ದರ್ಶನ್‌ ರಾಜಾತಿಥ್ಯ ಬಳಿಕ ಫುಲ್‌ ಸ್ಟ್ರಿಕ್ಟ್‌: ಜೈಲಿನಲ್ಲಿ ತಂಬಾಕು ಕೊಡದಿದ್ದಕ್ಕೆ ಕೈದಿಗಳಿಂದ ಗಲಾಟೆ..!

By Girish GoudarFirst Published Aug 29, 2024, 6:20 PM IST
Highlights

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಕೇಸ್‌ ಬಳಿಕ ರಾಜ್ಯದಾದ್ಯಂತ ಜೈಲಿನಲ್ಲಿ  ಭದ್ರತೆ ವ್ಯವಸ್ಥೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕಾರವಾರ ಜೈಲಿನಲ್ಲಿ ತಂಬಾಕು ಕೊಟ್ಟಿಲ್ಲ ಎಂದು ರೊಚ್ಚಿಗೆದ್ದ ಕೈದಿಗಳು ಗಲಾಟೆ ತಗೆದಿದ್ದಾರೆ. 

ಉತ್ತರಕನ್ನಡ(ಆ.29): ಜೈಲು ವ್ಯವಸ್ಥೆಯ ಬಗ್ಗೆ ರಾಜದೆಲ್ಲೆಡೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕಾರವಾರ ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಗಲಾಟೆ ನಡೆದಿದೆ. ನಾಲ್ವರು ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು ಓರ್ವನಿಗೆ ಭಾರೀ ಗಾಯವಾಗಿದೆ ಎಂದು ತಿಳಿದು ಬಂದಿದೆ. 

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಕೇಸ್‌ ಬಳಿಕ ರಾಜ್ಯದಾದ್ಯಂತ ಜೈಲಿನಲ್ಲಿ  ಭದ್ರತೆ ವ್ಯವಸ್ಥೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕಾರವಾರ ಜೈಲಿನಲ್ಲಿ ತಂಬಾಕು ಕೊಟ್ಟಿಲ್ಲ ಎಂದು ರೊಚ್ಚಿಗೆದ್ದ ಕೈದಿಗಳು ಗಲಾಟೆ ತಗೆದಿದ್ದಾರೆ. 

Latest Videos

ದರ್ಶನ್‌ಗೆ ಬಳ್ಳಾರಿ ಸೇಫ್ ಅಲ್ಲ, ತಿಹಾರ್ ಜೈಲ್‌ಗೆ ಶಿಫ್ಟ್ ಮಾಡಿ: ಮಾಜಿ ಕೈದಿ ಶಿಗ್ಲಿ ಬಸ್ಯಾ ಸ್ಫೋಟಕ ಹೇಳಿಕೆ

ಗಾಂಜಾ ಪಾರ್ಟಿ ಕೈದಿ ಮುಜಾಮಿಲ್ ಹಾಗೂ 3-4 ಸಹಚರರಿಂದ ಗಲಾಟೆ ನಡೆದಿದೆ. ತಮಗೆ ತಂಬಾಕು ಪೂರೈಕೆ  ಮಾಡಬೇಕೆಂದು ಪಟ್ಟು ಹಿಡಿದು ಜೈಲು ಸಿಬ್ಬಂದಿ ಜತೆ ಗಲಾಟೆ ಮಾಡಿಕೊಂಡಿದ್ದಾರೆ. ಆದ್ರೆ, ಗಾಂಜಾ ದೊರೆಯದ ಹಿನ್ನೆಲೆಯಲ್ಲಿ ಕೈದಿಗಳು ಗಲಾಟೆ ನಡೆಸಿದ್ದಾಗಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

ಬೆಳಗ್ಗೆಯಿಂದಲೂ ಜೈಲಿನಲ್ಲಿ ಊಟ ಸರಿಯಲ್ಲ, ವ್ಯವಸ್ಥೆ ಸರಿಯಿಲ್ಲ ಎಂದು ಕೈದಿ ಮುಜಾಮಿಲ್ ತಗಾದೆ ತೆಗೆಯುತ್ತಿದ್ದನಂತೆ. ಕೈದಿ ಮುಜಾಮಿಲ್‌ ಜತೆ ಇತರ 3-4 ಸಹ ಕೈದಿಗಳೂ ಸಹ ದನಿಗೂಡಿಸಿದ್ದರು. ಸಿಬ್ಬಂದಿ ಜತೆ ಗಲಾಟೆ ಮಾಡಿ ಮುಜಾಮಿಲ್ ತನ್ನ ತಲೆಗೆ ತಾನೇ ಕಲ್ಲಿನಿಂದ ಹೊಡೆದುಕೊಂಡಿದ್ದಾನೆ. ಅಲ್ಲದೇ, ಇನ್ನೊಬ್ಬ ಕೈದಿ ಫರಾನ್ ಛಬ್ಬಿ ಜೈಲಿನ ಕಂಬಿಗೆ ತನ್ನ ತಲೆಯನ್ನು ಹೊಡೆದುಕೊಂಡಿದ್ದಾನೆ.  ಈ ಹಿಂದೆ 500ರೂ., 1000ರೂ. 2000ರೂ. ನೀಡಿದ್ರೆ ಕೈದಿಗಳ ಕೈಗೆ ತಂಬಾಕು, ಗಾಂಜಾ ಸೇರ್ತಿತ್ತು ಎಂದು ಹೇಳಲಾಗುತ್ತಿದೆ. ನಟ ದರ್ಶನ್ ಪ್ರಕರಣ ನಂತರ ಕಾರಾಗ್ರಹದಲ್ಲಿ ಬಿಗಿ ಬಂದೋಬಸ್ತ್ ನಡೆಸಿದ್ದರಿಂದ ಮುಜಾಮಿಲ್ ಹಾಗೂ ಫರಾನ್ ಹುಚ್ಚನಂತಾಗಿದ್ದರಂತೆ.  ಆದರೆ, ತಮ್ಮ ಮೇಲೆ ಜೈಲಿನ ಅಧಿಕಾರಿಗಳೇ ಹಲ್ಲೆ ನಡೆಸಿದ್ದಾರೆ ಎಂದು ಕೈದಿಗಳು ಆರೋಪಿಸಿದ್ದಾರೆ. ಸದ್ಯ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಕೈದಿಗಳಿಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ. 

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್‌ ಬಳ್ಳಾರಿ ಜೈಲ್‌ಗೆ ಶಿಫ್ಟ್‌: ನಟನನ್ನ ನೋಡಲು ಕೈದಿಗಳಲ್ಲಿ ಕಾತುರ..!

ತಂಬಾಕು ಯಾಕೆ ಕೊಡುತ್ತಿಲ್ಲ ಎಂದು ಕೈದಿಗಳು ಭಾರೀ ಗಲಾಟೆ ನಡೆಸ್ತಿದ್ದರು. ಈ ವೇಳೆ ಜೈಲರ್ ಮಹೇಶ ಗೌಡ ಅವರು ಕೈದಿಗಳಿಗೆ ಗದರಿಸಿ ಸುಮ್ಮನಿರಿಸಲು ಯತ್ನಿಸಿದ್ರು. ಈ ಹಿನ್ನೆಲೆ ತಮ್ಮ ತಲೆಗೆ ಕಲ್ಲು ಹಾಗೂ ಜೈಲಿನ ಕಂಬಿಗೆ ಹೊಡೆದುಕೊಂಡು ಕೈದಿಗಳು ಗಾಯ ಮಾಡಿಕೊಂಡಿದ್ದರು. 

ಫರಾನ್ ಛಬ್ಬಿ ಹಾಗೂ ಮುಜಾಮಿಲ್ ಇಬ್ಬರಿಗೂ ತಲೆಗೆ ಮತ್ತು ಕೈಗೆ ಗಾಯವಾಗಿದೆ. ದಾಂಡೇಲಿಯ ಮುಜಾಮಿಲ್ ಎನ್ ಡಿ ಪಿಎಸ್ ಪ್ರಕರಣ,. ಕಳ್ಳತನ ಪ್ರಕರಣದಲ್ಲಿ ಕುಮಟಾ ಮೂಲದ ಫರಾನ್ ಛಬ್ಬಿ ಸೆರೆವಾಸ ಅನುಭವಿಸುತ್ತಿದ್ದಾರೆ. 
ಚಿಕಿತ್ಸೆಗೆಂದು ಕೈದಿಗಳನ್ನು ಕಾರವಾರದ ಜಿಲ್ಲಾಸ್ಪತ್ರೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಜೈಲರ್ ಮಹೇಶ್ ಗೌಡ ಮೇಲೆ ಕೈದಿಗಳು ಆರೋಪ ಮಾಡಿದ್ದಾರೆ. ನಮಗೆ ಇಬ್ರಿಗೂ ಜೈಲರ್ ಮನಸೋ ಇಚ್ಛೆ ಥಳಿಸಿದ್ದಾರೆ. ಜೈಲರ್ ಹಲ್ಲೆಯಿಂದ ನಮಗೆ ಇಬ್ಬರಿಗೂ ರಕ್ತಸ್ರಾವ ಆಗಿದೆ. ನಮ್ಮ ಈ ಅವಸ್ಥೆಗೆ ಜೈಲರ್ ಮಹೇಶ್ ಗೌಡ ಕಾರಣ ಎಂದು ಕೈದಿಗಳು ಗಂಭೀರವಾದ ಆರೋಪ ಮಾಡಿ ತೆರಳಿದ್ದಾರೆ.  

click me!