ಸಿನೆಮಾ ಸ್ಟೈಲ್‌ನಲ್ಲಿ ಉದ್ಯಮಿ ಮನೆ ದರೋಡೆ, ಮನೆ ಮಂದಿಯನ್ನು ತಂತಿಯಿಂದ ಕಟ್ಟಿ 50 ಲಕ್ಷ ದೋಚಿದ ಕಳ್ಳರು!

Published : Jul 09, 2023, 06:49 PM ISTUpdated : Jul 09, 2023, 06:52 PM IST
ಸಿನೆಮಾ ಸ್ಟೈಲ್‌ನಲ್ಲಿ ಉದ್ಯಮಿ ಮನೆ ದರೋಡೆ, ಮನೆ ಮಂದಿಯನ್ನು ತಂತಿಯಿಂದ ಕಟ್ಟಿ 50 ಲಕ್ಷ ದೋಚಿದ ಕಳ್ಳರು!

ಸಾರಾಂಶ

ಚಿತ್ರದುರ್ಗದ ಹೊಟೇಲ್ ಉದ್ಯಮಿ ನಜೀರ್ ಮನೆಗೆ ನುಗ್ಗಿದ ದರೋಟೆಕೋರರು ಪಿಸ್ತೂಲ್ ತೋರಿಸಿ 50 ಲಕ್ಷ, 13 ತೊಲ ಬಂಗಾರ ದೋಚಿದ ಘಟನೆ ಇಡೀ ಕೋಟೆನಾಡಿನ ಜನರ ನೆಮ್ಮದಿ ಕೆಡಿಸಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ‌ನ್ಯೂಸ್

ಚಿತ್ರದುರ್ಗ (ಜು.9): ಉದ್ಯಮಿಗಳ ಮಕ್ಕಳನ್ನು ಒತ್ತೆಯಾಳಾಗಿಟ್ಕೊಂಡು ರಾಬರಿ ಮಾಡುವ ದೃಶ್ಯಗಳನ್ನು ಸಿನಿಮಾದಲ್ಲಿ ನೋಡ್ತಿದ್ದೆವು. ಆದರೆ ಅದೇ ಮಾದರಿಯಲ್ಲಿ ಹಾಡು ಹಗಲಿನಲ್ಲೇ ಮನೆಗೆ ನುಗ್ಗಿದ ದರೋಡೆಕೋರರು ಪಿಸ್ತೂಲ್ ಮತ್ತು ಮಾರಕಾಸ್ತ್ರ ತೋರಿಸಿ  ರಾಬರಿ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. 

ಕೋಟೆನಾಡು ಚಿತ್ರದುರ್ಗದ ಬ್ಯಾಂಕ್ ಕಾಲೋನಿಯಲ್ಲಿರುವ  ಸೂರ್ಯೋದಯ ಹೋಟೆಲ್ ನ ಮಾಲೀಕ, ಉದ್ಯಮಿ ನಜೀರ್ ಅಹಮ್ಮದ್ ಅವರ ಮನೆಗೆ ಜು.8ರಂದು ಬೆಳಿಗ್ಗೆ 9.20 ಕ್ಕೆ ನುಗ್ಗಿರೊ ಮೂವರು ದರೋಡೆಕೋರರ ಗುಂಪೊಂದು ನಜೀರ್ ಅವರ ಮಗ ಸಮೀರ್ ಹಾಗೂ ಅಳಿಯನಾದ ಶಹನಾಜ್  ಅವರನ್ನು‌ ಒತ್ತೆಯಾಳಾಗಿ ಇಟ್ಟುಕೊಂಡು ಐವತ್ತು ಲಕ್ಷ ರೂ.ನಗದು  ಮತ್ತು 12 ತೊಲೆ ಚಿನ್ನ ಮತ್ತು ಮೊಬೈಲ್ ಗಳನ್ನು ಕದ್ದು   ಎಸ್ಕೇಪ್ ಆಗಿದ್ದರು. ಈ ಸಂಬಂಧ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರ ತಿಳಿದ ಪೂರ್ವ ವಲಯ ಐಜಿಪಿ ತ್ಯಾಗರಾಜ್ ಹಾಗು ಚಿತ್ರದುರ್ಗ ಎಸ್ಪಿ ಪರಶುರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಆರೋಪಿಗಳ  ಬಂಧನಕ್ಕೆ ಬಲೆ ಬೀಸಿದ್ದಾರೆ.

ಭಾರತದ ಮೊದಲ ಮಹಿಳಾ ಸರಣಿ ಹಂತಕಿ ಬೆಂಗಳೂರಿನ ಸೈನೈಡ್ ಮಲ್ಲಿಕಾ! 10 ವರ್ಷ

ಇನ್ನು ಮನೆಯ ಸದಸ್ಯರನ್ನೆಲ್ಲ ತಂತಿಯಿಂದ ಬಂದಿಸಿದ್ರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಿಂದಲೇ ಚಹಾ ಮಾಡಿಸಿಕೊಂಡು ಸೇವಿಸಿರೋ ದರೋಡೆಕೋರರು, ಮನೆಯ ಯಜಮಾನರನ್ನು ಉಸಿರು ಗಟ್ಟಿಸಿ ಕೊಲ್ಲಲು ಯತ್ನಿಸಿದ್ರು. ಅಲ್ಲದೇ ಏನಾದ್ರು ಉಪಾಯ ಮಾಡಿದ್ರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದು, ನಜೀರ್ ಅವರ ಹೊಟೆಲ್ ಹಾಗು ಇತರೆಡೆ ಇಡಲಾಗಿದ್ದ ವ್ಯಾಪಾರದ ಹಣವನ್ನು ತರಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ವೇಳೆ ತಕ್ಷಣ ಅಲರ್ಟ್ ಆದ ಚಿತ್ರದುರ್ಗ ಬಡಾವಣೆ ಠಾಣೆ ಸಿಪಿಐ ನಯೀಮ್ ನಗರ ಠಾಣೆ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದ ತಂಡ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಂಡತಿಯ ಕೊಂದು ಮೆದುಳು ತಿಂದ ಗಂಡ, ತಲೆಬುರುಡೆ ಸಿಗರೇಟ್ ಬೂದಿ ಹಾಕಲು ಬಳಕೆ!

ಒಟ್ಟಾರೆ ಸಿನಿಮಾ ಶೈಲಿಯಲ್ಲಿ ನಡೆದಿರೋ ದರೋಡೆಗೆ ಕೋಟೆನಾಡಿನ ಜನರು ಬೆಚ್ಚಿಬಿದ್ದಿದ್ದಾರೆ. ಈ ಮನೆಯ ಸುತ್ತಲೂ ಪೊಲೀಸ್ ಅಧಿಕಾರಿಗಳ ನಿವಾಸಗಳಿದ್ದು, ಅವರೆಲ್ಲರಿಗೂ ಸ್ವಲ್ಪವೂ ಡೌಟ್ ಬಾರದಂತೆ ಖದೀಮರು ದರೋಡೆ ನಡೆಸಿರೋದು ಮಾತ್ರ ವಿಪರ್ಯಾಸ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ