ಸ್ವಂತ ಮಗನನ್ನೇ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿದ ತಂದೆಗೆ 10 ವರ್ಷ ಜೈಲು ಶಿಕ್ಷೆ ಸಹಿತ ದಂಡವನ್ನು ವಿಧಿಸಿ ತೀರ್ಪು ನೀಡಿದ ನ್ಯಾಯಾಲಯ.
ಬೆಳಗಾವಿ(ಫೆ.19): ಸ್ವಂತ ಮಗನನ್ನೇ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿದ ತಂದೆಗೆ 10 ವರ್ಷ ಜೈಲು ಶಿಕ್ಷೆ ಸಹಿತ ದಂಡವನ್ನು ವಿಧಿಸಿ ನಗರದ 11ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ.
ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ಶಿವಪ್ಪ ಗಂಗಪ್ಪ ಮುದಕವಿ ಶಿಕ್ಷೆಗೆ ಗುರಿಯಾದವ. ಈತನ ಪುತ್ರ ಗಂಗಾಧರ ಮುದಕವಿ ಕೊಲೆಯಾದವ. ಅಪರಾಧಿ ಶಿವಪ್ಪನಿಗೆ ಗಂಗಾಧರ ಹಾಗೂ ವಿಠ್ಠಲ ಇಬ್ಬರು ಮಕ್ಕಳಿದ್ದು, ಮೇಲಿಂದ ಮೇಲೆ ಸರಿಯಾಗಿ ಕೆಲಸ ಮಾಡುವುದಿಲ್ಲ, ಊರಲ್ಲಿ ಬೇಕಾಬಿಟ್ಟಿಯಾಗಿ ತಿರುಗಾಡಿತ್ತಿಯಾ. ನಿಮ್ಮನ್ನು ಕೊಂದು ಬಿಡುತ್ತೇನೆ ಎಂದು ಗಂಗಾಧರನೊಂದಿಗೆ ಜಗಳವಾಡಿದ್ದಾನೆ. ಅದೇ ಕೋಪದಲ್ಲಿ 2018 ಮಾಚ್‌ರ್ 27 ರಂದು ಮೃತ ಗಂಗಾಧರ ಮುದಕವಿ ಸಾಲಾಪೂರ ಕ್ರಾಸ್ ಹತ್ತಿರ ಇರುವ ದಾಬಾದಲ್ಲಿ ಊಟದ ಪಾರ್ಸಲ… ತೆಗೆದುಕೊಂಡು ದ್ವಿಚಕ್ರ ವಾಹನ ಮೇಲೆ ಹೊರಟಿದ್ದಾನೆ. ಇದೇ ವೇಳೆ ಅಪರಾಧಿ ಶಿವಪ್ಪ ತನ್ನ ಮಗನಾದ ಗಂಗಾಧರನನ್ನು ಕೊಲೆ ಮಾಡುವ ಉದ್ದೇಶದಿಂದ ಪರವಾನಗಿ ಇಲ್ಲದೇ ಟ್ರ್ಯಾಕ್ಟರ್ ತೆಗೆದುಕೊಂಡು ಸಾಲಾಪೂರ ಕ್ರಾಸ್ ಕಡೆಗೆ ಎದುರಿಗೆ ಬಂದು ನೈನಾ ಹಳ್ಳದ ಸೇತುವೆ ಹತ್ತಿರ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿದ್ದಾನೆ.
40ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕರೆ ಮಾಡಿದ್ದ ಡೆಲಿವರಿ ಬಾಯ್ ಅರೆಸ್ಟ್!
ಈ ಕೃತ್ಯದ ಕುರಿತು ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಅಂದಿನ ಸಿಪಿಐ ಶ್ರೀನಿವಾಸ ಹಾಂಡ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಕೆ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ 11ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಮಾಕಾಂತ ಚವ್ಹಾಣ ಅವರು, ಅಪರಾಧಿಗೆ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಜತೆಗೆ .5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಶೈಲಜಾ ಪಾಟೀಲ ವಾದ ಮಂಡಿಸಿದ್ದರು.