ಪತ್ನಿಯ ನಗ್ನಚಿತ್ರ ಸೆರೆಹಿಡಿದು ಸ್ನೇಹಿತರಿಗೆ ಕಳುಹಿಸಿದ ಪತಿ..!

Published : Apr 18, 2022, 07:58 PM IST
ಪತ್ನಿಯ ನಗ್ನಚಿತ್ರ ಸೆರೆಹಿಡಿದು ಸ್ನೇಹಿತರಿಗೆ ಕಳುಹಿಸಿದ ಪತಿ..!

ಸಾರಾಂಶ

 * ಪತ್ನಿ ನಗ್ನಚಿತ್ರ ಸೆರೆಹಿಡಿದು ಸ್ನೇಹಿತರಿಗೆ ಕಳುಹಿಸಿದ ಪತಿ * ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಪತ್ನಿಗೆ‌ ಪ್ರಜ್ಞೆ ತಪ್ಪಿಸಿದ ನಗ್ನ ಚಿತ್ರಸೆರೆಹಿಡಿದ ಪತಿರಾಯ * ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು, (ಏ.18): ಪತಿರಾಯನೊಬ್ಬ ಕಟ್ಟಿಕೊಂಡ ಹೆಂಡ್ತಿಯ ನಗ್ನಚಿತ್ರಗಳನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಅಚ್ಚರಿ ಅನ್ನಿಸಿದರೂ ಸತ್ಯ. ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಪತ್ನಿಗೆ‌ ಪ್ರಜ್ಞೆ ತಪ್ಪಿಸಿ ಆಕೆಯ ನಗ್ನಚಿತ್ರ ಸೆರೆಹಿಡಿದು ಸ್ನೇಹಿತರಿಗೆ ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 ಘಟನೆ ಸಂಬಂಧ ಕನಕಪುರ ರಸ್ತೆಯ ನಿವಾಸಿ ಮಹಿಳೆ (30) ದೂರಿನ ಆಧಾರದ ಮೇಲೆ ಪತಿ ವೆಂಕಟಸ್ವಾಮಿ ಎಂಬಾತನ ವಿರುದ್ಧ  ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ವಿಡಿಯೋ ಕಾಲ್‌ನಲ್ಲಿ ಯುವತಿಯ ಮೈಮಾಟಕ್ಕೆ ಸೋತು 90 ಸಾವಿರ ಕಳೆದುಕೊಂಡ ಯುವಕ..!

ದೂರುದಾರ ಮಹಿಳೆ 2013ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದು, ವೆಂಕಟಸ್ವಾಮಿಯನ್ನು ಪ್ರೀತಿಸಿ 2ನೇ ವಿವಾಹವಾಗಿದ್ದಳು. ವಿವಾಹವಾದ ಆರಂಭದಲ್ಲಿ ಪತ್ನಿ ಜತೆಗೆ ಅನ್ಯೋನ್ಯವಾಗಿದ್ದ ಪತಿ, ನಂತರ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಇತ್ತೀಚೆಗೆ ಆರೋಪಿಯು ಜ್ಯೂಸ್‌ನಲ್ಲಿ ಮತ್ತು ಬರುವ ವಸ್ತು ಬೆರೆಸಿ ಪತ್ನಿಗೆ ಕೊಟ್ಟಿದ್ದ.

 ಪತ್ನಿ ಪ್ರಜ್ಞೆ ತಪ್ಪಿದ ನಂತರ ಆಕೆಯ ನಗ್ನ ಚಿತ್ರ ಸೆರೆ ಹಿಡಿದು ಸ್ನೇಹಿತರಿಗೆ ಕಳುಹಿಸಿದ್ದ.ಸ್ನೇಹಿತನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಪತ್ನಿಗೆ ಪೀಡಿಸುತ್ತಿದ್ದ. ಈ ನಡುವೆ ದೂರುದಾರ ಮಹಿಳೆಯ ತಂದೆ ಮೃತಪಟ್ಟಿದ್ದರು. ತಂದೆಗೆ ಬರುವ ಪೆನ್ಷನ್​ ಹಣ ಕೊಡುವಂತೆ ಪತಿ ಹಿಂಸೆ ಕೊಡುತ್ತಿದ್ದ. ಹಣ ಕೊಡಲು ನಿರಾಕರಿಸಿದಾಗ ನಗ್ನ ಚಿತ್ರವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯುವತಿಯ ಮೈಮಾಟಕ್ಕೆ ಸೋತು 90 ಸಾವಿರ ಕಳೆದುಕೊಂಡ ಯುವಕ..!
ಶಿರಸಿ, (ಏ.18): ಯುವತಿಯೊಬ್ಬಳು ಫೆಸ್​​ಬುಕ್​ನಲ್ಲಿ ಪರಿಚವಾದ ಯುವಕನೋರ್ವನಿಗೆ ವಿಡಿಯೋ ಕಾಲ್​ನಲ್ಲಿ ಬಳಕುವ ತನ್ನ ಮೈಮಾಟವನ್ನ ತೋರಿಸಿ ಆತನಿಂದ 90 ಸಾವಿರ ರೂಪಾಯಿ  ಲಪಟಾಯಿಸಿದ್ದಾಳೆ. 

ಹೌದು..ಈ ಘಟನೆ ಶಿರಸಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಡದಿದ್ದು, ನಗರದ ಟಿ.ಎಸ್. ಎಸ್​.ಗೆ ಅಡಿಕೆ ವ್ಯಾಪಾರ ಮಾಡಿದ ಹಣವನ್ನೆಲ್ಲ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಯುವತಿಯೋರ್ವಳು ಫೇಸ್​ಬುಕ್​ನಲ್ಲಿ ಶಿರಸಿಯ ಯುವಕನಿಗೆ ಪರಿಚಯವಾಗಿದ್ದಾಳೆ, ನಂತರ ದಿನನಿತ್ಯ ಇಬ್ಬರು ಚಾಟಿಂಗ್ ಮಾಡಿದ್ದಾರೆ. ಈ ಯುವಕನಿಗೆ 35 ವರ್ಷ ವಯಸ್ಸಾಗಿದ್ದು, ಈವರೆಗೂ ಮದುವೆಯಾಗಿಲ್ಲ. ಈ ಹಿನ್ನೆಲೆ ಫೇಸ್​ಬುಕ್​ನಲ್ಲಿ ಚೆಂದವಾಗಿ ಮಾತನಾಡುತ್ತಿದ್ದ ಯುವತಿಯ ಜೊತೆ ಸಲಿಗೆಯಿಂದಲೇ ಮಾತನಾಡುತ್ತಿದ್ದ. ಆಗಾಗ ಇಬ್ಬರ ಫೋಟೋಗಳು ಶೇರ್​ ಆಗುತ್ತಾ ಇದ್ದವು. ಕಳೆದ ಗುರುವಾರ ಇಬ್ಬರು ಸೇರಿ ವಿಡಿಯೋ ಕಾಲ್​ ಮಾಡಿ ಅಶ್ಲೀಲ ರೀತಿಯಲ್ಲಿ ವ್ಯವಹರಿಸಿದ್ದಾರೆ. ಆದರೇ ಆ ಹುಡುಇ ಆತನ ವಿಡಿಯೋ ಕಾಲ್​ ರೆಕಾರ್ಡ್​​ ಮಾಡಿಕೊಂಡಿದ್ದು, ಮಾರನೇ ದಿನ ​ ಹುಡುಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ.

ನನಗೆ ತುರ್ತಾಗಿ 10 ಸಾವಿರ ಬೇಕು ಎಂದು ಕೇಳಿದಕ್ಕೆ ಯುವಕ ಅಡಿಕೆ ಮಾರಿದ್ದ ಹಣದಲ್ಲಿ ಯುವತಿಗೆ ಗೂಗಲ್​ ಪೇ ಮೂಲಕ ಹಣ ರವಾನಿಸಿದ್ದಾನೆ. ಇದನ್ನೇ ರೂಢಿ ಮಾಡಿಕೊಂಡ ಯುವತಿ ಪದೇ ಪದೇ ಯುವಕನ ಬಳಿ ಹಣಕ್ಕೆ ಬೇಡಿಕೆ ಇಡುತ್ತಾ ಬಂದಿದ್ದಾಳೆ. ಇದಕ್ಕೆ ಬೇಸತ್ತ ಯುವಕ ನಂನಿಂದ ಇನ್ನೂ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. 

ಯುವಕ ಯುವತಿಯ ಜೊತೆ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದ ವಿಡಿಯೋ ರೆಕಾರ್ಡ್​ರನ್ನು ಯುವಕನಿಗೆ ಕಳಿಸಿ ನೀನು ಹಣ ನೀಡದಿದ್ದರೇ ಇದನ್ನ ವೈರಲ್​ ಮಾಡುತ್ತೇನೆ ಎಂದು ಧಮಕಿ ಹಾಕಿದ್‌ಉ , ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೆದರಿಸಿದ್ದಾಳೆ. ಇದಕ್ಕೆ ಹೆದರಿದ ಯುವಕ ಯುವಕ ಬರೋಬ್ಬರಿ 90 ಸಾವಿರ ಹಾಕಿ ಕೈ ತೊಳೆದುಕೊಂಡಿದ್ದಾನೆ. ಆದರೆ ಈ ವಿಷಯ ಮನೆಯಲ್ಲಿ ಅಡಿಕೆ ಮಾರಿದ್ದ ಹಣ ಎಲ್ಲಿ ಎಂದು ಕೇಳಿದಾಗಿ ಬೆಳಕಿಗೆ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು