Bengaluru: ಯೂನಿಟಿ ಬಿಲ್ಡಿಂಗ್‌ನಿಂದ ಜಿಗಿದು ಮಹಿಳಾ ಮ್ಯಾನೇಜರ್ ಆತ್ಮಹತ್ಯೆ: ಖಿನ್ನತೆ ಶಂಕೆ

Published : Apr 07, 2023, 12:10 PM IST
Bengaluru: ಯೂನಿಟಿ ಬಿಲ್ಡಿಂಗ್‌ನಿಂದ ಜಿಗಿದು ಮಹಿಳಾ ಮ್ಯಾನೇಜರ್ ಆತ್ಮಹತ್ಯೆ: ಖಿನ್ನತೆ ಶಂಕೆ

ಸಾರಾಂಶ

ನಗರದ ಟೌನ್‌ ಹಾಲ್‌ ಸಮೀಪದ ಯೂನಿಟಿ ಬಿಲ್ಡಿಂಗ್‌ನ ನಾಲ್ಕನೇ ಮಹಡಿಯಿಂದ ಜಿಗಿದು ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌(ಐಒಸಿಎಲ್‌)ನ ಪ್ರಾದೇಶಿಕ ವ್ಯವಸ್ಥಾಪಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬೆಂಗಳೂರು (ಏ.07): ನಗರದ ಟೌನ್‌ ಹಾಲ್‌ ಸಮೀಪದ ಯೂನಿಟಿ ಬಿಲ್ಡಿಂಗ್‌ನ ನಾಲ್ಕನೇ ಮಹಡಿಯಿಂದ ಜಿಗಿದು ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌(ಐಒಸಿಎಲ್‌)ನ ಪ್ರಾದೇಶಿಕ ವ್ಯವಸ್ಥಾಪಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶೋಕ ನಗರ ನಿವಾಸಿ ಅಪರ್ಣಾ ಕುಮಾರಿ (41) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ರಾತ್ರಿ 7ರ ಸುಮಾರಿಗೆ ಘಟನೆ ನಡೆದಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ದೆಹಲಿಯಲ್ಲಿರುವ ಮೃತಳ ಪತಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಆತ ಬೆಂಗಳೂರಿಗೆ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರ್ಣಾ ಕುಮಾರಿ ಮತ್ತು ಅವರ ಪತಿ ಇಬ್ಬರು ಈ ಹಿಂದೆ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅಪರ್ಣಾ ಕುಮಾರಿ ಅವರಿಗೆ ಬೆಂಗಳೂರಿಗೆ ವರ್ಗಾವಣೆ ಆಗಿತ್ತು. ಈ ನಡುವೆ ಕೆಲ ವೈಯಕ್ತಿಕ ಕಾರಣಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಗುರುವಾರ ಸಂಜೆ 6ರವರೆಗೂ ಅಪರ್ಣಾ ಯೂನಿಟಿ ಬಿಲ್ಡಿಂಗ್‌ನ ಐಒಸಿಎಲ್‌ ಕಚೇರಿಯಲ್ಲೇ ಇದ್ದರು. ಬಳಿಕ ಶೌಚಾಲಯಕ್ಕೆ ತೆರಳಿ ಸುಮಾರು ಒಂದು ತಾಸು ಅಲ್ಲೇ ಇದ್ದು ಬಳಿಕ ಹೊರಗೆ ಬಂದಿದ್ದರು. ನಂತರ ಕಚೇರಿಯ ಕಿಟಕಿ ತೆರೆದು ಅದಕ್ಕೆ ಬಟ್ಟೆ ಕಟ್ಟಿ ಜಿಗಿಯಲು ಯತ್ನಿಸಿದ್ದಾರೆ. ಇದನ್ನು ನೋಡಿದ ಸಿಬ್ಬಂದಿ ರಕ್ಷಣೆಗೆ ಧಾವಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಅಪರ್ಣಾ ಕಟ್ಟಡದಿಂದ ಏಕಾಏಕಿ ಜಿಗಿದಿದ್ದಾರೆ. 

ದರ್ಶನ್ ಧ್ರುವ ನಾರಾಯಣ್ ಕುಟುಂಬಕ್ಕೆ ಮತ್ತೊಂದು ಶಾಕ್: ದಿವಂಗತ ಆರ್.ಧ್ರುವ ನಾರಾಯಣ್ ಧರ್ಮಪತ್ನಿ ವೀಣಾ ನಿಧನ

ಆಗ ತಲೆ ಹಾಗೂ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವವಾಗಿ ಅಪರ್ಣಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪರ್ಣಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಚೇರಿಯಲ್ಲಿ ಯಾವುದೇ ಮರಣಪತ್ರವೂ ಸಿಕ್ಕಿಲ್ಲ. ಕಚೇರಿಯಲ್ಲಿ ಡೈರಿ ಹಾಗೂ ಕೆಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪತಿ ದೆಹಲಿಯಿಂದ ಬಂದ ಬಳಿಕ ಮಾಹಿತಿ ಪಡೆಯಲಾಗುವುದು. ಈ ಸಂಬಂಧ ಎಸ್‌.ಜೆ.ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಹೊನ್ನಾವರ ತಾಲೂಕಿನ ನಗರೆ ಮಾರಿಮನೆಯ ಗಗನ ರವಿ ನಾಯ್ಕ (21) ಗೋವಾದ ಬೀಚ್‌ ವೊಂದರ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ರಾಮನವಮಿ ದಿನದಂದು ಮನೆಯಿಂದ ಹೊನ್ನಾವರ ಜಾತ್ರೆಗೆ ಹೋಗುತ್ತೇನೆ ಎಂದು ಮೂರು ಜನ ಸ್ನೇಹಿತರೊಂದಿಗೆ ಮನೆಯಲ್ಲಿ ಹೇಳದೇ ಗೋವಾಗೆ ಹೋಗಿದ್ದನು ಎನ್ನಲಾಗಿದೆ. ನೆರೆ ರಾಜ್ಯ ಗೋವಾ ಹೋದ ಬಳಿಕ ಮನೆಗೆ ಬೇರೊಂದು ಸಂಖ್ಯೆಯಿಂದ ಕರೆ ಮಾಡಿ ಸಂಬಂಧಿಕರ ಮನೆಯಲ್ಲಿ ಇರುವುದಾಗಿ ತಿಳಿಸಿದ್ದ. ಜೊತೆಗಿದ್ದ ಸ್ನೇಹಿತರು ವಾಪಾಸ್‌ ಬಂದ ಬಳಿಕ ಈತನು ಗೋವಾದಲ್ಲೇ ಇರದೇ ಮನೆಗೆ ಬಾರದ ಮಗನನ್ನು ಮನೆಯವರು ಹುಡುಕುತ್ತಾ ಇರುವಾಗ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ.

ಬಿಜೆಪಿಗೆ ಸುದೀಪ್‌ ಬೆಂಬಲ ಸ್ವಾಗತಾರ್ಹ: ಬಿ.ಎಸ್‌.ಯಡಿಯೂರಪ್ಪ

ಈ ಕುರಿತು ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹರೆಯದ ಹುಡುಗನ ಸಾವಿಗೆ ಅಸಲಿ ಕಾರಣವೇನು? ಜೊತೆಗಿದ್ದ ಸ್ನೇಹಿತರಿಗೆ ಈತ ಹೇಳಿದ್ದು ಏನು? ಅಸಲಿಗೆ ಅಲ್ಲಿ ನಡೆದಿದ್ದೇನು ಎನ್ನುವ ಹತ್ತು ಹಲವು ಅನುಮಾನಗಳಿಗೆ ಉತ್ತರ ಸೂಕ್ತ ತನಿಖೆಯಿಂದ ದೊರೆಯಬೇಕಿದೆ. ಪುತ್ರನನ್ನು ಕಳೆದುಕೊಂಡ ಆತನ ಕುಟುಂಬದ ದುಃಖ, ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವಕ ಕುಟುಂಬಕ್ಕೆ ಒಬ್ಬನೆ ಮಗನಾಗಿದ್ದ, ತಂದೆ ಸಾಕಷ್ಟುಜಮೀನು ಹೊಂದಿದ್ದು ಕೃಷಿ ಬೇಸಾಯ ಜೊತೆಗೆ ಉಧ್ಯಮದಲ್ಲೂ ತೊಡಗಿಕೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು