ಕೊರೋನಾ ಪರೀಕ್ಷೆಗೆ ಅಡ್ಡಿ: ಜೆಡಿಎಸ್ MLC ಮತ್ತು ಅವರ ಚೇಲಾಗಳ ವಿರುದ್ಧ ಕೇಸ್ ಬುಕ್..!

Published : Apr 25, 2020, 04:48 PM ISTUpdated : Apr 25, 2020, 08:04 PM IST
ಕೊರೋನಾ ಪರೀಕ್ಷೆಗೆ ಅಡ್ಡಿ: ಜೆಡಿಎಸ್ MLC ಮತ್ತು ಅವರ ಚೇಲಾಗಳ ವಿರುದ್ಧ ಕೇಸ್ ಬುಕ್..!

ಸಾರಾಂಶ

ಕೊರೋನಾ ಪರೀಕ್ಷೆಗೆ ಅಡ್ಡಿಪಡಿಸಿದ್ದಲ್ಲದೇ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಗುಂಡಾವರ್ತನೆ ತೋರೆದ ಜೆಡಿಎಸ್‌ ವಿಧಾನಪರಿಷತ್ ಸದಸ್ಯ ಹಾಗೂ ಅವರ ಚೇಲಾಗಳ ವಿರುದ್ಧ ದೂರು ದಾಖಲಾಗಿದೆ.

ಮಂಡ್ಯ, (ಏ.25): ಪತ್ರಕರ್ತರಿಗೆ ಕೋವಿಡ್-19 ಪರೀಕ್ಷೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ದಾಂಧಲೆ ಮಾಡಿರುವ ಜೆಡಿಎಸ್ MLC ಶ್ರೀಕಂಠೇ ಗೌಡ,ಅವರ ಪುತ್ರ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 341, 323, 501, 114, 269, 270 ಅಡಿಗಳಲ್ಲಿ ಎಫ್ಐಆರ್ ದಾಖಲಾಗಿದೆ.

"

 ಪ್ರಕರಣ ಸಂಬಂಧ ದಾಖಲಾಗಿರುವ ಎಫ್ ಐ ಆರ್ ಪ್ರಕಾರ ಎಂ ಎಲ್ ಸಿ ಶ್ರೀಕಂಠೇಗೌಡ ಎ1 ಆರೋಪಿಯಾಗಿದ್ದರೇ, ಎ2 ಆರೋಪಿಯಾಗಿ ಶ್ರೀಕಂಠೇಗೌಡ ಅವರ ಪುತ್ರ ಕ್ರಿಷಿಕ್ ಗೌಡ ಆಗಿದ್ದಾರೆ. ಇವರೊಂದಿಗೆ ಎಂ.ಬಿ.ಚಂದ್ರಕಲಾವತಿ ಎ3, ಜಗದೀಶ್ ಎ4 ಮತ್ತು ರಾಜು ಆಲಿಯಾಸ್ ಪಿಳ್ಳೆ ಎ5 ಆರೋಪಿಯಾಗಿದ್ದಾರೆ.

ಕೊರೋನಾ ಪರೀಕ್ಷೆಗೆ ಅಡ್ಡಿ: ಜೆಡಿಎಸ್‌ MLC ಶ್ರೀಕಂಠೇಗೌಡ, ಪುತ್ರನಿಂದ ಗುಂಡಾಗಿರಿ

ಇಂದು (ಶನಿವಾರ) ಬೆಳಗ್ಗೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕೊರೋನಾ ವೈರಸ್ ಪತ್ತೆ ಪರೀಕ್ಷೆ ಆಯೋಜಿಸಲಾಗಿತ್ತು. ನಗರ ಮತ್ತು  ಮಂಡ್ಯದ ಇತರ ಭಾಗದ ಪತ್ರಕರ್ತರು ಪರೀಕ್ಷೆ ಮಾಡಿಸಿಕೊಳ್ಳಲೆಂದು ಬಂದಿದ್ದರು. 

ಈ ಸಂದರ್ಭದಲ್ಲಿ ಜೆಡಿಎಸ್ ನ ವಿಧಾನಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ ಮತ್ತು ಅವರ ಬೆಂಬಲಿಗ ಸ್ಥಳೀಯರು ಸ್ಥಳಕ್ಕೆ ಬಂದು ಅಲ್ಲಿ ಶಿಬಿರ ಆಯೋಜಿಸದಂತೆ ವಿರೋಧ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಶ್ರೀಕಂಠೇಗೌಡ ಪುತ್ರ ಕೃಷಿಗೌಡ ಓರ್ಬ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ