆ ಮೇಲೆ ಐಷಾರಾಮಿ ಕಾರೊಂದು ಅಗ್ನಿಗೆ ಆಹುತಿಯಾಗಿತ್ತು. ನೋಡು ನೋಡುತ್ತಿದ್ದಂತೆ ಲ್ಯಾಂಡ್ ರೋವರ್ ಹೊತ್ತಿ ಉರಿದಿತ್ತು.