ಪಟ್ಟಣದ ಜಿಗಳಿ ವೃತ್ತದಲ್ಲಿನ ಸಾಯಿ ಬೇಕರಿಯಲ್ಲಿ ಯುವಕರಿಬ್ಬರ ಜಗಳದಲ್ಲಿ ಒಬ್ಬನಿಗೆ ಚಾಕು ಇರಿತಕ್ಕೆ ಒಳಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹಾಗೂ ಅಧಿಕಾರಿಗಳು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಘಟನೆ ಬಗ್ಗೆ ಮಾಹಿತಿ ಪಡೆದರು.
ಮಲೇಬೆನ್ನೂರು (ಡಿ.7) : ಪಟ್ಟಣದ ಜಿಗಳಿ ವೃತ್ತದಲ್ಲಿನ ಸಾಯಿ ಬೇಕರಿಯಲ್ಲಿ ಯುವಕರಿಬ್ಬರ ಜಗಳದಲ್ಲಿ ಒಬ್ಬನಿಗೆ ಚಾಕು ಇರಿತಕ್ಕೆ ಒಳಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹಾಗೂ ಅಧಿಕಾರಿಗಳು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಘಟನೆ ಬಗ್ಗೆ ಮಾಹಿತಿ ಪಡೆದರು.
ಹರಿಹರ ತಾಲೂಕು ಮಲೇಬೆನ್ನೂರು ಗ್ರಾಮದ ಮಹಮ್ಮದ್ ಇರ್ಫಾನ್(24 ವರ್ಷ) ಇರಿತಕ್ಕೆ ಒಳಗಾಗಿದ್ದ ಯುವಕ. ಪಟ್ಟಣದ ಸಾಯಿ ಬೇಕರಿ ಬಳಿ ಅಭಿಷೇಕ್ ಎಂಬ ಯುವಕನ ಜೊತೆಗೆ ಜಗಳವಾಗಿದ್ದು, ಈ ಸಂದರ್ಭದಲ್ಲಿ ಇರ್ಫಾನ್ ಚಾಕು ಇರಿತಕ್ಕೆ ಒಳಗಾಗಿದ್ದ. ಅಭಿಷೇಕನಿಗೆ ಕಣ್ಣಿಗೆ ಗಾಯವಾಗಿದೆ. ಇರ್ಫಾನ್‌ನ್ನು ತಕ್ಷಣವೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದ. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಡಿದ ಮತ್ತಲ್ಲಿ ಮೂವರ ಮೇಲೆ ಹಲ್ಲೆ; ಬುದ್ಧಿ ಹೇಳಿದ್ದಕ್ಕೆ ಚಾಕು ಇರಿತ..!
ಕಳೆದ ರಾತ್ರಿಯೇ ಮಲೆಬೆನ್ನೂರು ಪಟ್ಟಣಕ್ಕೆ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಭೇಟಿ ನೀಡಿದ್ದ ಎಸ್ಪಿ ಸಿ.ಬಿ.ರಿಷ್ಯಂತ್ ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳು ಇರ್ಫಾನ್ ಆರೋಗ್ಯವನ್ನು ವಿಚಾರಿಸಿ, ಯಾವುದೇ ಅಪಾಯವಿಲ್ಲವೆಂಬ ಸಂಗತಿಯನ್ನು ಆಸ್ಪತ್ರೆಯ ವೈದ್ಯರಿಂದ ಖಚಿತಪಡಿಸಿಕೊಂಡರು. ಗಾಯಾಳು ಯುವಕ ಹಾಗೂ ಆತನ ಸಂಬಂಧಿಕರಿಂದ ಮಾಹಿತಿ ಪಡೆದರು.
ಇರ್ಫಾನ್ ಇತರರ ಮೇಲೆ ಪ್ರತಿ ದೂರು:
ಈ ವಿಚಾರ ಕುರಿತು ಸಾಯಿ ಬೇಕರಿಯಲ್ಲಿ ಟೀ-ಶರ್ಚ್ ಹರಿದು, ಜಾತಿ ನಿಂದನೆ ಮಾಡಿದ್ದಾನೆ ಎಂದು ಸಂಜೀವ ಕುಮಾರ್ ಎಂಬಾತನು ಇರ್ಫಾನ್, ಅಸೀಫ್ ಮತ್ತು ಇತರರ ಮೇಲೆ ಮಂಗಳವಾರ ಪ್ರತಿದೂರು ದಾಖಲಿಸಿದ್ದಾನೆ ಎಂದು ವೃತ್ತ ನಿರೀಕ್ಷಕ ಸತೀಶ್ ತಿಳಿಸಿದ್ದಾರೆ.
Belagavi: ಬಾಲಕಿ ಚುಡಾಯಿಸಿದ್ದನ್ನು ಪ್ರಶ್ನಿಸಿದ ನಾಲ್ವರಿಗೆ ಚಾಕು ಇರಿತ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠ ಸಿ.ಬಿ.ರಿಷ್ಯಂತ್, ಸಾಮಾಜಿಕ ಜಾಲತಾಣಗಳಲ್ಲಿ ಯಾರಾದರೂ ಸುಳ್ಳು ಮಾಹಿತಿ ಹರಡಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂಜಾಗ್ರತೆಯಾಗಿ ಮಲೇಬೆನ್ನೂರು ಪಟ್ಟಣ, ಹರಿಹರದಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಜನತೆಗೆ ಮನವಿ ಮಾಡಿದರು.