
ಕುಷ್ಟಗಿ (ಏ.7) : ಪಟ್ಟಣದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಲ್ಲದೇ ಕುಟುಂಬ ಸಮೇತ ಕೊಲೆ ಮಾಡುವ ಬೆದರಿಕೆ ಹಾಕಿದ್ದು, ದಯಾಮರಣಕ್ಕೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಿರುವುದಾಗಿ ಸ್ಥಳೀಯ ಉದ್ಯಮಿ ಶಾಂತರಾಜ ಗೋಗಿ(Shantaraj gogi) ಗುರುವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡರು.
ನಮ್ಮ ಕುಟುಂಬಸ್ಥರು ಸುಮಾರು 1960 ರಿಂದ ಇಲ್ಲಿ ವಾಸವಿದ್ದು, ವ್ಯಾಪಾರ ಉದ್ದಿಮೆ ಮಾಡುತ್ತಾ ಜೀವನ ಮಾಡುತ್ತಿದ್ದೇವೆ. ಇದರೊಂದಿಗೆ ಸಮಾಜ ಸೇವೆ ಮಾಡಿಕೊಂಡು ಬಂದಿದ್ದೇವೆ. ಬಿಸಿಲಿನ ಬೇಗೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಕುಟುಂಬದಿಂದ ನಮ್ಮ ಮನೆಯ ಬಳಿ ನಮ್ಮದೇ ಜಾಗದಲ್ಲಿ ನಿನ್ನೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದಾಗ ಅದೇ ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಕುಟುಂಬದ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ಮಾಡಿದ್ದಾರೆ. ಸುಮಾರು 20-30 ಸಾವಿರ ಮೌಲ್ಯದ ಸಾಮಗ್ರಿ ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದರು.
ವಿಧವೆಗೆ ಬಾಳು ಕೊಡುವುದಾಗಿ ಪೊಲೀಸಪ್ಪನಿಂದ ಮಹಾ ಮೋಸ: ಮೂರು ಬಾರಿ ಗರ್ಭಪಾತ.!
ನಮ್ಮ ಏಳಿಗೆ ಸಹಿಸದೇ ಹಾಗೂ ಆಸ್ತಿ ವಿಚಾರವಾಗಿ ರವಿಕುಮಾರ ಸೇಬಿನಕಟ್ಟಿ(Ravikumar sebinakatte), ಮಂಜುನಾಥ ನಾಲಗಾರ, ಈರಪ್ಪ ಅಗಸರ, ಕಂದಕೂರಪ್ಪ ವಾಲ್ಮೀಕಿ, ಐಬತ್ತಿ ಖಾಜಾ ಮೈನುದ್ದೀನ, ಶೇಖ ಆಲಂ ಕಲಬುರಗಿ, ಗ್ಯಾರೇಜ್ ಮೇಸ್ತ್ರಿ ಮುಲ್ಲಾ ಹೀಗೆ ಕೆಲ ವ್ಯಕ್ತಿಗಳು 20 ವರ್ಷದಿಂದ ಕಿರುಕುಳ ನೀಡುತ್ತಿದ್ದಾರೆ ಎಂದರು.
ಬುಧವಾರ ರಾತ್ರಿ ನಡೆದ ಘಟನೆಗೆ ಸಂಬಂದಿಸಿದಂತೆ ಪೊಲೀಸರಿಗೆ ಕರೆ ಮಾಡಿದ್ದು 112 ವಾಹನ ಬಂದು ತಪಾಸಣೆ ಮಾಡಿದೆ. ರಾತ್ರಿ ಪ್ರಕರಣ ದಾಖಲಿಸಿಕೊಂಡಿಲ್ಲ, ಬೆಳಗ್ಗೆ ಕೊಡಲು ಹೋದರೆ ತೆಗೆದುಕೊಳ್ಳೊಲ್ಲ, ಸಿಪಿಐ ಹೇಳಿದರೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇದರಿಂದ ನನ್ನ ಮಗ ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳದ ಕೆಎಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದರು.
ಅಲ್ಪಸಂಖ್ಯಾತರಾದ (ಜೈನ್) ನಮಗೆ ರಕ್ಷಣೆ ನೀಡಿ ನ್ಯಾಯ ಸಿಗದೇ ಇದ್ದಲ್ಲಿ ದಯಾಮರಣಕ್ಕೆ ಅನುಮತಿ ಕೊಡಿ ಎಂದು ರಾಜ್ಯಪಾಲರಿಗೆ, ಎಸ್ಪಿ ಹಾಗೂ ಸರ್ಕಾರಕ್ಕೆ ಮನವಿ ಕಳುಹಿಸುತ್ತಿದ್ದೇವೆ ಎಂದು ತಿಳಿಸಿದರು.
ಗಮನ ಬೇರೆಡೆ ಸೆಳೆದು .3.15 ಲಕ್ಷ ಕಳ್ಳತನ
ಕೊಟ್ಟೂರು: ಬ್ಯಾಂಕ್‌ನಿಂದ ಹಣ ಪಡೆದುಕೊಂಡು ದ್ವಿಚಕ್ರ ವಾಹನದಲ್ಲಿ ಹೋಗಲು ಅನುವಾಗುತ್ತಿದ್ದಂತೆ ಸವಾರರ ಗಮನವನ್ನು ಬೇರೆಡೆ ಸೆಳೆದು .3.15 ಲಕ್ಷ ದೋಚಿಕೊಂಡು ಪರಾರಿಯಾದ ಘಟನೆ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್ ಟೆನ್ಶನ್: ಟಿಕೆಟ್‌ಗಾಗಿ ಸಂಸದ ಕರಡಿ ಸಂಗಣ್ಣ ಕಸರತ್ತು
ಪಟ್ಟಣದ ಗುರುದೇವ ಪ್ರೌಢಶಾಲೆಯ ಗುಮಾಸ್ತ ಸುರೇಶ, ಶಾಲಾ ಸಿಬ್ಬಂದಿಗೆ ಮಾಚ್‌ರ್ ತಿಂಗಳ ಸಂಬಳ ನೀಡುವ ಸಂಬಂಧ ಯುನಿಯನ್ ಬ್ಯಾಂಕ್‌ನಿಂದ .3.15 ಲಕ್ಷ ಡ್ರಾ ಮಾಡಿಕೊಂಡು ಬ್ಯಾಂಕ್‌ನ ಮುಂಭಾಗದಲ್ಲಿ ನಿಲ್ಲಿಸಿದ್ದ ತಮ್ಮ ದ್ವಿಚಕ್ರ ವಾಹನ ಏರಲು ಮುಂದಾಗುತ್ತಿದ್ದಂತೆ ಸುರೇಶರ ಗಮನವನ್ನು ಅಪರಿಚಿತ ವ್ಯಕ್ತಿಗಳು ನಿಮ್ಮ .10 ಬಿದ್ದಿದೆ, ತೆಗೆದುಕೊಳ್ಳಿ ಎಂದಿದ್ದಾರೆ. ಆಗ .10 ಹಣ ಪಡೆಯಲು ಸುರೇಶ ಮುಂದಾಗುತ್ತಿದ್ದಂತೆ ದ್ವಿಚಕ್ರ ವಾಹನದಲ್ಲಿರಿಸಿದ್ದ ಬ್ಯಾಂಕ್‌ನಿಂದ ಬಿಡಿಸಿಕೊಂಡು ಬಂದಿದ್ದ .3.15 ಲಕ್ಷವನ್ನು ಕ್ಷಣಮಾತ್ರದಲ್ಲಿ ಅಪರಿಚಿತರು ಅಪಹರಿಸಿಕೊಂಡು ಪಲಾಯನಗೈದಿದ್ದಾರೆ. ಈ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗುರುದೇವ ವಿದ್ಯಾಪರಿಷತ್ ಕಾರ್ಯದರ್ಶಿ ಪಿ. ಶ್ರೀಧರ ಶೆಟ್ಟಿತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ