ಮೇಲ್ನೋಟಕ್ಕೆ ಇದು ಹಾವು ಕಚ್ಚಿದ ಪ್ರಕರಣವೆಂದು ಕಂಡುಬಂದರೂ, ಪತ್ನಿಯ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಳಿಯನೇ ತನ್ನ ಮಗಳನ್ನು ಕೊಂದಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ನವದೆಹಲಿ (ನ.24): ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ವಿಷಪೂರಿತ ನಾಗರಹಾವನ್ನು ಮಲಗುವ ಕೋಣೆಗೆ ಬಿಡುವ ಮೂಲಕ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅಕ್ಟೋಬರ್ 7 ರಂದು ಗಂಜಾಂ ಜಿಲ್ಲೆಯ ಕಬಿಸೂರ್ಯನಗರ ಪೊಲೀಸ್ ವ್ಯಾಪ್ತಿಯ ಅಧೇಬರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು 25 ವರ್ಷದ ಕೆ. ಗಣೇಶ್ ಪಾತ್ರ ಎಂದು ಗುರುತಿಸಲಾಗಿದೆ. ಗಣೇಶ್ ಮತ್ತು ಅವರ ಪತ್ನಿ ಕೆ. ಬಸಂತಿ ಪಾತ್ರಾ ನಡುವಿನ ಕೌಟುಂಬಿಕ ಮನಸ್ತಾಪಗಳೇ ಈ ಘಟನೆಗೆ ಕಾರಣವಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಗಣೇಶ್ 2020 ರಲ್ಲಿ ಬಸಂತಿ ಅವರನ್ನು ವಿವಾಹವಾಗಿದ್ದು, ಇವರಿಬ್ಬರ ದಾಂಪತ್ಯದಲ್ಲಿ ಎರಡು ವರ್ಷದ ಹಿಂದೆ ದೇಬಸ್ಮಿತಾ ಹೆಸರಿನ ಹೆಣ್ಣು ಮಗು ಕೂಡ ಜನಿಸಿತ್ತು. ಕೌಟುಂಬಿಕ ಕಲಹದ ಕಾರಣ ಬಸಂತಿ ಈ ಹಿಂದೆ ವರದಕ್ಷಿಣೆ ನಿಷೇಧ ಕಾಯ್ದೆಯಡಿ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದರು. ಹಾಗಿದ್ದರೂ ಈ ಘಟನೆ ಸಂಭವಿಸುವ ಮೊದಲು ಇಬ್ಬರೂ ಕಳೆದ ಮೂರು ತಿಂಗಳಿನಿಂದ ಮತ್ತೆ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಗಂಜಾಂ ಎಸ್ಪಿ ಜಗಮೋಹನ್ ಮೀನಾ ಹೇಳಿದ್ದಾರೆ.
ಒಟ್ಟಿಗೆ ವಾಸ ಮಾಡುತ್ತಿದ್ದರೂ, ಆರೋಪಿ ಗಣೇಶ್, ಪತ್ನಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ. ಸೆಪ್ಟೆಂಬರ್ 26 ರಂದು ಗಣೇಶ್ ತನ್ನ ತಂದೆಯ ಹೆಸರಲ್ಲಿ ಪಡೆದಿದ್ದ ಸಿಮ್ ಕಾರ್ಡ್‌ನಲ್ಲಿ ತಮ್ಮ ಪ್ರದೇಶದಲ್ಲಿದ್ದ ಸಾಕಷ್ಟು ಹಾವಾಡಿಗರ ಸಂಪರ್ಕ ಮಾಡಿದ್ದರು. ಶಿವ ದೇವಾಲಯದಲ್ಲಿ ಪೂಜೆಗೆ ಹಾವಿನ ಅಗತ್ಯವಿದೆ ಎಂದು ಆರೋಪಿ ಈ ಹಾವಾಡಿಗರಿಗೆ ಹೇಳಿದ್ದ ಎಂದು ಮೀನಾ ತಿಳಿಸಿದ್ದಾರೆ. ಅಕ್ಟೋಬರ್ 6 ರಂದು ಬಸಂತ್ ಆಚಾರ್ಯ ಎನ್ನುವ ಹಾವಾಡಿಗ, ವಸತಿಗೃಹದಿಂದ ನಾಗರಹಾವನ್ನು ರಕ್ಷಿಸಿ ಅದನ್ನು ಪ್ಲಾಸ್ಟಿಕ್ ಜಾರ್‌ನಲ್ಲಿ ಹಾಕಿ ಗಣೇಶ್‌ಗೆ ಒಪ್ಪಿಸಿದ್ದ. ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಹಾವನ್ನು ಮನೆಗೆ ಕೊಂಡೊಯ್ದು ಅಲ್ಲಿ ಬಚ್ಚಿಟ್ಟಿದ್ದಾನೆ. ಅಕ್ಟೋಬರ್ 6 ಮತ್ತು 7 ರಂದು ರಾತ್ರಿ ಬಸಂತಿ ಮತ್ತು ಆಕೆಯ ಎರಡು ವರ್ಷದ ಮಗಳು ಮಧ್ಯದ ಕೋಣೆಯಲ್ಲಿ ಮಲಗಿದ್ದರೆ, ಆರೋಪಿ ಮನೆಯ ಮುಂಭಾಗದ ಕೋಣೆಯಲ್ಲಿ ಮಲಗಿದ್ದ.
undefined
ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಗಣೇಶ್ ಪಾತ್ರಾ, ಪತ್ನಿ ಹಾಗೂ ಮಗಳು ಮಲಗಿದ್ದ ಮನೆಯ ಮಧ್ಯದ ಕೋಣೆಯಲ್ಲಿ ಈ ನಾಗರಹಾವನ್ನು ಬಿಟ್ಟು ಬಾಗಿಲು ಮುಚ್ಚಿದ್ದಾನೆ. ಮರುದಿನ ಮುಂಜಾನೆ ಗಣೇಶ್ ಮನೆಯಲ್ಲಿಯೇ ಜೋರಾಗಿ ಕಿರುಚಾಡಲು ಆರಂಭಿಸಿದ್ದಾರೆ. ಇದರ ಪರಿಣಾಮವಾಗಿ ನೆರೆಹೊರೆಯವರು ಹಾಗೂ ಪತ್ನಿಯ ತಂದೆ ಸ್ಥಳಕ್ಕೆ ಆಗಮಿಸಿದ್ದರು. ತಾಯಿ ಹಾಗೂ ಮಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಆರಂಭಿಸುವ ಮುನ್ನವೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.ಮೃತರ ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರು ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ ಎಂದು ತನಿಖೆಯಲ್ಲಿ ತೊಡಗಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿರಿಯಾನಿ ಹಣಕ್ಕಾಗಿ ಯುವಕನ ಕತ್ತು ಹಿಸುಕಿ ಇರಿದು ಕೊಂದ; ನಂತರ ಶವದ ಮೇಲೆ ಡ್ಯಾನ್ಸ್ ಮಾಡಿದ ಬಾಲಕ!
ಮೇಲ್ನೋಟಕ್ಕೆ ಇದು ಹಾವು ಕಚ್ಚಿದ ಪ್ರಕರಣವೆಂದು ಕಂಡುಬಂದರೂ, ಪತ್ನಿಯ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಳಿಯನೇ ತನ್ನ ಮಗಳನ್ನು ಕೊಂದಿದ್ದಾನೆ ಎಂದು ಅವರು ಆರೋಪ ಮಾಡಿದ್ದರು. ಇಡೀ ಪ್ರಕರಣದಲ್ಲಿ ಹಾವಾಡಿಗ ಮಾತ್ರವೇ ಏಕೈಕ ಸಾಕ್ಷಿಯಾಗಿರುವ ಕಾರಣ, ಆತನಿಗೂ ಈ ಕೊಲೆಗೂ ಸಂಬಂಧವಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ. ತನ್ನ ಹೆಂಡತಿಯನ್ನು ಕೊಲ್ಲಲು ಹಾವನ್ನು ಬಳಸಿ ಆರೋಪಿಯ ಯೋಜನೆ ಬಗ್ಗೆಯೂ ಅವನಿಗೆ ತಿಳಿದಿರಲಿಲ್ಲ. "ಅವನ ವಿರುದ್ಧ ಅರಣ್ಯ ಕಾನೂನಿನಡಿಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಬಹುದೇ ಎಂದು ನಾವು ಪರಿಶೀಲಿಸುತ್ತಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಹೆಂಡ್ತಿ ನೋಡೋಕೆ ಸುಂದರವಾಗಿದ್ದಾಳಂತ ಸಹಿಸದೇ ವರದಕ್ಷಿಣೆ ನೆಪವೊಡ್ಡಿ ಕತ್ತು ಹಿಸುಕಿದ ಪತಿ