
!ಬಳ್ಳಾರಿ (ಡಿ.4): ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮಗಳ ಯುವಕರ ನಡುವೆ ಮಾರಾಮಾರಿ ನಡೆದು ಎರಡೂ ಕಡೆಯ ಸುಮಾರು ಏಳೆಂಟು ಜನರು ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಇಂದ್ರಾನಗರ ಗ್ರಾಮದಲ್ಲಿ ನಡೆದಿದೆ. ಗಲಾಟೆ ಮಾರನೇ ದಿನ ಒಂದು ಗ್ರಾಮದ ಯುವಕರಿಂದ ಮತ್ತೊಂದು ಗ್ರಾಮಕ್ಕೆ ನುಗ್ಗಿ ಜನರ ಮೇಲೆ ಹಲ್ಲೆ..
ಕಳೆದ ಶನಿವಾರ ಇಂದಿರಾ ನಗರದಲ್ಲಿ ಗೌರಮ್ಮನ ಹಬ್ಬದ ನಿಮಿತ್ತ ನಾಟಕ, ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ಕೋಳೂರು ಗ್ರಾಮದ ಯುವಕರು ಬಂದು ಅಸಭ್ಯವಾಗಿ ವರ್ತಿಸಿದ್ದರು. ಇದರಿಂದ ಇಂದಿರಾನಗರ ಗ್ರಾಮದ ಯುವಕ ಕೋಳೂರು ಗ್ರಾಮದ ಒಬ್ಬ ಯುವಕನಿಗೆ ಕೆನ್ನೆಗೆ ಹೊಡೆದು ಕಳಿಸಿದ್ದ ಇಂದಿರಾನಗರದ ಜನರು. ಆದರೆ ಘಟನೆ ನಡೆದ ಮರುದಿನ ಕೋಳೂರು ಗ್ರಾಮದ ಯುವಕರು ಇಂದಿರಾನಗರಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ. ಕೋಳೂರು ಗ್ರಾಮದ ಸುಮಾರು 40ಕ್ಕೂ ಹೆಚ್ಚು ಯುವಕರು ಕಲ್ಲು ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಯಾದಗಿರಿ: ಉದ್ಯಾನ ಎಕ್ಸ್‌ಪ್ರೆಸ್‌ನಲ್ಲಿ ಸೀಟಿಗಾಗಿ ಮಾರಾಮಾರಿ; ಪ್ರಯಾಣಿಸುತ್ತಲೇ ಬಡಿದಾಡಿಕೊಂಡ ಯುವಕರು!
ಸದ್ಯ ಇಂದಿರಾನಗರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಗಳ ವಿರುದ್ದ ಕುರುಗೋಡು ಠಾಣೆಯಲ್ಲಿ ಎಫ್ಐಆರ್ ದಾಖಲು. ಆರೋಪಿಗಳನ್ನ ಬಂದಿಸುವಂತೆ ಇಂದ್ರಾ ನಗರದ ಜನರ ಒತ್ತಾಯಿಸಿದ್ದಾರೆ.👇🏻
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ