ಪತ್ನಿ ಜತೆ ಗಲಾಟೆ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ/ ಶಿವಾನಂದ (45) ಮೃತ ದುರ್ದೈವಿ/ ಮೈಸೂರಿನ ಮೇಟಗಳ್ಳಿಯ ಬಿ.ಎಂ.ಶ್ರೀ ನಗರದಲ್ಲಿ ಘಟನೆ.
ಟೆಂಪೋ ಟ್ರಾವೆಲರ್ ಇಟ್ಟಿದ್ದ ಶಿವಾನಂದ/ ಕರೊನಾ ಹಿನ್ನೆಲೆ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದ ಶಿವಾನಂದ್ ಮದ್ಯಪಾನ ಚಟಕ್ಕೆ ಸಿಲುಕಿದ್ದರು ಎಂಬ ಆರೋಪ.
ಈ ವಿಚಾರವಾಗಿ ಪದೇ ಪದೇ ಗಲಾಟೆ/
ಮೈಸೂರು(ಸೆ. 30) ಪತ್ನಿ ಜತೆ ಗಲಾಟೆ ಮಾಡಿಕೊಂಡ ಗಂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರಿನ ಮೇಟಗಳ್ಳಿಯ ಬಿ.ಎಂ.ಶ್ರೀ ನಗರದಲ್ಲಿ ಶಿವಾನಂದ (45) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಟೆಂಪೋ ಟ್ರಾವೆಲರ್ ಇಟ್ಟಿದ್ದ ಶಿವಾನಂದ ಅವರಿಗೆ ಕೊರೋನಾ ಲಾಕ್ ಡೌನ್ ಸಂಕಟ ತಂದಿತ್ತು. ಕರೊನಾ ಹಿನ್ನೆಲೆ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದ ಶಿವಾನಂದ್.
ಮದ್ಯಪಾನಕ್ಕೆ ದಾಸರಾಗಿದ್ದರು. ಇದೇ ವಿಚಾರವಾಗಿ ಹೆಂಡತಿಯೊಂದಿಗೆ ಪದೇ ಪದೇ ಗಲಾಟೆ ಆಗುತ್ತಿತ್ತು.
ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ರೇಪ್!
ಮನನೊಂದ ಶಿವಾನಂದ ಮೇಟಗಳ್ಳಿಯ ಗ್ಯಾಸ್ ಗೋದಾಮು ಬಳಿ ನಿರ್ಮಾಣ ಹಂತದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಗಳ ಮೊಬೈಲ್ ಗೆ ಫೋನ್ ಮಾಡಿ ಸಾಯುತ್ತಿರುವುದಾಗಿ ಶಿವಾನಂದ ತಿಳಿಸಿದ್ದರು. ಕುಡಿದ ಅಮಲಿನಲ್ಲಿ ಆಗಾಗ ಶಿವಾನಂದ ಭಯ ಪಡಿಸುತ್ತಿದ್ದರು. ಇದು ಸಹಜವಾದ ಬೆದರಿಕೆ ಎಂದು ಸುಮ್ಮನಾಗಿದ್ದ ಪತ್ನಿ ಮಣಿ ಅಲ್ಲಿಗೆ ಬಿಟ್ಟಿದ್ದರು.
ಕುಡಿದ ಅಮಲಿನಲ್ಲಿ ನೇಣಿಗೆ ಶರಣಾಗಿರುವ ಶಿವಾನಂದ್ ನೇಣಿಗೆ ಶರಣಾಗಿದ್ದಾನೆ. ಹಿಂದೆಯೂ ಒಂದೆರಡು ಸಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು.