ದೀಪಾವಳಿ ಹಬ್ಬದ ದಿನವೇ ಅಗ್ನಿ ಅವಘಡ; ಫರ್ನಿಚರ್ ಶೋ ರೂಂ ಸಂಪೂರ್ಣ ಸುಟ್ಟು ಭಸ್ಮ!

By Ravi Janekal  |  First Published Nov 13, 2023, 6:30 AM IST

ನಗರದಲ್ಲಿ ಇತ್ತೀಚೆಗೆ ಸಾಲು ಸಾಲು ಅಗ್ನಿ ಅವಘಡಗಳು ನಡೆದ ಬೆನ್ನಲ್ಲೇ ಇದೀಗ ದೀಪಾವಳಿ ಹಬ್ಬದ ದಿನದಂದೇ ಮತ್ತೊಂದು ದುರಂತ ನಡೆದಿದೆ.


ಬೆಂಗಳೂರು (ನ.13): ನಗರದಲ್ಲಿ ಇತ್ತೀಚೆಗೆ ಸಾಲು ಸಾಲು ಅಗ್ನಿ ಅವಘಡಗಳು ನಡೆದ ಬೆನ್ನಲ್ಲೇ ಇದೀಗ ದೀಪಾವಳಿ ಹಬ್ಬದ ದಿನದಂದೇ ಮತ್ತೊಂದು ದುರಂತ ನಡೆದಿದೆ.

ದೀಪಾವಳಿ ಹಬ್ಬದ ದಿನವೇ ಫರ್ನಿಚರ್‌ ಶೋ ರೂಂಗೆ ಬೆಂಕಿ ಬಿದ್ದಿರುವ ಘಟನೆ ಬೆಂಗಳೂರಿನ ಹೊರಮಾವು ಔಟರ್ ರಿಂಗ್ ರೋಡ್ ನಲ್ಲಿನ ಸ್ಟಾನ್ಲಿ ಫರ್ನಿಚರ್ ಶೋ ರೂಂನಲ್ಲಿ ನಡೆದಿದೆ. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ನಡೆದಿರುವ ಘಟನೆ. ಐದು ಅಂತಸ್ತಿನ‌ ಬಿಲ್ಡಿಂಗ್ ನಲ್ಲಿ ಮೂರು ಕಂಪನಿಗಳಿದ್ದವು. ಎರಡನೇ ಮಹಡಿಯಲ್ಲಿ ಕಾಮೆಡ್ ಕೋಂಚಿಂಗ್ ಸೆಂಟರ್, 3,4 ನೇ ಮಹಡಿಯಲ್ಲಿ ಬ್ರೇಕ್ಸ್ ಕಂಟ್ರೋಲ್ಸ್, ಎಂಬ ಸಾಫ್ಟ್‌ವೇರ್ ಕಂಪನಿ ಇದೆ. ಈ ಪೈಕಿ ಫರ್ನೀಚರ್ ಶೋರೂಂ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿದ್ದ ಫರ್ನೀಚರ್ ಶೋರೂಂ. ಶಾರ್ಟ್‌ ಸೆರ್ಕ್ಯೂಟ್‌ನಿಂದಾಗಿ ಅವಘಡ ನಡೆದಿದೆ ಎಂದು ಶಂಕಿಸಲಾಗಿದೆ.

Tap to resize

Latest Videos

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; 50 ಕ್ಕೂ ಅಧಿಕ ಬಸ್‌ಗಳು ಸುಟ್ಟು ಭಸ್ಮ!

ತಪ್ಪಿದ ಭಾರೀ ಅನಾಹುತ:

ಫರ್ನಿಚರ್ ಶೋರೂಂಗೆ ಬೆಂಕಿಬಿದ್ದ ವೇಳೆ ಕಟ್ಟಡದಲ್ಲಿ ಸಿಲುಕಿಕೊಂಡಿದ್ದ ಮೂವರು ಸೆಕ್ಯೂರಿಟಿ ಗಾರ್ಡ್‌ಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಜ್ವಾಲೆಗೆ ಹೊರಬರಲಾಗದೆ ಕಟ್ಟಡದಲ್ಲಿ ಸಿಲುಕಿದ್ದ ಸೆಕ್ಯೂರಿಟಿ ಗಾರ್ಡ್ ಗಳನ್ನ ರಕ್ಷಿಸಿದ ಅಗ್ನಿಶಾಮಕದಳ ಸಿಬ್ಬಂದಿ. ಘಟನೆಯಲ್ಲಿ ಫರ್ನಿಚರ್ ಶೋರೂಂ ಸಂಪೂರ್ಣ ಭಸ್ಮ. ಉಳಿದಂತೆ ಕೋಚಿಂಗ್ ಸೆಂಟರ್ ಹಾಗೂ ಐಟಿ ಕಂಪನಿ ಸಣ್ಣಪುಟ್ಟ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಒಣಮೇವು ಸುಟ್ಟು ಭಸ್ಮ!

ಸದ್ಯ ಸ್ಥಳಕ್ಕೆ ಬಂದ ನಾಲ್ಕು ಅಗ್ನಿ ಶಾಮಕ ದಳ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ

ಫರ್ನಿಚರ್‌ ಶೋರೂಂಗೆ ಬೆಂಕಿ ಬಿದ್ದಿರೋ ಘಟನೆ ನನಗೆ ರಾತ್ರಿ 2.30 ರ ಸುಮಾರಿಗೆ ಗೊತ್ತಾಯ್ತು. ನಿನ್ನೆ ದೀಪಾವಳಿ ಹಬ್ಬ ಬೇರೆ ಇತ್ತು. ಪಟಾಕಿ ಏನಾದ್ರು ಬಿತ್ತೊ ಗೊತ್ತಿಲ್ಲ. ಘಟನೆಯಿಂದಾಗಿ 7 ಕೋಟಿಗೂ ಅಧಿಕ ನಷ್ಟವಾಗಿದೆ. ಸುಮಾರು ಐದು ವರ್ಷದಿಂದ ಶೋರೂಂ ನಡೆಸುತ್ತಿದ್ದೆ.

ಶೋ ರೂಂ ಮಾಲೀಕ ಶಂಕರ್

click me!