ಪೆನ್‌ಡ್ರೈವ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ಕೈ ಹಾಸನ ಜಿಲ್ಲೆಯ ಮಹಿಳೆಯೊಬ್ಬರು ದೂರು ನೀಡಿದ್ದು, ಆದರನ್ವಯ ಪ್ರಜ್ವಲ್ ಹಾಗೂ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು(ಜೂ.26): ಲೋಕಸಭಾ ಚುನಾವಣೆ ವೇಳೆ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ದೃಶ್ಯಾವಳಿಗಳು ತುಂಬಿದ ಪೆನ್ ಡ್ರೈವ್ ಹಂಚಿಕೆ ಪ್ರಕರಣ ರೋಚಕ ತಿರುವು ಪಡೆದಿದ್ದು, ಈಗ ಕೇಸಲ್ಲಿ ಪ್ರಜ್ವಲ್‌ರ ರಾಜಕೀಯ ವಿರೋಧಿಯೇ ಆರೋಪಿಯಾಗಿದ್ದಾರೆ.
ಪೆನ್‌ಡ್ರೈವ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ಕೈ ಹಾಸನ ಜಿಲ್ಲೆಯ ಮಹಿಳೆಯೊಬ್ಬರು ದೂರು ನೀಡಿದ್ದು, ಆದರನ್ವಯ ಪ್ರಜ್ವಲ್ ಹಾಗೂ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಹಾಸನ ವಿಡಿಯೋ ವೈರಲ್ ಕೇಸ್‌ನಲ್ಲಿ ಮಾಜಿ ಶಾಸಕ ಪ್ರೀತಂಗೌಡ ಆಪ್ತರು ಅರೆಸ್ಟ್!
ಜೊತೆಗೆ ಹಾಸನದ ಬಿಜೆಪಿ ಮುಖಂಡ ಶರತ್ ಅಲಿಯಾಸ್ ಕ್ವಾಲಿಟಿ ಬಾರ್‌ಶರತ್ ಮತ್ತು ಕಿರಣ್ ವಿರುದ್ಧ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ಠಾಣೆಯಲ್ಲಿ ಹೊಸ ಎಫ್‌ಐಆರ್ ದಾಖಲಾಗಿದೆ. ದೂರುದಾರ ಮಹಿಳೆಯ ಅಶ್ಲೀಲವಿಡಿಯೋವನ್ನು ಪ್ರಜ್ವಲ್ ಚಿತ್ರೀಕರಿಸಿದ ಆರೋಪವಿದ್ದರೆ, ಆ ವಿಡಿಯೋಗಳು ತುಂಬಿದ್ದ ವೆನ್‌ಡ್ರೈವ್ ಅನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿದ ಆಪಾದನೆ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಕೇಳಿ ಬಂದಿದೆ.
ಈ ಪ್ರಕರಣ ಸಂಬಂಧ ತನಿಖೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಪ್ರಜ್ವಲ್ ಅವರನ್ನು ಬಾಡಿ ವಾರಂಟ್ ಮೇರೆಗೆ ಎಸ್‌ಐಟಿ ಮಂಗಳವಾರ 4 ದಿನ ವಶಕ್ಕೆ ಪಡೆದಿದೆ. ಇನ್ನುಳಿದ ಪ್ರೀತಂಗೌಡ ಹಾಗೂ ಅವರ ಸಹಚರರಿಗೆ ಬಂಧನ ಭೀತಿ ಎದುರಾಗಿದ್ದು, ಮೂವರ ಪತ್ತೆಗೆ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಪೆನ್ ಡ್ರೈವ್ ಹಂಚಿಕೆ ಸಂಬಂಧ ಹಾಸನ ನಗರದಲ್ಲಿ ಶರತ್ ಹಾಗೂ ಕಿರಣ್ ಮನೆಗಳ ಮೇಲೆ ಕೆಲ ದಿನಗಳ ಹಿಂದೆಯೇ ಎಸ್‌ಐಟಿ ದಾಳಿ ನಡೆಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿತ್ತು. ಅಲ್ಲದೆ ಪ್ರೀತಂಗೌಡರ ಮತ್ತಿಬ್ಬರು ಸಹಚರರು ಪೆನ್‌ಡೈವ್ ಹಂಚಿಕೆಯಲ್ಲಿ ಬಳಸಿದ್ದರು ಎನ್ನಲಾದ ಕಂಪ್ಯೂಟರ್, ಹಾಡ್ ೯ಡಿಸ್ಕ್ ಅನ್ನು ನದಿಗೆ ಎಸೆಯುವಾಗ ಎಸ್ ಐಟಿಗೆ ಬಲೆಗೆ ಬಿದ್ದಿದ್ದರು.ಆ ವೇಳೆ ಆ ಇಬ್ಬರಿಂದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್ ಡ್ರೈವ್ ಸಹ ಜಪ್ತಿಯಾಗಿತ್ತು. ಈಗ ಸಹಚರರ ವಿಚಾರಣೆ ವೇಳೆ ನೀಡಿದಮಾಹಿತಿ ಆಧರಿಸಿಯೇ ಪ್ರೀತಂಗೌಡ ಅವರಿಗೆ ಸಂಕಷ್ಟ ಎದುರಾಗಿದೆ ಎಂದು ತಿಳಿದು ಬಂದಿದೆ.
ಆರೋಪಗಳೇನು?:
ಲೋಕಸಭಾ ಚುನಾವಣೆ ಮತದಾನಕ್ಕೆ ಮೂರು ದಿನ ಮುನ್ನ ಹಾಸನ ಜಿಲ್ಲೆಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ದೃಶ್ಯಾವಳಿಗಳು ತುಂಬಿದ್ಧ ಪೆನ್‌ಡ್ರೈವ್ ಹಂಚಿಕೆಯಾಗಿ ಭಾರಿ ಸಂಚಲನ ಮೂಡಿಸಿತ್ತು. ರಾಜ್ಯ ಸರ್ಕಾರವು, ಇದರ ತನಿಖೆಗೆ ಎಸ್‌ಐಟಿ ಆನಂತರ ಅತ್ಯಾಚಾರ ಪ್ರಕರಣಗಳು ದಾಖಲಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ಅಲ್ಲದೆ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದಲ್ಲಿ ಅವರ ತಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ತಾಯಿ ಭವಾನಿ ರೇವಣ್ಣ ಅವರಿಗೂ ಎಸ್‌ಐಟಿ ತನಿಖೆ ಬಿಸಿ ತಟ್ಟಿತ್ತು. ಆದರೆ ಪೆನ್ ಡ್ರೈವ್ ಹಂಚಿಕೆ ಹಿಂದೆ ಪಾತ್ರವಿದೆ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ನಾಯಕರು ಆರೋಪ ಮಾಡುತ್ತಲೇ ಬಂದಿದ್ದರು. ಆದರೀಗ ಬಿಜೆಪಿ ನಾಯಕ ಪ್ರೀತಂಗೌಡ ಮತ್ತು ಅವರ ಸಹಚರರ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ. . ಇದಕ್ಕೂ ಮುನ್ನ ಪೆನ್ ಡ್ರೈವ್ ಹಂಚಿಕೆ
ಸಂಬಂಧ ಹಾಸನ ಜಿಲ್ಲೆ ಸಿಐಎನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಪ್ರೀಡಂಗೌಡ ಸಹಚರರಾದ ಚೇತನ್ ಸೇರಿ ಇಬ್ಬರನ್ನು ಎಸ್ ಐಟಿ ಬಂಧಿಸಿತ್ತು.
ವೆನ್‌ಡ್ರೈವ್ ಹಂಚಿಕೆ ಆರೋಪಗಳೇನು?:
ಐಪಿಸಿ 354 (ಲೈಂಗಿಕ ಕಿರುಕುಳ), ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಆಶ್ಲೀಲವಿಡಿಯೋ ಚಿತ್ರೀಕರಣ ಸೇರಿದಂತೆ ಇತರೆ ಆರೋಪಗಳಡಿ ಸಿಐಡಿ ಠಾಣೆಯಲ್ಲಿ ಎಸ್‌ಐಟಿ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ ಪ್ರಜ್ವಲ್ ಎl ಆರೋಪಿಯಾಗಿದ್ದರೆ, ಮಾಜಿ ಶಾಸಕ ಪ್ರೀತಂಗೌಡ ಎ4 ಆರೋಪಿಯಾಗಿದ್ದಾರೆ. ಇನ್ನುಳಿದ ಪ್ರೀತಂಗೌಡ ಸಹಚರರಾದ ಕಿರಣ್ (ಎ-2) ಹಾಗೂ ಕಾಲಿಟಿ ಬಾರ್‌ಕರತ್ (ಎ3) ಹೆಸರು ಉಲ್ಲೇಖವಾಗಿದೆ.
ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಸಮ್ಮತಿ ಇಲ್ಲದೆ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಪ್ರಜ್ವಲ್ ವಿರುದ್ಧ ಆರೋಪ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಸೂರಜ್ ವಿರುದ್ಧ ಆಪ್ತನಿಂದಲೇ ಸಲಿಂಗಕಾಮ ದೌರ್ಜನ್ಯ ದೂರು..!
ಪ್ರಜ್ವಲ್ 4 ದಿನ ಎಸ್‌ಐಟಿ ವಶಕ್ಕೆ: ಪ್ರೀತಮ್ ಗೌಡಗೆ ಬಂಧನದ ಭೀತಿ
ಈ ಪ್ರಕರಣ ಸಂಬಂಧ ತನಿಖೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಪ್ರಜ್ವಲ್‌ರನ್ನು ಬಾಡಿ ವಾರಂಟ್ ಮೇರೆಗೆ ಎಸ್‌ಐಟಿ ಮಂಗಳವಾರ 4 ದಿನ ವಶಕ್ಕೆ ಪಡೆದಿದೆ. ಇನ್ನುಳಿದ ಪ್ರೀತಂಗೌಡ ಹಾಗೂ ಸಹಚರರಿಗೆ ಬಂಧನ ಭೀತಿ ಎದುರಾಗಿ ದ್ದು, ಮೂವರ ಪತ್ತೆಗೆ ಎಸ್‌ಐಟಿ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ.
ಪ್ರಜ್ವಲ್, ಸೂರಜ್ ಮುಖಾಮುಖಿ
ಬೆಂಗಳೂರು: ಎರಡು ಪ್ರತ್ಯೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರರಾದ ಪ್ರಜ್ವಲ್ ಮತ್ತು ಸೂರಜ್ ಸಿಐಡಿ ಕಚೇರಿ ಕಟ್ಟಡದ ಆವರಣದಲ್ಲಿ ಮುಖಾಮುಖಿಯಾದರು. ತಮ್ಮ ಪುತ್ರರಿಬ್ಬರೂ ಪೊಲೀಸರ ವಶದಲ್ಲಿ ಇರುವುದರಿಂದ ಎಚ್.ಡಿ.ರೇವಣ್ಣ ಮಂಗಳವಾರ ಸಿಐಡಿ ಕಚೇರಿಗೆ ತೆರಳಿ ಇಬ್ಬರಿಗೂ ಬಟ್ಟೆ, ಊಟ ನೀಡಿ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್ .ಡಿ.ರೇವಣ್ಣ ಸಹ ಬಂಧನಕ್ಕೆ ಒಳಗಾಗಿ ಇದೇ ಸಿಐಡಿ ಕಚೇರಿಯಲ್ಲಿ ಎಸ್‌ಐಟಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರೇವಣ್ಣ ಇದೀಗ ತಮ್ಮ ಪುತ್ರರಿಬ್ಬರಿಗೆ ಬಟ್ಟೆ ನೀಡಲು ಮತ್ತೆ ಸಿಐಡಿ ಕಚೇರಿಗೆ ತೆರಳಿದ್ದರು.