Koppal: ಪೋಷಕರು ಮಾಡಿದ ಸಾಲಕ್ಕೆ ಮಗನ ಮೇಲೆ ಮಾರಣಾಂತಿಕ ಹಲ್ಲೆ

By Govindaraj SFirst Published Jan 7, 2023, 10:11 AM IST
Highlights

ಪಾಲಕರು ಸಾಲ ತೀರಿಸಿಲ್ಲ ಎನ್ನುವ ಕಾರಣಕ್ಕಾಗಿ ಬಾಲಕನನ್ನು ಅರಳಿ ಮರಕ್ಕೆ ಕಟ್ಟಿಥಳಿಸಿದ ಘಟನೆ ತಾಲೂಕಿನ ಕೆ. ಹೊಸೂರು ಗ್ರಾಮದಲ್ಲಿ ಡಿ. 28ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದ್ದು ಈ ಕುರಿತು ಪಾಲಕರು ಕೊಪ್ಪಳ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಕುಷ್ಟಗಿ (ಜ.07): ಪಾಲಕರು ಸಾಲ ತೀರಿಸಿಲ್ಲ ಎನ್ನುವ ಕಾರಣಕ್ಕಾಗಿ ಬಾಲಕನನ್ನು ಅರಳಿ ಮರಕ್ಕೆ ಕಟ್ಟಿಥಳಿಸಿದ ಘಟನೆ ತಾಲೂಕಿನ ಕೆ. ಹೊಸೂರು ಗ್ರಾಮದಲ್ಲಿ ಡಿ. 28ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದ್ದು ಈ ಕುರಿತು ಪಾಲಕರು ಕೊಪ್ಪಳ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ಸ್ವೀಕರಿಸದೇ ರಾಜಿ ಯತ್ನ ಮಾಡಿದ್ದರಿಂದ ತಾಯಿ ಮಂಜುಳಾ ಮರಿಯಪ್ಪ ಮಡಿವಾಳ ಕೊಪ್ಪಳ ಪೂಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಶುಕ್ರವಾರ ದೂರು ಸಲ್ಲಿಸಿದ್ದಾರೆ.

ಏನಿದು ಘಟನೆ?: ಮಂಜುಳಾ ಎಂಬವರು ಸುಮಾರು 40 ಸಾವಿರವನ್ನು ವ್ಯಕ್ತಿಯೊಬ್ಬರ ಬಳಿ ಸಾಲ ಪಡೆದಿದ್ದರು. ಈ ಪೈಕಿ ಈಗಾಗಲೇ 20 ಸಾವಿರ ಸಾಲ ತೀರಿಸಿದ್ದರು. ಉಳಿದ ಸಾಲವನ್ನು ತೀರಿಸಿರಲಿಲ್ಲ. ಅಲ್ಲದೇ ಮಂಜುಳಾ ಹಾಗೂ ಅವರ ಕುಟುಂಬದವರು ಗ್ರಾಮದ ಬಳಿ ಇರುವ ಹೊಲದಲ್ಲಿಯೇ ಜೀವನ ನಡೆಸುತ್ತಿದ್ದಾರೆ. 14 ವರ್ಷದ ಬಾಲಕ ಗ್ರಾಮಕ್ಕೆ ಬಂದ ವೇಳೆ ಸಾಲ ವಸೂಲಾತಿಗಾಗಿ ಈತನನ್ನು ಕೂಡಿ ಹಾಕಿ ಅರಳಿಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಬಾಲಕನನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಬಾಲಕನ ವೃಷಣಕ್ಕೂ ಬಲವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ.

Shivamogga: ಬಾಲಕಿಗೆ ಲೈಂಗಿಕ ಕಿರುಕುಳ: ಯುವಕನಿಗೆ 20 ವರ್ಷ ಜೈಲು ಶಿಕ್ಷೆ

ಸಾಲ ಮರುಪಾವತಿಗಾಗಿ ತಮ್ಮ ಮಗನ ಮೇಲೆ ಹಲ್ಲೆ ಮಾಡಿದ್ದಾರೆಂದು ಮಹಿಳೆಯೊಬ್ಬರು ದೂರು ನೀಡಿದ್ದು, ಕೂಡಲೇ ಎಫ್‌ಐಆರ್‌ ದಾಖಲಿಸಿ ವಿಚಾರಣೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಅರುಣಾಂಗ್ಷು ಗಿರಿ ಎಸ್ಪಿ

ದಲಿತ ಬಾಲಕನಿಗೆ ಥಳಿತ: ಬಾಲಕಿಯೊಬ್ಬಳ ಒಡವೆ ಕಳ್ಳತನ ಆರೋಪ ಹೊರಸಿ ದಲಿತ ಬಾಲಕನೊಬ್ಬನನ್ನು ಥಳಿಸಿರುವ ಘಟನೆ ತಾಲೂಕಿನ ಕೆಂಪದೇನಹಳ್ಳಿಯಲ್ಲಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೃಷ್ಣಾರೆಡ್ಡಿ ಬಾಲಕಿಯ ಪೋಷಕರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ಪ್ರಕರಣದ ಬಗ್ಗೆ ಪೊಲೀಸರಿಂದಲೂ ಮಾಹಿತಿ ಪಡೆದರು. ಬಳಿಕ ಮಾತನಾಡಿ ಬಂಧಿತರನ್ನು ಬಿಡುಗಡೆಗೊಳಿಸಲು ಮನವಿ ಮಾಡುವುದಾಗಿ ಭರವಸೆ ನೀಡಿದರು.

ಜನಾರ್ದನ ರೆಡ್ಡಿ ಸಾಮಾಜಿಕ ಜಾಲತಾಣಗಳ ಖಾತೆ ಹ್ಯಾಕ್: ದೂರು ದಾಖಲು

ಮುಂದೆ ಇಂತಹ ಘಟನೆಗಳು ಗ್ರಾಮಗಳಲ್ಲಿ ನಡೆಯದಂತೆ ಜನತೆ ಜಾಗರುಕತೆ ವಹಿಸಿ ಶಾಂತಿ ಸುವವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರು ಸಹಕರಿಸಬೇಕೆಂದರು. ಶಾಸಕ ಜೆಕೆ ಕೃಷ್ಣಾರೆಡ್ಡಿ ಬಾಲಕಿಯ ಪೋಷಕರಿಗೆ ವೈಯುಕ್ತಿವಾಗಿ 50 ಸಾವಿರಗಳ ಆರ್ಥಿಕ ನೆರವು ನೀಡಿದರು. ಕಳೆದೆರಡು ದಿನಗಳ ಹಿಂದೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ದಲಿತ ಬಾಲಕನ ಕುಟುಂಬಕ್ಕೆ ಶಾಸಕರು ವೈಯುಕ್ತಿವಾಗಿ ನೀಡಿರುವ 50 ಸಾವಿರ ರು.ಗಳ ನೆರವು ನೀಡಿದ್ದರು.

click me!