ಬೆಂಗಳೂರು: ಜಪ್ತಿಯಾದ ₹72 ಲಕ್ಷ ಗುಳುಂ, ಇನ್‌ಸ್ಪೆಕ್ಟರ್‌ಗೆ ತಲೆ ಬಿಸಿ..!

Published : Nov 25, 2023, 05:47 AM IST
ಬೆಂಗಳೂರು: ಜಪ್ತಿಯಾದ ₹72 ಲಕ್ಷ ಗುಳುಂ, ಇನ್‌ಸ್ಪೆಕ್ಟರ್‌ಗೆ ತಲೆ ಬಿಸಿ..!

ಸಾರಾಂಶ

ಈ ಹಿಂದೆ ಬ್ಯಾಟರಾಯನಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುವಾಗ ಶಂಕರ್‌ ನಾಯಕ್ ಈ ಕೃತ್ಯ ಎಸಗಿದ್ದು, ಈ ಸಂಬಂಧ ಕೆಂಗೇರಿ ಗೇಟ್ ಉಪ ನಗರದ ಎಸಿಪಿ ಭರತ್ ಎಸ್‌.ರೆಡ್ಡಿ ನೀಡಿದ ದೂರಿನ ಮೇರೆಗೆ ಪಿಐ ಶಂಕರ್ ನಾಯಕ್ ಹಾಗೂ ಮಧ್ಯವರ್ತಿ ಲೋಕನಾಥ್ ಸಿಂಗ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೇರಿ ಇತರೆ ಪರಿಚ್ಛೇದಗಳಡಿ ಪ್ರಕರಣ ದಾಖಲಾಗಿದೆ.

ಬೆಂಗಳೂರು(ನ.25):  ಕಳೆದ ವರ್ಷ ಹಣ ಕಳವು ಸಂಬಂಧ ಉದ್ಯಮಿಯೊಬ್ಬರ ಕಾರು ಚಾಲಕನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ₹72 ಲಕ್ಷ ಜಪ್ತಿ ಮಾಡಿದ ಬಳಿಕ ಆ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ರಾಮನಗರ ಜಿಲ್ಲೆ ಬಿಡದಿ ಠಾಣೆಯ ಇನ್‌ಸ್ಪೆಕ್ಟರ್‌ ಜಿ.ಕೆ.ಶಂಕರ್ ನಾಯಕ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಹಿಂದೆ ಬ್ಯಾಟರಾಯನಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುವಾಗ ಶಂಕರ್‌ ನಾಯಕ್ ಈ ಕೃತ್ಯ ಎಸಗಿದ್ದು, ಈ ಸಂಬಂಧ ಕೆಂಗೇರಿ ಗೇಟ್ ಉಪ ನಗರದ ಎಸಿಪಿ ಭರತ್ ಎಸ್‌.ರೆಡ್ಡಿ ನೀಡಿದ ದೂರಿನ ಮೇರೆಗೆ ಪಿಐ ಶಂಕರ್ ನಾಯಕ್ ಹಾಗೂ ಮಧ್ಯವರ್ತಿ ಲೋಕನಾಥ್ ಸಿಂಗ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೇರಿ ಇತರೆ ಪರಿಚ್ಛೇದಗಳಡಿ ಪ್ರಕರಣ ದಾಖಲಾಗಿದೆ.

ಸಿಂಧನೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನ ನೇಣು ಬಿಗಿದು ಕೊಲೆ ಮಾಡಿದ ಪಾಪಿ ಗಂಡ..!

ಏನಿದು ಪ್ರಕರಣ?

2022ರಲ್ಲಿ ಬ್ಯಾಟರಾಯನಪುರ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ ಶಂಕರ್ ನಾಯಕ್ ಕಾರ್ಯನಿರ್ವಹಿಸುತ್ತಿದ್ದರು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಉದ್ಯಮಿ ಹರೀಶ್‌ ಎಂಬುವರಿಗೆ ಸೇರಿದ ₹72 ಲಕ್ಷವನ್ನು ಅವರ ಕಾರು ಚಾಲಕ ಸಂತೋಷ್ ಕಳವು ಮಾಡಿರುವ ಸಂಗತಿ ಮಧ್ಯವರ್ತಿ ಲೋಕನಾಥ್ ಮೂಲಕ ಶಂಕರ್ ನಾಯಕ್‌ಗೆ ಗೊತ್ತಾಯಿತು. ಆಗ ಕೃತ್ಯವು ತನ್ನ ಠಾಣಾ ಸರಹದ್ದಿನಲ್ಲಿ ಗತಿಸದೆ ಹೋಗಿದ್ದರೂ ಕೂಡಾ ತನ್ನ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಸುಳ್ಳು ಪ್ರಕರಣ ದಾಖಲಿಸಿದ ಇನ್‌ಸ್ಪೆಕ್ಟರ್‌, ಕಳವು ಹಣ ವಸೂಲಿ ಮಾಡಿಕೊಡಲು ಲೋಕನಾಥ್ ಮುಖಾಂತರ ಹರೀಶ್ ಬಳಿ ₹20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಹಣ ಕೊಡಲು ನಿರಾಕರಿಸಿದ್ದಲ್ಲದೆ ಕಳ್ಳತನ ಬಗ್ಗೆ ದೂರು ಕೊಡಲು ಹರೀಶ್ ಹಿಂದೇಟು ಹಾಕಿದ್ದರು. ಆಗ ಅಕ್ಟೋಬರ್ 12ರಂದು ಸ್ವತಃ ಇನ್‌ಸ್ಪೆಕ್ಟರ್‌ ಕನ್ನಡದಲ್ಲಿ ಸುಳ್ಳು ದೂರು ಬರೆದು, ಆ ದೂರಿಗೆ ಕನ್ನಡ ಓದಲು ಬರೆಯಲು ಬಾರದ ಉದ್ಯಮಿ ಹರೀಶ್ ಸ್ನೇಹಿತನ ಜಾನ್ ಕಡೆಯಿಂದ ಸಹಿ ಪಡೆದು ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಆನಂತರ ಸಂತೋಷ್‌ನನ್ನು ಬಂಧಿಸಿ ಆತನಿಂದ ಕಳ‍ವು ಮಾಡಿದ್ದ ₹500 ಮುಖಬೆಲೆಯ ₹72 ಲಕ್ಷವನ್ನು ವಶಪಡಿಸಿಕೊಂಡಿದ ಶಂಕರ್‌ ನಾಯಕ್‌, ಈ ಹಣ ಜಪ್ತಿ ಸಂಬಂಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ತರುವಾಯ ಈ ಪ್ರಕರಣದ ಮುಂದಿನ ತನಿಖೆಗೆ ಕೆಂಗೇರಿ ಗೇಟ್ ಉಪ ವಿಭಾಗದ ಎಸಿಪಿ ಅವರಿಗೆ ಪಶ್ಚಿಮ ವಿಭಾಗದ ಡಿಸಿಪಿ ವಹಿಸಿದ್ದರು.

ಅಂತೆಯೇ ಎಸಿಪಿ ಅ‍ವರಿಗೆ ಜಪ್ತಿಯಾದ ಹಣದ ಸಮೇತ ಪ್ರಕರಣವನ್ನು ಇನ್‌ಸ್ಪೆಕ್ಟರ್‌ ಹಸ್ತಾಂತರಿಸಬೇಕಿತ್ತು. ಆದರೆ ಕೇವಲ ಕಡತಗಳನ್ನು ವರ್ಗಾಯಿಸಿದ ಇನ್‌ಸ್ಪೆಕ್ಟರ್‌, ಹಣದ ಬಗ್ಗೆ ಚಕಾರ ಎತ್ತಿರಲಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಆಗಿನ ಎಸಿಪಿ ಕೋದಂಡರಾಮ ಅವರು, ಸುರಕ್ಷತೆ ದೃಷ್ಟಿಯಿಂದ ₹72 ಲಕ್ಷವನ್ನು ಸರ್ಕಾರದ ಖಜಾನೆಗೆ ಒಪ್ಪಿಸುವಂತೆ ಇನ್‌ಸ್ಪೆಕ್ಟರ್‌ಗೆ ಜ್ಞಾಪನ ಪತ್ರ ನೀಡಿದ್ದರು. ಇದನ್ನು ನಿರ್ಲಕ್ಷ್ಯ ಮಾಡಿದ ಇನ್‌ಸ್ಪೆಕ್ಟರ್‌, ಹಣವನ್ನು ದುರ್ಬಳಕ್ಕೆ ಮಾಡಿಕೊಂಡಿದ್ದರು.

ಅಷ್ಟರಲ್ಲಿ ಬ್ಯಾಟರಾಯನಪುರ ಠಾಣೆಯಿಂದ ಬೇರೆಡೆಗೆ ಶಂಕರ್‌ ಎತ್ತಂಗಡಿ ಆಗಿದ್ದರು. ಆ ಠಾಣೆಗೆ ವರ್ಗಾವಣೆಯಾಗಿ ಇನ್‌ಸ್ಪೆಕ್ಟರ್‌ ನಿಂಗನಗೌಡ.ಎ.ಪಾಟೀಲ್ ಅವರಿಗೆ ₹72 ಲಕ್ಷವನ್ನು ಶಂಕರ್‌ ನೀಡದೆ ತೆರಳಿದ್ದರು. ಈ ವಿಚಾರ ತಿಳಿದ ಎಸಿಪಿ ಅವರು, ಶಂಕರ್‌ ಅವರಿಗೆ ಲಿಖಿತ ನೋಟಿಸ್ ನೀಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಠಾಣೆಗೆ ಚೀಲದಲ್ಲಿ ಹಣ ತಂದಿಟ್ಟ ಪಿಐ ಶಂಕರ್‌!

ಕಳವು ಪ್ರಕರಣದ ಜಪ್ತಿ ಹಣದ ಸಂಬಂಧ ನೋಟಿಸ್‌ ಹಿನ್ನೆಲೆಯಲ್ಲಿ ಭೀತಿಗೊಂಡ ಶಂಕರ್‌ ನಾಯಕ್‌, ಕೊನೆಗೆ ಬ್ಯಾಟರಾಯನಪುರ ಠಾಣೆಗೆ 2023ರ ಫೆಬ್ರವರಿಯಲ್ಲಿ ಚೀಲದಲ್ಲಿ ₹72 ಲಕ್ಷ ತುಂಬಿ ತಂದಿಟ್ಟು ತೆರಳಿದ್ದರು. ಪಿಐ ಹಣ ತಂದಿಡುವ ದೃಶ್ಯವು ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಲ್ಲದೆ ಕಳ್ಳತನ ಪ್ರಕರಣದಲ್ಲಿ ಆರೋಪಿ ಸಂತೋಷ್‌ನಿಂದ ₹500 ಮುಖಬೆಲೆಯ ₹72 ಲಕ್ಷ ಜಪ್ತಿ ಮಾಡಲಾಗಿತ್ತು ಎಂದು ನ್ಯಾಯಾಲಯಕ್ಕೆ ಪಿಐ ಶಂಕರ್ ನಾಯಕ್ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ತಾವು ಠಾಣೆಗೆ ತಂದಿಟ್ಟಿದ್ದ ಚೀಲದಲ್ಲಿ ₹100, ₹200, ₹500 ಹಾಗೂ ₹2 ಸಾವಿರ ಮುಖಬೆಲೆಯ ನೋಟುಗಳಿದ್ದವು. ಅಂದರೆ ಜಪ್ತಿ ಮಾಡಿದ್ದ ಹಣವನ್ನು ಪಿಐ ಶಂಕರ್ ನಾಯ್ಕ್ ದುರ್ಬಳಕ್ಕೆ ಮಾಡಿಕೊಂಡು ಬೇರೆಯೇ ಹಣ ತಂದಿಟ್ಟಿದ್ದಾರೆ. ಇನ್‌ಸ್ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸಬೇಕಾದರೆ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ ಎಂದು ಎಸಿಪಿ ಭರತ್ ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪಿಐಗೆ ಐಟಿ ಸಂಕಷ್ಟ

ಕಳವು ಪ್ರಕರಣದ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಹೊತ್ತಿರುವ ಪಿಐ ಶಂಕರ್ ನಾಯಕ್ ಅವರಿಗೆ ಈಗ ಆದಾಯ ತೆರಿಗೆ ಇಲಾಖೆಯ ತನಿಖೆ ಸಂಕಷ್ಟ ಎದುರಾಗಿದೆ. ತಾವೇ ತೋಡಿಕೊಂಡ ಖೆಡ್ಡಾಕ್ಕೆ ಪಿಐ ಬಿದ್ದಿದ್ದಾರೆ. ಜಪ್ತಿಯಾದ ಹಣದ ಬದಲಿಗೆ ಬೇರೆ ಹಣ ತಂದಿಟ್ಟು ಐಟಿ ಸುಳಿಗೆ ಸಿಲುಕಿದ್ದಾರೆ. ಈ ಹಣದ ಬಗ್ಗೆ ಪೊಲೀಸರು ಸಲ್ಲಿಸಿದ ವರದಿ ಮೇರೆಗೆ ನ್ಯಾಯಾಲಯವು ಆ ಹಣದ ಪರಿಶೀಲನೆಗೆ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿ ಆದೇಶಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಚಾಮರಾಜನಗರ: ಪ್ರೀತಿಗೆ ಮನಸೋತ ವಧು, ತಂದೆ ಆತ್ಮಹತ್ಯೆ

ಕಳ್ಳತನ ಪ್ರಕರಣದ ₹72 ಲಕ್ಷ ದುರ್ಬಳಕೆ ಹಾಗೂ ಸುಳ್ಳು ಪ್ರಕರಣ ದಾಖಲು ಸಂಬಂಧ ಇನ್‌ಸ್ಪೆಕ್ಟರ್‌ ಶಂಕರ್ ನಾಯಕ್ ವಿರುದ್ಧ ತನಿಖೆ ನಡೆದಿದೆ. ಈ ಪ್ರಕರಣವನ್ನು ಬೇರೆ ಠಾಣೆಗೆ ವರ್ಗಾಯಿಸಲಾಗುತ್ತದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್‌ ಹೇಳಿದ್ದಾರೆ.  

ನನಗೆ ಬೆಂಗಳೂರಿನಲ್ಲಿ ಬಿಡದಿ ಠಾಣೆ ಪಿಐ ಶಂಕರ್ ನಾಯಕ್ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಇದುವರೆಗೆ ಈ ಪ್ರಕರಣದ ಕುರಿತು ಬೆಂಗಳೂರು ಕಮೀಷನರೇಟ್‌ನಿಂದ ಅಧಿಕೃತ ಮಾಹಿತಿ ಬಂದಿಲ್ಲ. ಆಯುಕ್ತರಿಂದ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ