
ಶಿರಸಿ, (ಏ.18): ಯುವತಿಯೊಬ್ಬಳು ಫೆಸ್ಬುಕ್ನಲ್ಲಿ ಪರಿಚವಾದ ಯುವಕನೋರ್ವನಿಗೆ ವಿಡಿಯೋ ಕಾಲ್‌ನಲ್ಲಿ ಬಳಕುವ ತನ್ನ ಮೈಮಾಟವನ್ನ ತೋರಿಸಿ ಆತನಿಂದ 90 ಸಾವಿರ ರೂಪಾಯಿ ಲಪಟಾಯಿಸಿದ್ದಾಳೆ.
ಔದು..ಈ ಘಟನೆ ಶಿರಸಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಡದಿದ್ದು, ನಗರದ ಟಿ.ಎಸ್. ಎಸ್.ಗೆ ಅಡಿಕೆ ವ್ಯಾಪಾರ ಮಾಡಿದ ಹಣವನ್ನೆಲ್ಲ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಯುವತಿಯೋರ್ವಳು ಫೇಸ್ಬುಕ್ನಲ್ಲಿ ಶಿರಸಿಯ ಯುವಕನಿಗೆ ಪರಿಚಯವಾಗಿದ್ದಾಳೆ, ನಂತರ ದಿನನಿತ್ಯ ಇಬ್ಬರು ಚಾಟಿಂಗ್ ಮಾಡಿದ್ದಾರೆ. ಈ ಯುವಕನಿಗೆ 35 ವರ್ಷ ವಯಸ್ಸಾಗಿದ್ದು, ಈವರೆಗೂ ಮದುವೆಯಾಗಿಲ್ಲ.
Bengaluru Crime: ಹಾಡಹಗಲೇ ಬಟ್ಟೆ ಅಂಗಡಿಗೆ ಕನ್ನ
ಈ ಹಿನ್ನೆಲೆ ಫೇಸ್ಬುಕ್ನಲ್ಲಿ ಚೆಂದವಾಗಿ ಮಾತನಾಡುತ್ತಿದ್ದ ಯುವತಿಯ ಜೊತೆ ಸಲಿಗೆಯಿಂದಲೇ ಮಾತನಾಡುತ್ತಿದ್ದ. ಆಗಾಗ ಇಬ್ಬರ ಫೋಟೋಗಳು ಶೇರ್ ಆಗುತ್ತಾ ಇದ್ದವು. ಕಳೆದ ಗುರುವಾರ ಇಬ್ಬರು ಸೇರಿ ವಿಡಿಯೋ ಕಾಲ್ ಮಾಡಿ ಅಶ್ಲೀಲ ರೀತಿಯಲ್ಲಿ ವ್ಯವಹರಿಸಿದ್ದಾರೆ. ಆದರೇ ಆ ಹುಡುಇ ಆತನ ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದು, ಮಾರನೇ ದಿನ ಹುಡುಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ.
ನನಗೆ ತುರ್ತಾಗಿ 10 ಸಾವಿರ ಬೇಕು ಎಂದು ಕೇಳಿದಕ್ಕೆ ಯುವಕ ಅಡಿಕೆ ಮಾರಿದ್ದ ಹಣದಲ್ಲಿ ಯುವತಿಗೆ ಗೂಗಲ್ ಪೇ ಮೂಲಕ ಹಣ ರವಾನಿಸಿದ್ದಾನೆ. ಇದನ್ನೇ ರೂಢಿ ಮಾಡಿಕೊಂಡ ಯುವತಿ ಪದೇ ಪದೇ ಯುವಕನ ಬಳಿ ಹಣಕ್ಕೆ ಬೇಡಿಕೆ ಇಡುತ್ತಾ ಬಂದಿದ್ದಾಳೆ. ಇದಕ್ಕೆ ಬೇಸತ್ತ ಯುವಕ ನಂನಿಂದ ಇನ್ನೂ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ಯುವಕ ಯುವತಿಯ ಜೊತೆ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದ ವಿಡಿಯೋ ರೆಕಾರ್ಡ್ರನ್ನು ಯುವಕನಿಗೆ ಕಳಿಸಿ ನೀನು ಹಣ ನೀಡದಿದ್ದರೇ ಇದನ್ನ ವೈರಲ್ ಮಾಡುತ್ತೇನೆ ಎಂದು ಧಮಕಿ ಹಾಕಿದ್‌ಉ , ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೆದರಿಸಿದ್ದಾಳೆ. ಇದಕ್ಕೆ ಹೆದರಿದ ಯುವಕ ಯುವಕ ಬರೋಬ್ಬರಿ 90 ಸಾವಿರ ಹಾಕಿ ಕೈ ತೊಳೆದುಕೊಂಡಿದ್ದಾನೆ. ಆದರೆ ಈ ವಿಷಯ ಮನೆಯಲ್ಲಿ ಅಡಿಕೆ ಮಾರಿದ್ದ ಹಣ ಎಲ್ಲಿ ಎಂದು ಕೇಳಿದಾಗಿ ಬೆಳಕಿಗೆ ಬಂದಿದೆ.
ದೊಡ್ಡ ದಂಧೆ:
ಯೆಸ್..ಇದೊಂದು ದೊಡ್ಡ ದಂಧೆಯಾಗಿದೆ. ಯುವತಿಯರು ಬಣ್ಣ ಬಣ್ಣದ ಮಾತುಗಳಿಂದ ಫೇಸ್‌ಬುಕ್ ಮೂಲಕ ಆಕರ್ಷಿಸುತ್ತಾರೆ. ಬಳಿಕ ವಾಟ್ಸಪ್ ನಂಬರ್ ಕೇಳಿ ಚಾಟ್ ಶುರು ಮಾಡಿಕೊಳ್ತಾರೆ. ನಂತರ ಕಾಮ ಪ್ರಚೋದಿಸುವ ಮೆಸೇಜ್ ಮಾಡಿ ಪುರುಷರನ್ನು ಉದ್ರೇಕಿಸುತ್ತಾರೆ.. ನಂತ ವಾಟ್ಸಪ್ ವಿಡಿಯೋ ಕಾಲ್‌ಗೆ ಬರ್ತಾರೆ. ವಿಡಿಯೋ ಕಾಲಿಂಗ್‌ನಲ್ಲಿ ಬೆತ್ತಲಾಗುವುಂತೆ ಹೇಳಿ ರೇಕಾರ್ಡ್ ಮಾಡಿಕೊಳ್ಳತ್ತಾರೆ. ಇದೆಲ್ಲಾ ಆದಮೇಲೆ ರೇಕಾರ್ಡ್ ಮಾಡಿದ ವಿಡಿಯೋವನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಡ್ತಾರೆ. ಹಣ ಕೊಡದಿದ್ದರೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸುತ್ತಾರೆ. ಇದರಿಂದ ಪುರಷರು ಮಾನ ಮರ್ಯಾದೆಗೆ ಹೆದರಿ ಹಣ ಕೊಡ್ತಾರೆ.
ಈ ರೀತಿಯಾಗಿ ಈ ದಂಧೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಪುರುಷರು ಯಾವುದೇ ಅನಾಮಿಕ ಯುವತಿಯ ಮೆಸೇಜ್ ಕಾಲ್ ಬಂತು ಅಂದ್ರೆ ಕೊಂಚ ಎಚ್ಚರದರಿಂದ ಇರುವುದು ಒಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ