ರೈಲಿನಲ್ಲಿ ಸೀಟಿನ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿರುವ ಯಾದಗಿರಿ ಬಳಿ ಉದ್ಯಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಯಾದಗಿರಿಯಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದ ರೈಲು. ಈ ವೇಳೆ ಮಹಿಳೆಯರ ಮೇಲೂ ಮಾರಾಣಾಂತಿಕ ಹಲ್ಲೆ ನಡೆಸಿರುವ ಪುಂಡರುಕಕ.
ಯಾದಗಿರಿ (ಡಿ.4): ರೈಲಿನಲ್ಲಿ ಸೀಟಿನ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿರುವ ಯಾದಗಿರಿ ಬಳಿ ಉದ್ಯಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ.
ಯಾದಗಿರಿಯಿಂದ ಬೆಂಗಳೂರಿನತ್ತ ಹೊರಟಿದ್ದ ಟ್ರೈನ್. ಯಾದಗಿರಿ ಬಿಡುತ್ತಲೇ ನಡೆದಿರುವ ಜಗಳ. ಪ್ರಯಾಣಿಸುತ್ತಲೇ ಹೊಡೆದಾಡಿಕೊಂಡ ಯುವಕರು. ಕೆಲ ಯುವಕರು ಪುಂಡಾಟ ಮಾಡಿ ಮಹಿಳೆಯರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಉದ್ಯಾನ ಎಕ್ಸ್‌ಪ್ರೆಸ್ ಪ್ರಯಾಣ ವೇಳೆ ಸೀಟಿನ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಅನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ನಡೆದಿರೋ ಹೊಡೆದಾಟ. ಸಹಪ್ರಯಾಣಿಕರು ಬಿಡಿಸಿದ್ರೂ ಸಹ ಸೀಟಿನ ಮೇಲೆ ಏರಿ ಹಲ್ಲೆ ನಡೆಸಿರೋ ಪುಂಡರು. ಟ್ರೈನ್ ಮಂತ್ರಾಲಯ ರೀಚ್ ಆಗುತ್ತಲೇ ರೈಲು ಬೋಗಿಗೆ ಎಂಟ್ರಿ ಆದ ಪೊಲಿಸರು. ಸದ್ಯ ಹಲ್ಲೆ ನಡೆಸಿರುವ ಪುಂಡ ಯುವಕರ ವಿಚಾರಣೆ ನಡೆಸಿರು ಪೊಲೀಸರು.
ಅನ್ನಭಾಗ್ಯ ಅಕ್ಕಿ ಅಕ್ರಮದಲ್ಲಿ ಕೇಳಿಬಂದಿರೋ ವ್ಯಕ್ತಿಗೆ ಪೊಲೀಸ್ ಸನ್ಮಾನ: ಫೋಟೋ ವೈರಲ್!
ಪ್ರತಿದಿನವೂ ಉದ್ಯಾನ ಎಕ್ಸ್‌ಪ್ರೆಸ್ ಅತೀಯಾದ ಜನಜಂಗುಳಿಯಿಂದ ತುಂಬಿರುತ್ತದೆ ಈ ವೇಳೆ ಅನ್ಯರಾಜ್ಯದ ಪಾನಮತ್ತ ಯುವಕರು ಕ್ಷುಲ್ಲಕ ಕಾರಣಕ್ಕೆ ಜಗಳ ಹಲ್ಲೆ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ರೈಲ್ವೆ ಪ್ರಯಾಣ ಎಂದರೆ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕೈಗೊಳ್ಳಬೇಕಿದೆ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.